ಚೆನ್ನೈ: ದಕ್ಷಿಣ ಭಾರತೀಯ ಚಿತ್ರನಟಿ ನಯನತಾರಾ ಬ್ಯೂಟಿ ಪ್ರಾಡಕ್ಟ್ ಉದ್ಯಮಕ್ಕೆ ಕಾಲಿಟ್ಟಿದ್ದಾರೆ. ತಮ್ಮದೇ ಸ್ವಂತ ಲಿಪ್ ಬಾಮ್ ಉತ್ಪನ್ನವನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ.
ಖ್ಯಾತ ಡರ್ಮಟಾಲಜಿಸ್ಟ್ ಡಾ.ರಂಜಿತಾ ರಾಜನ್ ಅವರೊಂದಿಗೆ ಸೇರಿ ನಯನತಾರಾ 'ದಿ ಲಿಪ್ ಬಾಮ್ ಕಂಪನಿ' ಹೊರತಂದಿದ್ದಾರೆ. ಜಗತ್ತಿನಲ್ಲೇ ಅತಿಹೆಚ್ಚಿನ ಲಿಪ್ ಬಾಮ್ ಕಲೆಕ್ಷನ್ ಅನ್ನು ಸಂಸ್ಥೆ ಹೊಂದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದು ಮಹಿಳೆಯರು ಮತ್ತು ಪುರುಷರು ಬಳಸುವ ಉತ್ಪನ್ನ ಎನ್ನುವುದು ವಿಶೇಷ.
ಈ ಉತ್ಪನ್ನ ಬಿಡುಗಡೆ ಸಂದರ್ಭ ಮಾತನಾಡಿದ ನಯನತಾರ, ತಾವು ಸೌಂದರ್ಯವರ್ಧಕ ಉತ್ಪನ್ನಗಳ ವಿಷಯಕ್ಕೆ ಬಂದಾಗ ತಾವು ರಾಜಿಯಾಗುವುದಿಲ್ಲ. ಎಕ್ಸ್ಟ್ರಾರ್ಡಿನರಿ ಪ್ರಾಡಕ್ಟ್ ಗೆ ಹೆಚ್ಚಿನ ಮನ್ನಣೆ ನೀಡುತ್ತೇನೆ. ಅದರಂತೆಯೇ ನನ್ನ ಲಿಪ್ ಬಾಮ್ ಸಂಸ್ಥೆ ಈ ಉತ್ಪನ್ನ ಹೊರತಂದಿದೆ.