ಸಿನಿಮಾ ಸುದ್ದಿ

ಪದ್ಮ ಪುರಸ್ಕಾರಕ್ಕೆ ನಟ ಅನಂತನಾಗ್ ಹೆಸರು ಸೂಚಿಸೋಣ: ರಿಷಭ್ ಶೆಟ್ಟಿ ಮನವಿ

Raghavendra Adiga

ಮುಂಬರುವ ಪದ್ಮ ಪುರಸ್ಕಾರಕ್ಕೆ ಅಭಿಯ ಬ್ರಹ್ಮ ನಟ ಅನಂತನಾಗ್ ಅವರ ಹೆಸರು ನಾಮನಿರ್ದೇಶಿಸಲು ನಾವೆಲ್ಲರೂ ಒಂದಾಗೋಣ ಎಂದು ನಟ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ.

ದೇಶದ ಅತ್ಯುನ್ನತ ಗೌರವಗಳಾದ ಪದ್ಮಭೂಷಣ, ಪದ್ಮವಿಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳಿಗೆ ಮುಂದಿನ ವರ್ಷ ಯಾರು ಭಾಜನರಾಗಬೇಕು ಎಂಬ ಆಯ್ಕೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಜನತೆಗೇ ನೀಡಿರುವ ಹಿನ್ನೆಲೆಯಲ್ಲಿ ರಿಷಭ್ ಶೆಟ್ಟಿ ಟ್ವಿಟರ್ ಮೂಲಕ ಆಗ್ರಹಿಸಿದ್ದಾರೆ.

"ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬ ಈ ಪ್ರಯತ್ನದಲ್ಲಿ ನಾವೆಲ್ಲರೂ ಒಂದಾಗಿ ಕೈ ಜೋಡಿಸೋಣಾ. ಈ ಮಾಹಿತಿಯನ್ನು ಇಂದಿನಿಂದಲೇ ಹೆಚ್ಚೆಚ್ಚು ಜನರಿಗೆ ತಲುಪಿಸೋಣ" ಎಂದ ನಟ  #AnanthnagForPadma ಎಂಬ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ಸಹ ಹಾಕಿದ್ದಾರೆ.

ಅಲ್ಲದೆ ನಟ ರಕ್ಷಿತ್ ಶೆಟ್ಟಿ ಸಹ ಇದೇ ಬಗೆಯ ಮನವಿ ಮಾಡಿದ್ದು "ಅಪ್ರತಿಮ ನಟನಿಗೆ ಅತ್ಯುನ್ನತ ಪ್ರಶಸ್ತಿಯೊಂದು ಗುಡಿಯ ಮೇಲೆ ಕಲಶವಿಟ್ಟಂತೆ. ಹಿರಿಯ ನಟ ಶ್ರೀ ಅನಂತನಾಗ್ ಅವರಿಗೆ ಪದ್ಮಪ್ರಶಸ್ತಿ ನೀಡಬೇಕೆಂಬುದು ನನ್ನ ಹಾಗೂ ಕನ್ನಡಿಗರ ಆಶಯ. ಈ ಪ್ರಯತ್ನಕ್ಕೆ ನಾವೆಲ್ಲರೂ ಒಂದಾಗಿ ಬೆಂಬಲ ಸೂಚಿಸೋಣ" ಎಂದಿದ್ದಾರೆ.

SCROLL FOR NEXT