ಸಿನಿಮಾ ಸುದ್ದಿ

ಕೊರೋನಾ ಸಂಕಷ್ಟ: ಹುಟ್ಟೂರಿನ ಜನರಿಗೆ ನಿರ್ದೇಶಕ ಆರ್.ಚಂದ್ರು ನೆರವು

Raghavendra Adiga

ಕನ್ನಡ ಚಲನಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿರುವ ನಿರ್ದೇಶಕ ಆರ್.ಚಂದ್ರು ಕೊರೋನ ಸಂಕಷ್ಟ ಸಮಯದಲ್ಲಿ ಉತ್ತಮ ಕಾರ್ಯ ಮಾಡಿದ್ದಾರೆ.

ಚಲನಚಿತ್ರ ಕ್ಷೇತ್ರವಲ್ಲದೇ ತಾವು ಹುಟ್ಟಿಬೆಳೆದ ಚಿಕ್ಕಬಳ್ಳಾಪುರ ಕೇಶಾವರ ಗ್ರಾಮದ ಸುಮಾರು ಸಾವಿರ ಮನೆಗಳಿಗೆ 25 ಕೆಜಿಯ ಅಕ್ಕಿ ಮೂಟೆ ನೀಡಿದ್ದಾರೆ

"ನಾನು ಸಹ ರೈತನ ಮಗ, ಕೊರೋನಾ ಕಾಲದಲ್ಲಿ ನನ್ನೂರ ಜನರಿಗೆ ನೆರವಾಗುವುದು ನನ್ನ ಧರ್ಮ. ಹುಟ್ಟೂರಿನ ಮಣ್ಣಿನ ಋಣ ತೀರಿಸಲು ನಾನು ಎಂದೆಂದಿಗೂ ಮುಂದಾಗುತ್ತೇನೆ" ಎಂದು ನಿರ್ದೇಶಕ ಚಂದ್ರು ಹೇಳಿದ್ದಾರೆ.

ಸಿನಿರಂಗದ ಅನೇಕರಿಗೆ ಸಹ ಚಂದ್ರು ಸಹಾಯ ಮಾಡಿದ್ದಾರೆ. ಅವರಲ್ಲದೆ ಉಪೇಂದ್ರ, ಹರ್ಷುಜಾ ಪೂಣಚ್ಚ, ನಟ ಭುವನ್ ಪೊನ್ನಣ್ನ, ವಿಜಯ್ ಕಿರಗಂದೂರು, ಸತೀಶ್ ನೀನಾಸಂ, ಯಶ್ ಸೇರಿ ಅನೇಕರು ಸಾರ್ವಜನಿಕರಿಗೆ ನೆರವಾಗುತ್ತಿದ್ದಾರೆ.

"ತಾಜ್ ಮಹಲ್", "ಪ್ರೇಮ್ ಕಹಾನಿ", "ಚಾರ್ ಮಿನಾರ್", "ಬ್ರಹ್ಮ", "ಮೈಲಾರಿ", "ಐ ಲವ್ ಯೂ" ಸಿನಿಮಾಗಳ ಮೂಲಕ ಹೆಸರಾಗಿರುವ ನಿರ್ದೇಶಕ ಚಂದ್ರು ಸದ್ಯ ಉಪೇಂದ್ರ ಅವರೊಂದಿಗೆ "ಕಬ್ಜ" ಚಿತ್ರದ ನಿರ್ದೇಶನ ಕೆಲಸದಲ್ಲಿ ತೊಡಗಿದ್ದಾರೆ.

SCROLL FOR NEXT