ಸುರೇಶ್ ಚಂದ್ರ 
ಸಿನಿಮಾ ಸುದ್ದಿ

ಪತ್ರಕರ್ತ, ಹಿರಿಯು ಚಲನಚಿತ್ರ ನಟ ಸುರೇಶ್ ಚಂದ್ರ ಕೊರೋನಾದಿಂದ ನಿಧನ

ಪತ್ರಕರ್ತ, ಹಿರಿಯ ನಟ ಸುರೇಶ್ ಚಂದ್ರ ಅವರು ಕೊರೋನಾದಿಂದ ನಿಧನರಾಗಿದ್ದಾರೆ. 

ಪತ್ರಕರ್ತ, ಹಿರಿಯ ನಟ ಸುರೇಶ್ ಚಂದ್ರ ಅವರು ಕೊರೋನಾದಿಂದ ನಿಧನರಾಗಿದ್ದಾರೆ. 

ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್ ಚಂದ್ರ ಇಂದು ಅಪೋಲೋ‌ ಆಸ್ಪತ್ರೆಯಲ್ಲಿ ಕೊನೆಯಿಸಿರೆಳೆದಿದ್ದಾರೆ.

ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಸುರೇಶ್ ಚಂದ್ರ  ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಲಿಂಗೇನಹಳ್ಳಿಯಲ್ಲಿ ನೆರವೇರಲಿದೆ ಎಂದು ಮೂಲಗಳು ಹೇಳಿದೆ.

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ "ಚೆಲುವಿನ ಚಿತ್ತಾರ" ಸಿನಿಮಾದಿಂದ ಪ್ರಸಿದ್ದವಾಗಿದ್ದ ಸುರೇಶ್ ಚಂದ್ರ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇನ್ನು 80ರ ದಶಕದಿಂದ ಸಿನಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಚಂದ್ರ "ಸಂಜೆವಾಣಿ" ಪತ್ರಿಕೆಯಲ್ಲಿದ್ದು ಕಳೆದ ವರ್ಷ ನಿವೃತ್ತರಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಹಾಸನ: ಜನರಿಗೆ ತೊಂದರೆ ನೀಡುವ ಎಲ್ಲಾ ಸಂಘಟನೆಗಳ ವಿರುದ್ಧ ಕ್ರಮ- ಸಿಎಂ ಸಿದ್ದರಾಮಯ್ಯ

ಕೋಲಾರ: ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆ! ಕೊಲೆಯೋ, ಆತ್ಮಹತ್ಯೆಯೋ?

ಮಹಾಭಾರತದ 'ಕರ್ಣ', ವಿಷ್ಣು ವಿಜಯ 'ಅಮಿತ್' ಪಾತ್ರಧಾರಿ ನಟ Pankaj Dheer ಸಾವು!

ಕೊನೆಗೂ ದೊಡ್ಡ ಸಿಗ್ನಲ್?.. 'KGF Chapter 3 ಡ್ರಾಫ್ಟ್ ರೆಡಿ..': ಪ್ರಶಾಂತ್ ನೀಲ್ ಪೋಸ್ಟ್ ವೈರಲ್! ಅಸಲಿಯತ್ತೇ ಬೇರೆ!

ಬಿಹಾರ ವಿಧಾನ ಸಭೆ ಚುನಾವಣೆ: JDU ಮೊದಲ ಲಿಸ್ಟ್ ರಿಲೀಸ್; 5 ಸಚಿವರು ಸೇರಿ 51 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

SCROLL FOR NEXT