ರಾಮು-ಮಾಲಾಶ್ರೀ-ಜಗ್ಗೇಶ್ 
ಸಿನಿಮಾ ಸುದ್ದಿ

ತಲೆ ಬಾಗಿ ಕ್ಷಮೆ ಕೇಳುವೆ: ಪತಿಯನ್ನು ಕಳೆದುಕೊಂಡ ನಟಿ ಮಾಲಾಶ್ರೀಗೆ ಜಗ್ಗೇಶ್ ಸಾಂತ್ವನ

ಕೊರೋನಾ ಮಹಾಮಾರಿಯಿಂದಾಗಿ ಪತಿಯನ್ನು ಕಳೆದುಕೊಂಡ ನಟಿ ಮಾಲಾಶ್ರೀ ಅವರಿಗೆ ನಟ ಜಗ್ಗೇಶ್ ಸಾಂತ್ವನ ಹೇಳಿದ್ದಾರೆ.

ಬೆಂಗಳೂರು: ಕೊರೋನಾ ಮಹಾಮಾರಿಯಿಂದಾಗಿ ಪತಿಯನ್ನು ಕಳೆದುಕೊಂಡ ನಟಿ ಮಾಲಾಶ್ರೀ ಅವರಿಗೆ ನಟ ಜಗ್ಗೇಶ್ ಸಾಂತ್ವನ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿದ್ದು, 'ನಿಮ್ಮ ಕಷ್ಟದಲ್ಲಿ ಭಾಗಿಯಾಗುವ ಯೋಗ್ಯತೆ ಇಲ್ಲದಂತೆ ಮಾಡಿದ ಈ ಸಮಯಕ್ಕೆ ತಲೆ ಬಾಗಿ ಕ್ಷಮೆ ಕೋರುವೆ. ತಮ್ಮ ನೋವಿಗೆ ಸಾಂತ್ವನ ಹೇಳುವ ಶಕ್ತಿ ಮಾತ್ರ ಉಳಿದಿದೆ. ಕನ್ನಡ ಚಿತ್ರರಂಗಕ್ಕೆ ಅನನ್ಯ ಸೇವೆ ಮಾಡಿ ಅನೇಕ ಚಿತ್ರ ಕಾರ್ಮಿಕರಿಗೆ ಅನ್ನ ನೀಡಿದ ಮಹನೀಯ ನನ್ನ ತಮ್ಮ ರಾಮು. ಅವನ ಆತ್ಮಕ್ಕೆ ಶಾಂತಿ ಕೋರುವೆ ಮನೆಯಲ್ಲಿಯೇ' ಎಂದಿದ್ದಾರೆ.

'ರಾಮು ಮತ್ತೆ ಹುಟ್ಟಿಬರಲಿ ಎನ್ನುವುದು ನನ್ನ ಪ್ರಾರ್ಥನೆ. ದಯಮಾಡಿ ಈ ಸಂಕಷ್ಟವನ್ನು ಎದುರಿಸಿ ಮಕ್ಕಳನ್ನು ರಾಮು ಎತ್ತರಕ್ಕೆ ಬೆಳೆಸಿ. ನಿಮ್ಮ ಜೊತೆ ನಾವು ಉದ್ಯಮದ ಸ್ನೇಹಿತರು ಎಲ್ಲರೂ ಇರುತ್ತೇವೆ. ಮುಂದಿನ ಸಾಂಸಾರಿಕ ಜೀವನ ನಿಭಾಯಿಸುವ ಶಕ್ತಿ ಆ ರಾಯರು ನಿಮಗೆ ನೀಡಲಿ' ಎಂದು ಹೇಳಿದ್ದಾರೆ.

ಕಳೆದ ಸೋಮವಾರ ಕನ್ನಡದ ಕೋಟಿ ನಿರ್ಮಾಪಕ ರಾಮು ಅವರು ಕೊರೋನಾಗೆ ಬಲಿಯಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: 48 ಗಂಟೆಗಳಲ್ಲಿ ಹೋರ್ಮುಜ್ ಜಲಸಂಧಿ ತೆರೆಯದಿದ್ದರೆ ಇರಾನ್‌ನಲ್ಲಿ ನರಕ ಸೃಷ್ಟಿಸುತ್ತೇವೆ; Trump ಕೊನೇಯ ಎಚ್ಚರಿಕೆ!

ಮಾಗಡಿ Congress ಶಾಸಕ ಹೆಚ್​​.ಸಿ ಬಾಲಕೃಷ್ಣಗೆ ಕೋರ್ಟ್ ಶಾಕ್​​: ಜಾಮೀನು ರಹಿತ ವಾರೆಂಟ್ ಜಾರಿ

'ನೀವೇನು ಸುರಕ್ಷಿತ ಅಲ್ಲ': ಟ್ರಂಪ್ 48 ಗಂಟೆಗಳ ಕೊನೆ ಎಚ್ಚರಿಕೆ ಬೆನ್ನಲ್ಲೆ CIA Station ಗೆ ಡ್ರೋನ್ ನುಗ್ಗಿಸಿ ಇರಾನ್; 1 ನಿಮಿಷದ ಅಂತರದಲ್ಲಿ 2 ಸ್ಫೋಟ!

ಪಶ್ಚಿಮ ಏಷ್ಯಾ ಸಂಘರ್ಷದ ಬಗ್ಗೆ ಕಾಂಗ್ರೆಸ್‌ 'ಪ್ರಚೋದನಕಾರಿ' ಹೇಳಿಕೆ; ಭಾರತೀಯರ ಸುರಕ್ಷತೆಗೆ ಅಪಾಯ: ಪ್ರಧಾನಿ ಮೋದಿ

Sex Video ಪ್ರಕರಣ: ಡಿಸಿಎಂಗೆ 17 ಬಾರಿ ಕರೆ ಮಾಡಿದ ಸ್ವಯಂ ಘೋಷಿತ 'ದೇವಮಾನವ'; CDR ಬಿಡುಗಡೆ

SCROLL FOR NEXT