ಸಿನಿಮಾ ಸುದ್ದಿ

ಕಲೆಗೆ ಯಾವುದೇ ಗಡಿ ಇಲ್ಲ: ನಟ ವಿಕಾಸ್ ವಸಿಷ್ಠ

Vishwanath S

ಬರಹಗಾರ ಪ್ರವೀಣ್ ಕಂದ್ರೆಗುಲಾ ನಿರ್ದೇಶನದ ಚೊಚ್ಚಲ ಚಿತ್ರ ತೆಲುಗಿನ ಸಿನೆಮಾ ಬಂಡಿಯಲ್ಲಿ ನಟಿಸಿರುವ ಕನ್ನಡ ನಟ ವಿಕಾಸ್ ವಸಿಷ್ಠರ ತಮ್ಮ ನಟನೆಯ ಮೂಲಕ ಎಲ್ಲ ಗಮನ ಸೆಳೆದಿದ್ದಾರೆ. 

ಕಾಮಿಡಿ ಕಮ್ ಡ್ರಾಮ ಸಿನಿಮಾ ಬಂಡಿ ಹೆಚ್ಚು ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬರುತ್ತಿದ್ದು ವಿಕಾಸ್ ಅವರ ಖುಷಿಗೆ ಕಾರಣವಾಗಿದೆ. ಕಲೆಗೆ ಯಾವುದೇ ಗಡಿ ಇಲ್ಲ, ಅದಕ್ಕೆ ಇದೇ ಒಂದು ಉದಾಹರಣೆ ಎಂದರು. "ನನಗೆ ಸಿಕ್ಕಿರುವ ಮಾನ್ಯತೆ ಮತ್ತು ಜನಪ್ರಿಯತೆಯ ಹೊರತಾಗಿ, ಅಂತಹ ಚಿತ್ರದಲ್ಲಿ ಒಂದು ಭಾಗವಾಗಿರುವುದಕ್ಕೆ ತೃಪ್ತಿ ಇದೆ ಎಂದು ವಿಕಾಸ್ ವಸಿಷ್ಠ ಹೇಳಿದ್ದಾರೆ. 

ನಾವು ಉತ್ತಮ ಚಿತ್ರವನ್ನು ಮಾಡಿದ್ದೇವೆ ಎಂದು ನಾವು ಭಾವಿಸಿದ್ದೆವು, ಆದರೆ ಇದು ಅತ್ಯುತ್ತಮ ಚಿತ್ರವೆಂದು ಪರಿಗಣಿಸಲಾಗಿದೆ. ಇನ್ನು ದೇಶದಾದ್ಯಂತ ಪ್ರೇಕ್ಷಕರ ಗಮನ ಸೆಳೆದಿದೆ. ತೆಲುಗಿನಲ್ಲಿ ನನ್ನ ಮೊದಲ ಚಿತ್ರ ಎಂಬುದಕ್ಕೆ ಖುಷಿಯಿದೆ. ಸಿನೆಮಾ ಬಂಡಿಯ ಭಾಗವಾಗಿದ್ದ ತಮ್ಮ ಅನುಭವವನ್ನು ಹಂಚಿಕೊಂಡ ವಿಕಾಸ್ ಇದು ಆಕಸ್ಮಿಕವಾಗಿ ಸಿಕ್ಕ ಪಾತ್ರವಾಗಿದೆ ಎಂದರು. 

ಈ ಹಿಂದೆ ನಾನು ತಮಿಳಿನ ಸಣ್ಣ ಜಾಹೀರಾತುವಿನ ಚಿತ್ರೀಕರಣಕ್ಕಾಗಿ ಪ್ರವೀಣ್ ಜೊತೆ ಕೆಲಸ ಮಾಡಿದ್ದೇ. ಅಲ್ಲಿ ಯಾರಿಗಾದರೂ ತೆಲುಗು ಬರುತ್ತದೆ ಎಂದು ಕೇಳಿದ್ದರು. ನಾನು ತೆಲುಗಿನಲ್ಲಿ ನಿರರ್ಗಳವಾಗಿ ಮಾತನಾಡುತ್ತೇನೆ ಎಂದು ತಿಳಿದ ಮೇಲೆ ನಮ್ಮಿಬ್ಬರ ಮಧ್ಯೆ ಆತ್ಮೀಯತೆ ಹೆಚ್ಚಾಯಿತು. ನಂತರ ಕೆಲ ಕಿರುಚಿತ್ರಗಳನ್ನು ಮಾಡಿ ಅದನ್ನು ನಿರ್ಮಾಪಕರಿಗೆ ತೋರಿಸಲಾಯಿತು. ತೆಲುಗು-ಕನ್ನಡ ಆಡುಭಾಷೆಯ ಮಿಶ್ರಣ ಮಾಡಲಾಗಿದ್ದು ಅದು ಚಿತ್ರಕ್ಕೆ ಚೆನ್ನಾಗಿ ಕೆಲಸ ಮಾಡಿದೆ ಎಂದು ವಿಕಾಸ್ ವಿವರಿಸುತ್ತಾರೆ.

ಐಟಿ ಕ್ಷೇತ್ರದಿಂದ ಬಂದಿದ್ದ ವಿಕಾಸ್ ಗೆ ಸಿನೆಮಾದ ಬಗ್ಗೆ ಆಸಕ್ತಿ ಇರಲಿಲ್ಲ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. 'ನಾನು ಚಿತ್ರರಂಗಕ್ಕೆ ಬಂದಿದ್ದು 'ಆಕಸ್ಮಿಕವಾಗಿ ಅದೃಷ್ಟ' ಎಂದರು. ಒಂಬತ್ತು ವರ್ಷಗಳಿಂದ ನಾನು ಸಿನಿಮಾ ಕ್ಷೇತ್ರದಲ್ಲಿ ಕಷ್ಟಪಟ್ಟಿದ್ದೇನೆ. ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಬಂದಿದ್ದವು ಆದರೆ ಆ ಯೋಜನೆಗಳನ್ನು ಅರ್ಧಕ್ಕೆ ನಿಂತುಹೋಗುತ್ತಿದ್ದವು. ಅಂತಹ ಅನುಭವಗಳು ನನಗೆ ತಾಳ್ಮೆಯನ್ನು ಕಲಿಸಿತು. ಈ ವೃತ್ತಿಯಲ್ಲಿ ಇದು ಸಂಭವಿಸುತ್ತದೆ ಎಂದು ನಾನು ತಿಳಿದುಕೊಂಡೆ. ಟಾಲಿವುಡ್‌ನ ಒಂದೆರಡು ಚಲನಚಿತ್ರ ನಿರ್ಮಾಪಕರು ಈಗ ಸಂಪರ್ಕಿಸಿದ್ದಾರೆ ಮತ್ತು ಪ್ರಸಿದ್ಧ ಪ್ರೊಡಕ್ಷನ್ ಹೌಸ್‌ನೊಂದಿಗೆ ಮಾತುಕತೆ ನಡೆಸುತ್ತಿದ್ದು ಎಲ್ಲವೂ ಆರಂಭಿಕ ಹಂತದಲ್ಲಿದೆ ಎಂದು ವಿಕಾಸ್ ತಿಳಿಸಿದ್ದಾರೆ. 

SCROLL FOR NEXT