ಪುನೀತ್ ರಾಜಕುಮಾರ್ 
ಸಿನಿಮಾ ಸುದ್ದಿ

ಗುರುವಾರ ರಾತ್ರಿ ಗುರುಕಿರಣ್ ಬರ್ತ್ ಡೇ ಪಾರ್ಟಿ: ಅಪ್ಪು ಜೊತೆ ಕಳೆದ ಸಮಯದ ಬಗ್ಗೆ ರಮೇಶ್ ಅರವಿಂದ್ ಮಾತು!

ಅಪ್ಪು ಅವರನ್ನು ಒಮ್ಮೆ ಭೇಟಿ ಮಾಡಿದ್ದರೆ ಜೀವಮಾನವಿಡೀ ಇಷ್ಟ ಪಡುತ್ತಿದ್ದಿರಿ. ಅವರು ಸರಳ, ವಿನಮ್ರ ಮತ್ತು ಪ್ರೀತಿಯ ವ್ಯಕ್ತಿ. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು

ಅಪ್ಪು ಅವರನ್ನು ಒಮ್ಮೆ ಭೇಟಿ ಮಾಡಿದ್ದರೆ ಜೀವಮಾನವಿಡೀ ಇಷ್ಟ ಪಡುತ್ತಿದ್ದಿರಿ. ಅವರು ಸರಳ, ವಿನಮ್ರ ಮತ್ತು ಪ್ರೀತಿಯ ವ್ಯಕ್ತಿ. ಅವರು ಎಲ್ಲರೊಂದಿಗೆ ಸುಲಭವಾಗಿ ಬೆರೆಯುತ್ತಿದ್ದರು. ಹಾಗೂ ಗೌರವ ಮತ್ತು ಪ್ರೀತಿಯಿಂದ ಎಲ್ಲರ ಜೊತೆ ಮಾತನಾಡುತ್ತಿದ್ದರು, ಇದು ದಿವಂಗತ ನಟ ಪುನೀತ್ ಅವರ ಬಗ್ಗೆ ರಮೇಶ್ ಅರವಿಂದ್ ಮಾತು.

ಹಲವು ವರ್ಷಗಳ ಹಿಂದೆ ಅವರನ್ನು ಬಾಲ ಕಲಾವಿದರಾಗಿ 'ಕಾಣದಂತೆ ಮಾಯವಾದನೋ' ಹಾಡುತ್ತಿದ್ದಾಗ ಕಂಡ ಮುಗ್ದ ನಿಷ್ಕಲ್ಮಶ ನಗು, ಇನ್ನೂ ನೆನಪು ಮಾತ್ರ,  ಅವರ ನೈಜ ಹೃದಯಪೂರ್ಣ ನಗು ನಮ್ಮನ್ನು ಅವರತ್ತ ಸೆಳೆಯಿತು.

ಅವರು ವಿಧಿವಶರಾಗುವ ಹಿಂದಿನ ದಿನ ನಾವೆಲ್ಲಾ ಗುರುಕಿರಣ್ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದೆವು, ಸುಮಾರು 2 ಗಂಟೆ ಸಮಯ ಅವರೊಂದಿಗೆ, ಮಾತನಾಡುತ್ತಾ, ಹಾಡುತ್ತಾ  ಊಟ ಮಾಡಿ ನಗುತ್ತಾ ಕಾಲ ಕಳೆದವು, ಆ ವೇಳೆ ಅವರಿಗೆ ಯಾವುದೇ ಅನಾರೋಗ್ಯ ಸಮಸ್ಯೆ ತೋರಿರಲಿಲ್ಲ.

ಪಾರ್ಟಯಲ್ಲಿ  ಅವರು ಅಭಿನಯಿಸಿದ ಡಾಕ್ಯುಮೆಂಟರಿ ಕುರಿತಾಗಿ ವೀಡಿಯೋ ಕೂಡ ತೋರಿಸಿದ್ದರು,  ಇದನ್ನು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ಅವರು ಹೇಳಿದರು. ನಾನು ಟೈಟಲ್ ಬಗ್ಗೆ ಅವರನ್ನು ಕೇಳಿದಾಗ  ಗಂಧದಗುಡಿ ಎಂಬ ಕಾರ್ಡ್ ತೋರಿಸಿದರು ಎಂದು ರಮೇಶ್ ಅರವಿಂದ್ ಅವರು ಪುನೀತ್ ರಾಜ್‍ಕುಮಾರ್ ಜೊತೆಗೆ ಕಳೆದ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಗುರುಕಿರಣ್ ಬರ್ತಡೆ ಪಾರ್ಟಿಯಲ್ಲಿ ಮಕ್ಕಳ ವಿಷಯವಾಗಿ ಮಾತನಾಡಿದರು, ದೊಡ್ಡ ಮಗಳು ನ್ಯೂಯಾರ್ಕ್ ನಲ್ಲಿ ಡಿಸೈನ್ ನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಿದರು, ಇನ್ನೂ ಎರಡನೇಯ ಮಗಳ ಬಗ್ಗೆ ಮಾತನಾಡಿದ ಅವರು ನಾನು ಬೆಂಗಳೂರಿನಲ್ಲಿದ್ದಾಗಲೆಲ್ಲಾ ಆಕೆಯನ್ನು ಡ್ರೈವ್ ಗೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರು.

60 ಕಿಮೀ ಸೈಕಲ್ ಓಡಿಸುವುದಾಗಿ ಹೇಳಿದ ಅವರು ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಗಳ ಬಗ್ಗೆ ಮಾತನಾಡಿದೆವು. ಜೊತೆಗೆ ಸಾಕು ಪ್ರಾಣಿಗಳ ಬಗ್ಗೆ ಜೋಕ್ ಮಾಡಿದೆವು, ಅದಾದ ನಂತರ ಬಾದಾಮಿ ಬಿರಿಯಾನಿ ತಿಂದು ಬಾಯ್ ಬಹೇಳಿದ ಮನುಷ್ಯ ಬೆಳಗ್ಗೆ ಇಲ್ಲ ಎಂದರೇ ನಂಬುವುದಾದರೂ ಹೇಗೆ ಎಂದಿದ್ದಾರೆ.

ಅವರೊಂದಿಗೆ ಹಿಂದಿನ ದಿನ ಕಳೆದ ನೆನಪುಗಳು ಮಾತ್ರ ನಮ್ಮೊಂದಿಗಿವೆ,  ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಮೊದಲ ಅತಿಥಿ ಅವರಾಗಿದ್ದರು, ನಾವು ಮತ್ತು ಅವರ ಕುಟುಂಬದವರು ಹಲವಾರು ಬಾರಿ ಭೇಟಿಯಾಗಿದ್ದೇವೆ ಇನ್ನುಮುಂದೆ ಅವೆಲ್ಲಾ ಕೇವಲ ನೆನಪು ಮಾತ್ರ, ಅಪ್ಪುವಿನ ನಗುವೊಂದೆ ಅಮರ.

ಅಭಿಮಾನಿಗಳಿಗೆ ನನ್ನದೊಂದು ಸಂದೇಶವಿದೆ. ಅಗಲಿದ ಆತ್ಮಕ್ಕೆ ನೀವು ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿ ನಟ ಅಥವಾನಟಿಯ ಕನಿಷ್ಠ ಒಂದು ಶ್ಲಾಘನೀಯ ಗುಣವನ್ನು ಆರಿಸಿ ಮತ್ತು ಅದನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT