ರಶ್ಮಿಕಾ ಮಂದಣ್ಣ 
ಸಿನಿಮಾ ಸುದ್ದಿ

ತನಗಿಂತ ಕಿರಿಯರ ಜೊತೆ ಡೇಟಿಂಗ್ ವಿಚಾರ: ಪ್ರೇಮಕ್ಕೂ ವಯಸ್ಸಿಗೂ ಸಂಬಂಧವಿಲ್ಲ; ಅದು ಸಮಸ್ಯೆಯೇ ಅಲ್ಲ ಎಂದ ನಟಿ ರಶ್ಮಿಕಾ

'ನ್ಯಾಷನಲ್ ಕ್ರಶ್' ಎಂಬ ಹೆಸರು ಪಡೆದುಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಿಡುವಿಲ್ಲದ ನಾಯಕ ನಟಿಯಾಗಿದ್ದಾರೆ.

ಹೈದರಾಬಾದ್‌: 'ನ್ಯಾಷನಲ್ ಕ್ರಶ್' ಎಂಬ ಹೆಸರು ಪಡೆದುಕೊಂಡಿರುವ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಪ್ರಸ್ತುತ ಬಿಡುವಿಲ್ಲದ ನಾಯಕ ನಟಿಯಾಗಿದ್ದಾರೆ.

ತೆಲುಗು, ತಮಿಳು ಹಾಗೂ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳೊಂದಿಗೆ ಮುನ್ನುಗ್ಗುತ್ತಿದ್ದಾರೆ. 'ಮಿಷನ್ ಮಜ್ನು' ಚಿತ್ರದ ಮೂಲಕ ರಶ್ಮಿಕಾ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿರುವುದು ಗೊತ್ತೇ ಇದೆ. ಈಗಷ್ಟೇ ಸಿನಿಮಾ ಪ್ರಚಾರ ಆರಂಭಿಸಿದ್ದಾರೆ. ಹೊಸ ಸಂದರ್ಶನವೊಂದರಲ್ಲಿ ರಶ್ಮಿಕಾ ರಿಲೇಶನ್‌ಶಿಪ್ ಕುರಿತು ಮನಸ್ಸು ತೆರೆದಿಟ್ಟಿದ್ದಾರೆ.

ನಿಮಗಿಂತ ವಯಸ್ಸಿನಲ್ಲಿ ಕಿರಿಯರೊಂದಿಗೆ ಡೇಟಿಂಗ್ ಮಾಡುತ್ತಿರಾ ಎಂಬ ಪ್ರಶ್ನೆಗೆ ಪ್ರೀತಿಗೂ ವಯಸ್ಸಿಗೂ ಏನು ಸಂಬಂಧ? ಅವರು ನಿಮ್ಮನ್ನು ಬದಲಾಯಿಸಲು ಪ್ರಯತ್ನಿಸಬಾರದು. ಆಗ ವಯಸ್ಸು ಎಂಬುದು ದೊಡ್ಡ ವಿಷಯವಲ್ಲ ಎಂದು ಉತ್ತರಿಸಿದ್ದಾರೆ. ಆದರೆ, ಕೆಲ ದಿನಗಳಿಂದ ರಶ್ಮಿಕಾ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ.

ಸಾಮಾಜಿಕ ಮಾಧ್ಯಮದಲ್ಲಿ ಕಟ್ಟು ಮಸ್ತು ದೇಹ ಪ್ರದರ್ಶಿಸುವ ಹುಡುಗರ ಬಗ್ಗೆ ಮಾತನಾಡಿ, ಅವರು ಕಷ್ಟಪಟ್ಟು ಫಿಟ್ ಆಗಿ ಕಾಣಿಸಿಕೊಳ್ಳುವುದನ್ನು ನಾನು ನಿಜಕ್ಕೂ ಪ್ರಶಂಸಿಸುತ್ತೇನೆ. ಆದರೆ, ಅದನ್ನು ಪ್ರೊಫೈಲ್ ಫೋಟೋ ಎಂದು ಏಕೆ ಹಾಕಬೇಕು? ದೇಹಕ್ಕಿಂತ ಮೊದಲು ನೀವೇನು ಎಂಬುದು ಅವರಿಗೆ ತಿಳಿದಿರಬೇಕು ಎಂದು ರಶ್ಮಿಕಾ ಉತ್ತರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT