ಸಿನಿಮಾ ಸುದ್ದಿ

ಟ್ರೆಂಡ್ ಸೃಷ್ಟಿಸುತ್ತಿದೆ 'ಏಕ್ ಲವ್ ಯಾ' ಎಣ್ಣೆಗೂ ಹೆಣ್ಣಿಗೂ ಸಾಂಗ್: ಎಲ್ಲೆಲ್ಲೂ  ಹಾಡಿನ ಗುನುಗುನು!

Shilpa D

ರಾಬರ್ಟ್ ಸಿನಿಮಾದ ಕಣ್ಣು ಹೊಡಿಯೋಕೆ ಹಾಡನ್ನು ತೆಲುಗಿನಲ್ಲಿ ಹಾಡಿ ಮ್ಯಾಜಿಕ್ ಮಾಡಿದ್ದ ಗಾಯಕಿ ಮಂಗ್ಲಿ ಮತ್ತೊಂದು ಸೆನ್ಸೇಷನ್ ಕ್ರಿಯೆಟ್ ಮಾಡಿದ್ದಾರೆ.

ಏಕ್ ಲವ್ ಯಾ ಸಿನಿಮಾದ ಬ್ರೇಕ್ ಅಪ್ ಸಾಂಗ್ ನಲ್ಲಿ ಕೈಲಾಶ್ ಖೇರ್ ಜೊತೆ ದನಿಗೂಡಿಸಿದ್ದಾರೆ.  ಎಣ್ಣೆಗೂ -ಹೆಣ್ಣಿಗೂ ಹಾಡಿನಲ್ಲಿ ರಚಿತಾ ರಾಮ್, ರಾಣಾ, ಹೆಜ್ಜೆ ಹಾಕಿದ್ದು, ಶುಕ್ರವಾರ ರಿಲೀಸ್ ಆಗಿದೆ.  ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದೆ, ಅದರಲ್ಲೂ ಮಹಿಳೆಯರಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿರುವ ಈ ಹಾಡು ರೀಲ್ ಗಳಲ್ಲೂ ತಕ್ಷಣ ಹಿಟ್ ಆಗಿದ ಎನ್ನುತ್ತಾರೆ ಸಾಹಿತ್ಯ ಬರೆದಿರುವ ನಿರ್ದೇಶಕ ಪ್ರೇಮ್.

ರೇಷ್ಮಾ ನಾಣಯ್ಯ ಮತ್ತು ರಾಣಾ ನಟಿಸಿರುವ ಈ ಸಿನಿಮಾ 2022 ಜನವರಿ 21 ರಂದು ರಿಲೀಸ್ ಆಗಲಿದೆ. ಚಿತ್ರಕ್ಕೆ ಎ/ಯೂ ಪ್ರಮಾಣ ಪತ್ರ ನೀಡಲಾಗಿದೆ.  ಸೆನ್ಸಾರ್ ಬೋರ್ಡ್ 3 ಪದಗಳನ್ನು ಕಟ್ ಮಾಡಿದೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

SCROLL FOR NEXT