ವಿ ಹರಿಕೃಷ್ಣ ಮತ್ತು ಶೈಲಜಾ ನಾಗ್ 
ಸಿನಿಮಾ ಸುದ್ದಿ

ಸಿನಿಮಾ ವಿತರಣೆಗೂ 'ಡಿ ಬೀಟ್ಸ್' ಆಡಿಯೋ ಸಂಸ್ಥೆ ಮುಂದು!

ವಿ ಹರಿಕೃಷ್ಣ ಮತ್ತು ಶೈಲಜಾ ನಾಗ್ ಒಡೆತನದ ಆಡಿಯೋ ಕಂಪನಿ ಡಿ ಬೀಟ್ಸ್ ಚಲನಚಿತ್ರ ವಿತರಣೆಗೂ ಮುಂದಾಗಿದೆ.

ವಿ ಹರಿಕೃಷ್ಣ ಮತ್ತು ಶೈಲಜಾ ನಾಗ್ ಒಡೆತನದ ಆಡಿಯೋ ಕಂಪನಿ ಡಿ ಬೀಟ್ಸ್ ಚಲನಚಿತ್ರ ವಿತರಣೆಗೂ ಮುಂದಾಗಿದೆ.

ಪ್ಯಾನ್ ಇಂಡಿಯಾದತ್ತ ಸಿನಿಮಾಗಳು ಮುಖ ಮಾಡುತ್ತಿರುವ ಈ ಹೊತ್ತಿನಲ್ಲಿ ಎಲ್ಲಾ ರೀತಿಯ ಆಯಾಮಗಳಲ್ಲಿಯೂ ಕೆಲಸ ಮಾಡುವುದು ಮುಖ್ಯವಾಗಿದೆ. ಹೀಗಾಗಿ ಸಿನಿಮಾ ವಿತರಣೆ ನಮ್ಮ ಮುಂದಿನ ಹಾದಿಯಾಗಿದೆ ಎಂದು  ಸಂಗೀತ ಸಂಯೋಜಕ-ನಿರ್ದೇಶಕ ವಿ.ಹರಿಕೃಷ್ಣ ಅವರು ಹೇಳಿದ್ದಾರೆ.

ಈ ಕುರಿತು ಹಲವು ದಿನಗಳ ಹಿಂದಿನಿಂದಲೂ ಚಿಂತನೆಗಳನ್ನು ನಡೆಸಲಾಗುತ್ತಿತ್ತು. ಸಾಂಕ್ರಾಮಿಕ ರೋಗಕ್ಕೆ ಮುನ್ನವೇ ಆರಂಭಿಸಲು ಮುಂದಾಗಿದ್ದೆವು. ಇದೀಗ ಅಧಿಕೃತವಾಗಿ ನವೆಂಬರ್ 14 ರಂದು ಸಿನಿಮಾ ವಿತರಣೆ ಮಾಡಲು ಪ್ರಾರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

ಸಿನಿಮಾ ಕುರಿತು ಎಲ್ಲಾ ಪ್ರಕ್ರಿಯೆಯನ್ನೂ ಒಂದು ಚೌಕಟ್ಟಿನಲ್ಲಿ ತರುವುದು ನಮ್ಮ ಗುರಿಯಾಗಿದೆ. ಶೀಘ್ರದಲ್ಲೇ ಸ್ಟುಡಿಯೋವೊಂದನ್ನೂ ಆರಂಭಿಸಲಾಗುತ್ತದೆ ಎಂದಿದ್ದಾರೆ.

ಶೈಲಜಾ ನಾಗ್ ಅವರು ಮಾತನಾಡಿ, ಸಿನಿಮಾ ಕುರಿತ ಪ್ರತೀ ಆಯಾಮದಲ್ಲಿಯೂ ತೊಡಗಿಸಿಕೊಳ್ಳುವ ಕುರಿತು ನಾವು ಮಾಡಿದ್ದೇವೆ. ವಿತರಣೆಯು ನಮ್ಮ ಮುಂದಿನ ಹಂತವಾಗಿದೆ. ವಿಚಾರಗಳು ಹಾಗೂ ವ್ಯವಹಾರಗಳು ಪರಸ್ಪರ ಅವಲಂಬಿತವಾಗಿವೆ. ಯಜಮಾನ ಬೆಳ್ಳಿತೆರೆಗೆ ನಮ್ಮ ಮೊದಲ ಸಂಯೋಜಿತ ಚಿತ್ರವಾಗಿತ್ತು. ಅಲ್ಲಿ ಸಿನಿಮಾ ವಿತರಣೆಯ ಮೊದಲ ಅನುಭವವನ್ನು ಪಡೆದಿದ್ದೆವು. ಬ್ಯಾಲೆನ್ಸ್ ಶೀಟ್ ಉತ್ತಮರೀತಿಯಲ್ಲಿ ಕಂಡು ಬಂದಿದ್ದೇ ಆದರೆ, ಕಂಪನಿ ಉತ್ತಮ ರೀತಿಯಲ್ಲಿ ಮುನ್ನಡೆಯಲಿದೆ. ನಾವು ಒಂದೆರಡು ಚಿತ್ರಗಳನ್ನು ಜೋಡಿಸಿದ್ದೇವೆ ಮತ್ತು ನಟ ದರ್ಶನ್ ಅವರ ಕ್ರಾಂತಿ ಚಿತ್ರದೊಂದಿಗೆ ಈ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

ಬೆಂಗಳೂರಿಗೂ ಎಂಟ್ರಿ ಕೊಟ್ಟಿತೇ ಮಹಾಮಾರಿ ಎಬೋಲಾ? ಆಫ್ರಿಕಾದಿಂದ ಬಂದ ಮಹಿಳೆಯಲ್ಲಿ ಸೋಂಕಿನ ಲಕ್ಷಣ ಪತ್ತೆ, ಆರೋಗ್ಯ ಇಲಾಖೆ ಹೈ ಅಲರ್ಟ್

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

SCROLL FOR NEXT