ಸಿನಿಮಾ ಸುದ್ದಿ

ಅಂತಾರಾಷ್ಟ್ರೀಯ ಎಮ್ಮೀ ಅವಾರ್ಡ್ 2021: ಮೂರೂ ವಿಭಾಗಗಳಲ್ಲಿ ಅವಾರ್ಡ್ ಮಿಸ್ ಆದರೂ ಬೀಗಿದ ಭಾರತ

Harshavardhan M

ನ್ಯೂಯಾರ್ಕ್: ಟೆಲಿವಿಷನ್ ಕಾರ್ಯಕ್ರಮಗಳಿಗೆ ನೀಡಲಾಗುವ ಆಸ್ಕರ್ ಸಮಾನ, ಜಗತ್ತಿನಲ್ಲೇ ಪ್ರತಿಷ್ಟಿತ ಅವಾರ್ಡ್ ಎಮ್ಮೀಸ್ ನಲ್ಲಿ ಈ ಬಾರಿ ಭಾರತ ಪ್ರಶಸ್ತಿ ಗೆಲ್ಲುವ ಮೂರು ಅವಕಾಶಗಳಿದ್ದವು. ಅವು ಮೂರರಲ್ಲೂ ಅವಾರ್ಡ್ ಮಿಸ್ ಆಗಿವೆ. 

'ಸೀರಿಯಸ್ ಮೆನ್' ಧಾರಾವಾಹಿ ಸರಣಿಯಲ್ಲಿನ ನಟನೆಗಾಗಿ ನವಾಜುದ್ದೀನ್ ಸಿದ್ದಿಕಿ ಅತ್ಯುತ್ತಮ ನಟ ವಿಭಾಗಕ್ಕೆ ನಾಮಾಂಕಿತಗೊಂಡಿದ್ದರು. ಭಾರತೀಯ ಕಾಮಿಡಿಯನ್ ವೀರ್ ದಾಸ್ ಅವರ ಹಾಸ್ಯ ಕಾರ್ಯಕ್ರಮ 'ವೀರ್ ದಾಸ್ ಫಾರ್ ಇಂಡಿಯ'ಗಾಗಿ ಅತ್ಯುತ್ತಮ ಹಾಸ್ಯ ಕಾರ್ಯಕ್ರಮ ವಿಭಾಗದಲ್ಲಿ ನಾಮಾಂಕಿತಗೊಂಡಿದ್ದರು. ಸುಶ್ಮಿತಾ ಸೇನ್ ಅವರ ಧಾರಾವಾಹಿ ಸರಣಿ 'ಆರ್ಯ' ಕೂಡಾ ಅತ್ಯುತ್ತಮ ಧಾರಾವಾಹಿ ವಿಭಾಗದಲ್ಲಿ ನಾಮಾಂಕಿತಗೊಂಡಿತ್ತು. ಮೂರು ವಿಭಾಗದಲ್ಲಿಯ್ತೂ ಭಾರತಕ್ಕೆ ಪ್ರಶಸ್ತಿ ಒಲಿದಿಲ್ಲ.

ನವಾಜುದ್ದೀನ್ ಸಿದ್ದಿಕಿ ಅವರು ಪ್ರಖ್ಯಾತ ಬ್ರಿಟಿಷ್ ನಟ ಡೇವಿಡ್ ಟೆನೆಂಟ್ ಅವರೆದುದು ಪ್ರಶಸ್ತಿ ಕಳಕೊಂಡರೆ, ವೀರ್ ದಾಸ್ ಜನಪ್ರಿಯ 'ಕಾಲ್ ಮೈ ಏಜೆಂಟ್' ಹಾಸ್ಯ ಕಾರ್ಯಕ್ರಮದೆದುರು ಪ್ರಶಸ್ತಿಯಿಂದ ವಂಚಿತರಾದರು. 

ಪ್ರಶಸ್ತಿ ದೊರೆಯದೇ ಹೋದರೂ ಮೂರು ವಿಭಾಗಗಳಲ್ಲಿ ಭಾರತೀಯರು ನಾಮಾಂಕಿತಗೊಂಡಿತ್ತು ಇದೇ ಮೊದಲು. ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತ ಗಮನ ಸೆಳೆದಿರುವುದೇ ದೊಡ್ಡ ಹೆಗ್ಗಳಿಕೆಯಾಗಿದೆ. 

SCROLL FOR NEXT