ಸಿನಿಮಾ ಸುದ್ದಿ

ಟೊಮೆಟೊ ಬೆಲೆ ಏರಿಕೆ: ತಮಾಷೆಯ ಮೀಮ್​ ಟ್ವೀಟ್​ ಮಾಡಿ ನಟ ಪ್ರಕಾಶ್​ ರಾಜ್ ಕಾಲೆಳೆದಿದ್ದು ಯಾರನ್ನ?

Vishwanath S

ಬೆಂಗಳೂರು: ಇಂಧನ ಬೆಲೆಗಳ ನಂತರ, ಕಳೆದ ಕೆಲವು ದಿನಗಳಿಂದ ಟೊಮೆಟೊ ಬೆಲೆಯಲ್ಲಿ ಬಾರೀ ಏರಿಕೆಯಾಗಿದೆ. ಇದರ ಬೆಲೆ ಏರಿಕೆಗೆ ಸಂಬಂಧಿಸಿದ ಮೀಮ್​ವೊಂದನ್ನು ನಟ ಪ್ರಕಾಶ್​ ರಾಜ್ ಟ್ವೀಟ್​ ಮಾಡಿದ್ದಾರೆ. ಅಲ್ಲದೇ ಯಾರು ಇದನ್ನು ಮಾಡಿದವರು ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶ್ ರಾಜ್ ಟೊಮೆಟೊ ಬೆಲೆ ಏರಿಕೆ ಮತ್ತು ಇಂಧನ ಬೆಲೆಯ ಬಗ್ಗೆ ತಮಾಷೆಯ ಮೀಮ್​​ನೊಂದನ್ನು ಹಂಚಿಕೊಳ್ಳುವ ಮೂಲಕ ತಮಾಷೆ ಮಾಡಿದ್ದಾರೆ.

ಪ್ರಕಾಶ್ ರಾಜ್ ಅವರು 2010 ರಲ್ಲಿ ಬಿಡುಗಡೆಯಾದ ತಮ್ಮ ಸಿನಿಮಾ ಸಿಂಗಂನ ಒಂದು ಮೀಮ್​ನನ್ನು ಹಂಚಿಕೊಂಡಿದ್ದಾರೆ. ಈ ಮೀಮ್‌ನಲ್ಲಿ ಎರಡು ಚಿತ್ರಗಳಿವೆ, ಒಂದರಲ್ಲಿ ನಟ ಸೂರ್ಯ ಅವರು ಕಂಟ್ರೋಲ್​ ರೂಮ್​ನಲ್ಲಿ ಇದ್ದು, 'ಪೆಟ್ರೋಲ್ 101ರೂ./ಲೀಟರ್' ಎಂದು ಫೋನ್‌ನಲ್ಲಿ ಮಾತನಾಡುವುದು ಹಾಗೂ ಮತ್ತೊಂದು ಚಿತ್ರದಲ್ಲಿ ನಟ ಪ್ರಕಾಶ್ ರಾಜ್ 'ಟೊಮೇಟೊ ಬಲೆ 110 ರೂ./ಕೆಜಿ ' ಎಂದು ಬರೆಯಲಾಗಿದೆ. ಯಾರು ಇದನ್ನು ಮಾಡಿದವರು ಎಂದು ಪ್ರಕಾಶ್​ ರಾಜ್​ ಪ್ರಶ್ನಿಸಿದ್ದಾರೆ.

ಟೊಮೆಟೊ ಬೆಲೆ ಏರಿಕೆ:
ಸರ್ಕಾರದ ಅಂಕಿಅಂಶಗಳ ಪ್ರಕಾರ, ದೇಶದ ಹೆಚ್ಚಿನ ನಗರಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 80 ರೂ. ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಇದರ ಬೆಲೆ ಕೆಜಿಗೆ 120 ರೂ.ಗೆ ಏರಿಕೆಯಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ. ಕೇರಳದ ಕೊಟ್ಟಾಯಂ ಮತ್ತು ತಮಿಳುನಾಡಿನ ಚೆನ್ನೈನಂತಹ ನಗರಗಳಲ್ಲಿ ಪ್ರತಿ ಕೆಜಿಗೆ ಕ್ರಮವಾಗಿ 120 ಮತ್ತು 100 ರೂ. ಇದೆ. ರಾಮನಾಥಪುರಂನಲ್ಲಿ ಕೆಜಿಗೆ 119 ರೂ., ತಿರುನಲ್ವೇಲಿಯಲ್ಲಿ ಕೆಜಿಗೆ 103 ರೂ. ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮೂರು ಅಂಕಿಗಳ ಸಮೀಪದಲ್ಲಿ ತರಕಾರಿ ಮಾರಾಟವಾಗುತ್ತಿದೆ. ಇದೇ ಸಮಯದಲ್ಲಿ, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ದರಗಳು ತುಲನಾತ್ಮಕವಾಗಿ ಅಗ್ಗವಾಗಿದ್ದು, ಕ್ರಮವಾಗಿ ಕೆಜಿಗೆ 88 ಮತ್ತು 65 ರೂ. ಇದೆ.

SCROLL FOR NEXT