ದುನಿಯಾ ವಿಜಯ್ 
ಸಿನಿಮಾ ಸುದ್ದಿ

ಕೋವಿಡ್ ಸಮಯದಲ್ಲಿಯೂ 'ಸಲಗ' ಯಶಸ್ವಿಯಾಗಿರುವುದು ಪವಾಡ!

ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದ್ದು, ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ನಟ ವಿಜಯ್ ಗೆ ಹೃದಯ ತುಂಬಿ ಬಂದಿದೆ.

ದುನಿಯಾ ವಿಜಯ್ ಚೊಚ್ಚಲ ನಿರ್ದೇಶನದ ಸಲಗ ಸಿನಿಮಾ ರಿಲೀಸ್ ಆಗಿ ಒಂದು ವಾರ ಕಳೆದಿದ್ದು, ಬರುತ್ತಿರುವ ಉತ್ತಮ ಪ್ರತಿಕ್ರಿಯೆಗೆ ನಟ ವಿಜಯ್ ಗೆ ಹೃದಯ ತುಂಬಿ ಬಂದಿದೆ.

ಪ್ರೇಕ್ಷಕರು ಮತ್ತು ಚಿತ್ರತಂಡದ ಸಹಾಯವಿಲ್ಲದೇ ಯಶಸ್ಸು ಸಾಧ್ಯವಿಲ್ಲ ಎಂದು ವಿಜಯ್ ತಿಳಿಸಿದ್ದಾರೆ.  ನನ್ನ ವೃತ್ತಿ ಜೀವನದಲ್ಲಿ ಹಿಟ್ ಸಿಕ್ಕು  ಬಹಳ ಸಮಯವಾಗಿದೆ. ಪ್ರತಿ ಬಾರಿಯೂ ಒಂದು ಚಲನಚಿತ್ರವು ಫ್ಲಾಪ್ ಆದಾಗ ಬ್ಲೇಮ್ ಗೇಮ್ ಆಗುತ್ತಿತ್ತು. ಆ ಪಟ್ಟಿಯಲ್ಲಿ ನಾಯಕ ಮೊದಲಿಗನಾಗಿದ್ದನು. ಅದರಿಂದ ನಾನು ಈ ನಿರ್ದೇಶಕರ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾದೆ.  ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರ ಬೆಂಬಲವು ಕೂಡ ಒಂದು ಪ್ರಮುಖ ಅಂಶವಾಗಿದೆ.

ಮಾಸ್ ಪ್ರೇಕ್ಷಕರ ಮನಸೂರೆಗೊಂಡಿರುವ ಈ ಚಿತ್ರವು ಕೌಟುಂಬಿಕ ಪ್ರೇಕ್ಷಕರಿಗೂ ಇಷ್ಟವಾಗಿದೆ. ಇದರಿಂದ ವಿಜಯ್ ಖುಷಿಯಾಗಿದ್ದಾರೆ. "ಸಾಮಾನ್ಯವಾಗಿ ರೌಡಿಸಂ ಕುರಿತ ಸಿನಿಮಾವನ್ನು ಕೇವಲ ಮಚ್ಚು ಮತ್ತು ಬಂದೂಕು ಹಿಡಿದಿರುವ ಚಿತ್ರ ಎಂದು ನಿರ್ಧರಿಸಲಾಗುತ್ತದೆ. ಹೀಗಿದ್ದರೂ, ಸಲಗ ತಯಾರಿಕೆಯು ವಿಭಿನ್ನವಾಗಿದ್ದು ಹಲವು ಪ್ರಮುಖ ಅಂಶಗಳನ್ನು ಹೊಂದಿದೆ ಎಂದು ವಿಜಯ್ ತಿಳಿಸಿದ್ದಾರೆ.

ವಿಜಯ್ ಮತ್ತು ತಂಡ ಶೀಘ್ರದಲ್ಲೇ ಸಕ್ಸಸ್ ಟೂರ್ ಆರಂಭಿಸಲಿದೆ.  ನಾವು ತುಮಕೂರಿನಿಂದ ಆರಂಭಿಸಿ ಕರ್ನಾಟಕದಾದ್ಯಂತ ಪ್ರಯಾಣಿಸಲಿದ್ದೇವೆ, ಚಿತ್ರದ ಯಶಸ್ಸಿಗೆ ಅಪಾರ ಕೊಡುಗೆ ನೀಡಿದ ನನ್ನ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಲು ನಾವು ಈ ಪ್ರವಾಸವನ್ನು ಮಾಡುತ್ತಿದ್ದೇವೆ. ಸಾಂಕ್ರಾಮಿಕ ಸಮಯದಲ್ಲಿ ಬರುವ ಈ ರೀತಿಯ ಪ್ರತಿಕ್ರಿಯೆ ಹೆಚ್ಚು ಕಡಿಮೆ ಪವಾಡವಾಗಿದೆ ಎಂದು ವಿಜಯ್ ಅಭಿಪ್ರಾಯ ಪಟ್ಟಿದ್ದಾರೆ.

ಲಾಕ್ ಡೌನ್, ನನ್ನ ತಾಯಿಯ ಸಾವು ಹಾಗೂ ರಿಲೀಸ್ ಟೆನ್ಸನ್ ನಿಂದ ನಾನು ಸಾಕಷ್ಟು ಒತ್ತಡದಲ್ಲಿದ್ದೆ. ನನ್ನ ಮುಂದಿನ ಪ್ರಾಜೆಕ್ಟ್ ಆರಂಭಿಸುವ ಮುನ್ನ ನಾನು ಮಾನಸಿಕವಾಗಿ ಸಿದ್ಧವಾಗಬೇಕು ಎಂದು ವಿಜಯ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT