ತಲೈವಿ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

'ತಲೈವಿ': ಎಂಜಿಆರ್, ಜಯಲಲಿತಾಗೆ ಸಂಬಂಧಪಟ್ಟ 'ಅವಾಸ್ತವಿಕ' ದೃಶ್ಯಗಳಿಗೆ ಕತ್ತರಿ ಹಾಕುವಂತೆ ಎಐಎಡಿಎಂಕೆ ಆಗ್ರಹ

ತಮ್ಮ ಪಕ್ಷದ ಪ್ರಮುಖರಾದ ದಿವಂಗತ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಜೀವನಾಧಾರಿತ ಬಹು-ಭಾಷಾ ಚಿತ್ರ 'ತಲೈವಿ'ಯಲ್ಲಿ ಕೆಲವು ತಪ್ಪು ಉಲ್ಲೇಖಗಳಿದ್ದು, 'ವಾಸ್ತವಿಕವಲ್ಲ'ದ

ಚೆನ್ನೈ: ತಮ್ಮ ಪಕ್ಷದ ಪ್ರಮುಖರಾದ ದಿವಂಗತ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರ ಜೀವನಾಧಾರಿತ ಬಹು-ಭಾಷಾ ಚಿತ್ರ 'ತಲೈವಿ'ಯಲ್ಲಿ ಕೆಲವು ತಪ್ಪು ಉಲ್ಲೇಖಗಳಿದ್ದು, 'ವಾಸ್ತವಿಕವಲ್ಲ'ದ ದೃಶ್ಯಗಳನ್ನು ತೆಗೆದು ಹಾಕುವಂತೆ ತಮಿಳುನಾಡಿನ ಪ್ರತಿಪಕ್ಷ ಎಐಎಡಿಎಂಕೆ ಶುಕ್ರವಾರ ಒತ್ತಾಯಿಸಿದೆ.

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಹಾಗೂ ಎಎಲ್ ವಿಜಯ್ ನಿರ್ದೇಶನದ ತಲೈವಿ ಚಿತ್ರವನ್ನು ಇಲ್ಲಿನ ಚಿತ್ರಮಂದಿರದಲ್ಲಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಐಎಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಸಚಿವ ಡಿ ಜಯಕುಮಾರ್ ಅವರು, ಕೆಲವು ಉಲ್ಲೇಖಗಳು ವಾಸ್ತವಿಕವಲ್ಲ. ಅವುಗಳನ್ನು ತೆಗೆದು ಹಾಕಿದರೆ ತಲೈವಿ ಉತ್ತಮ ಚಿತ್ರ ಎನಿಸಿಕೊಳ್ಳಲಿದೆ ಮತ್ತು ಪಕ್ಷದ ಬೆಂಬಲಿಗರು ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತದೆ ಎಂದರು.

ಉದಾಹರಣೆಗೆ, ಚಿತ್ರದ ಒಂದು ಸನ್ನಿವೇಶದಲ್ಲಿ ಎಂಜಿಆರ್ ಅವರು ಡಿಎಂಕೆ ಸರ್ಕಾರದಲ್ಲಿ ಮಂತ್ರಿ ಸ್ಥಾನವನ್ನು ಬಯಸುತ್ತಾರೆ ಮತ್ತು ದಿವಂಗತ ಎಂ ಕರುಣಾನಿಧಿ ಅವರು ಮಂತ್ರಿ ಸ್ಥಾನ ನಿರಾಕರಿಸುತ್ತಾರೆ ಎಂದಿದೆ. ಆದರೆ ಎಂಜಿಆರ್ ಅವರು ಎಂದೂ ಮಂತ್ರಿ ಸ್ಥಾನಕ್ಕೆ ಆಸೆಪಟ್ಟವರಲ್ಲ ಎಂದು ಜಯಕುಮಾರ್ ಪ್ರತಿಪಾದಿಸಿದ್ದಾರೆ.

ಜಯಲಲಿತಾ ಅವರು ದಿವಂಗತ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರೊಂದಿಗೆ ಎಂಜಿಆರ್ ಅವರ ಅರಿವಿಗೆ ಬಾರದಂತೆ ಸಂಪರ್ಕದಲ್ಲಿದ್ದರು ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಈ ಮೂಲಕ ಎಂಜಿಆರ್‌ ಪಾತ್ರವನ್ನು ಮತ್ತೊಮ್ಮೆ ಕೆಳಮಟ್ಟಕ್ಕಿಳಿಸಲಾಗಿದೆ. ಇದು ನಿಜವಲ್ಲ ಎಂದು ಜಯಕುಮಾರ್‌ ಹೇಳಿದರು. ಅಲ್ಲದೆ, ಈ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೆಂಪು ಕೋಟೆ ಬಳಿ ಕಾರು ಸ್ಫೋಟ 'ಭಯೋತ್ಪಾದಕ ದಾಳಿ': ಕೇಂದ್ರ ಸರ್ಕಾರ

ಧರ್ಮಸ್ಥಳ ಕೇಸ್: ತಿಮರೋಡಿ, ಗಿರೀಶ್ ಮಟ್ಟಣನವರ್ ತಂಡಕ್ಕೆ ಹೈಕೋರ್ಟ್ ಶಾಕ್; SIT ತನಿಖೆಗೆ ಅನುಮತಿ!

'BJP, ECಯಿಂದ ಬಹಿರಂಗವಾಗಿಯೇ ಮತಗಳ್ಳತನ': ಒಬ್ಬ ವ್ಯಕ್ತಿಯಿಂದ ಹಲವು ಕಡೆ ಮತದಾನ; ಪೋಸ್ಟ್ ಹಂಚಿಕೊಂಡ ರಾಹುಲ್

ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಮುಂದುವರೆದರೆ ತಪ್ಪೇನು?- DK Shivakumar; ಸಿಎಂ ಹುದ್ದೆ ಕನಸು ಕೈಬಿಟ್ಟ DCM?

GST ಕಡಿತ, ಆಹಾರ ವಸ್ತುಗಳ ಬೆಲೆ ಇಳಿಕೆ; ದಶಕದಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದ ಹಣದುಬ್ಬರ

SCROLL FOR NEXT