ಗಾಳಿಪಟ 2 ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದ ಮೈಲಿಗಲ್ಲು: ಶರ್ಮಿಳಾ ಮಾಂಡ್ರೆ!

ನಾನು ಗಾಳಿಪಟ 2 ಸಿನಿಮಾ ಭಾಗವಾಗಿರುವುದು ದೇವರ ಅನುಗ್ರಹ, ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

ನಾನು ಗಾಳಿಪಟ 2 ಸಿನಿಮಾ ಭಾಗವಾಗಿರುವುದು ದೇವರ ಅನುಗ್ರಹ, ಯೋಗರಾಜ್ ಭಟ್ ಸಿನಿಮಾದಲ್ಲಿ ಕೆಲಸ ಮಾಡಿದ್ದು ನನ್ನ ವೃತ್ತಿ ಜೀವನದಲ್ಲಿ ಒಂದು ಮೈಲಿಗಲ್ಲು ಎಂದು ಶರ್ಮಿಳಾ ಮಾಂಡ್ರೆ ಹೇಳಿದ್ದಾರೆ.

ನಾನು 2008 ರಲ್ಲಿ ಉದ್ಯಮಕ್ಕೆ ಸೇರಿಕೊಂಡೆ, ಇದಕ್ಕಾಗಿ ನಾನು 14 ವರ್ಷಗಳ ಕಾಲ ಕಾಯಬೇಕಾಯಿತು. ಎಲ್ಲಾ ಒಳ್ಳೆಯ ಕೆಲಸಗಳಿಗೆ ಸಮಯ ಹಿಡಿಯುತ್ತದೆ ಮತ್ತು ಈ ಅವಕಾಶ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆಎಂದು ಶರ್ಮಿಳಾ ಹೇಳಿದ್ದಾರೆ.

ಶರ್ಮಿಳಾ ಮಾಂಡ್ರೆ

ನಾನು ನಿರ್ದೇಶಕರ ಹಿಂದಿನ ಚಿತ್ರ ಗಾಳಿಪಟದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತ್ತು, ಆದರೆ ಡೇಟ್ಸ್ ಹೊಂದಾಣಿಕೆ ಸಮಸ್ಯೆಯಿಂದಾಗಿ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಈ ಅವಕಾಶ ಗಾಳಿಪಟ 2 ಸಿನಿಮಾದಲ್ಲಿ ಸಿಕ್ಕಿತು, ಈ ಸಿನಿಮಾದ ಭಾಗವಾಗಿರಲು ನಾನು ಖುಷಿಯಾಗಿದ್ದೇನೆ ಎಂದಿದ್ದಾರೆ.

ಗೋಲ್ಡನ್‌ ಸ್ಟಾರ್‌ ಗಣೇಶ್‌, ದೂದ್‌ಪೇಡಾ ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ನಾನು ಈ ಸಿನಿಮಾದಲ್ಲಿ ಟೀಚರ್, ಪವನ್ ಕುಮಾರ್ ನನ್ನ ಸ್ಟೂಡೆಂಟ್, ನಾನು ನಿಜ ಜೀವನದಲ್ಲಿ ಪವನ್‌ಗಿಂತ ವಯಸ್ಸಿನಲ್ಲಿ ಚಿಕ್ಕವಳು, ಪವನ್ ಚಿಕ್ಕವರಾಗಿ ಕಾಣುವಂತೆ ಮಾಡುವುದು ಸವಾಲಾಗಿತ್ತು. ಅವರು ಬಹಳ ಶ್ರಮ ವಹಿಸಿ ವರ್ಕೌಟ್ ಮಾಡಿದ್ದಾರೆ. ನನ್ನ ವಿದ್ಯಾರ್ಥಿಯಂತೆ ಕಾಣಲು ಸಾಕಷ್ಟು ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ಶರ್ಮಿಳಾ ತಿಳಿಸಿದ್ದಾರೆ.

ಯೋಗರಾಜ್ ಭಟ್ ಅವರ ವರ್ಕಿಂಗ್ ಸ್ಟೈಲ್ ಬಗ್ಗೆ  ಮಾತನಾಡಿದ ಶರ್ಮಿಳಾ, “ಸಾಕಷ್ಟು ಪಾತ್ರಗಳಿದ್ದರೂ, ಪ್ರತಿಯೊಂದು ಪಾತ್ರವೂ ಸರಿಹೋಗುವಂತೆ ನಿರ್ದೇಶಕರು ನೋಡಿಕೊಂಡಿದ್ದಾರೆ. ಯೋಗರಾಜ್ ಭಟ್ ಅವರಲ್ಲಿ ನನಗೆ ಇಷ್ಟವಾದ ಒಂದು ವಿಷಯವೆಂದರೆ ಅವರು ನಾಯಕಿಯರನ್ನು ಸುಂದರವಾದ ಗೊಂಬೆಗಳಂತೆ ತೋರಿಸುವುದಿಲ್ಲ. ಅವರು ತಮ್ಮ ಪಾತ್ರಗಳಿಗೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತಾರೆ.

ಯೋಗರಾಜ್ ಭಟ್ ನಿಜವಾದ ಅರ್ಥದಲ್ಲಿ 'ಹಡಗಿನ ಕ್ಯಾಪ್ಟನ್' ಮತ್ತು ಅವರು ನಮ್ಮ ಪಾತ್ರವನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತಾರೆ. ಜೊತೆಗೆ ಇಡೀ ತಂಡವನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಇಡೀ ಶೂಟಿಂಗ್ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ, ನಟಿಯಾಗಿ ಶರ್ಮಿಳಾ ದಸರಾ ಎಂಬ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT