ಚಂದ್ರ ಕೀರ್ತಿ ಮತ್ತು ಮಧುಸೂದನ್ ರಾವ್ 
ಸಿನಿಮಾ ಸುದ್ದಿ

ಮತ್ತೆ ಒಂದಾಗುತ್ತಿದ್ದಾರೆ 'ತೂತು ಮಡಿಕೆ' ಚಿತ್ರದ ನಿರ್ದೇಶಕ ಚಂದ್ರ ಕೀರ್ತಿ, ನಿರ್ಮಾಪಕ ಮಧುಸೂದನ್ ರಾವ್

ತೂತು ಮಡಿಕೆ ಚಿತ್ರಕ್ಕಾಗಿ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಟ ಚಂದ್ರ ಕೀರ್ತಿ ಅವರು ನಿರ್ಮಾಪಕ ಮಧುಸೂದನ್ ರಾವ್ ಅವರೊಂದಿಗೆ ಮತ್ತೊಂದು ಸಿನಿಮಾಗೆ ಮುಂದಾಗುತ್ತಿದ್ದಾರೆ.

ತೂತು ಮಡಿಕೆ ಚಿತ್ರಕ್ಕಾಗಿ ವಿಮರ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದ ಚಿತ್ರದ ಬರಹಗಾರ, ನಿರ್ದೇಶಕ ಮತ್ತು ನಟ ಚಂದ್ರ ಕೀರ್ತಿ ಅವರು ನಿರ್ಮಾಪಕ ಮಧುಸೂದನ್ ರಾವ್ ಅವರೊಂದಿಗೆ ಮತ್ತೊಂದು ಸಿನಿಮಾಗೆ ಮುಂದಾಗುತ್ತಿದ್ದಾರೆ. ಅಧಿಕೃತವಾಗಿ ಸಿನಿಮಾವನ್ನು ಘೋಷಿಸುವ ಮುನ್ನ ಅವರು ಸಿನಿಮಾ ಎಕ್ಸ್‌ಪ್ರೆಸ್‌ನೊಂದಿಗೆ ಈ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ.

ನಿರ್ಮಾಣ ಸಂಸ್ಥೆ ಸರ್ವತಾ ಸಿನಿ ಗ್ಯಾರೇಜ್‌ನೊಂದಿಗೆ ಇದು ಅವರ ಎರಡನೇ ಸಹಯೋಗವಾಗಿದ್ದು, ಸ್ಕ್ರಿಪ್ಟಿಂಗ್ ಹಂತದಲ್ಲಿರುವ ಈ ಸಿನಿಮಾ ಫೆಬ್ರವರಿಯಲ್ಲಿ ಸೆಟ್ಟೇರುವ ಸಾಧ್ಯತೆಯಿದೆ.

ಇದೊಂದು ‘ಲವ್ ಆ್ಯಕ್ಷನ್ ಸಿನಿಮಾ’ ಆಗಿದ್ದು, ಇಡೀ ಕಥೆಯನ್ನು ಕಾಡಿನ ಹಿನ್ನಲೆಯಲ್ಲಿ ಚಿತ್ರಿಸಲಾಗುತ್ತದೆ. ಚಿತ್ರದ ಪ್ರಮುಖ ಭಾಗಗಳನ್ನು ಹಳ್ಳಿಯ ಒಳಭಾಗದಲ್ಲಿ ಚಿತ್ರೀಕರಿಸಲಾಗುವುದು. ಈ ಚಿತ್ರಕ್ಕೆ ಕಥೆ ಮತ್ತು ನಿರ್ದೇಶನದ ಜೊತೆಗೆ ಚಂದ್ರಕೀರ್ತಿ ನಾಯಕನಾಗಿಯೂ ನಟಿಸುತ್ತಿದ್ದಾರೆ.

ಉಳಿದ ತಾರಾಗಣವನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಚಿತ್ರತಂಡವಿದೆ. ತೂತು ಮಡಿಕೆ ಸಿನಿಮಾದ ಸಂಗೀತ ನಿರ್ದೇಶಕ ಸ್ವಾಮಿನಾಥನ್ ಆರ್.ಕೆ ಅವರೇ ಈ ಚಿತ್ರಕ್ಕೂ ಸಂಗೀತ ಸಂಯೋಜಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ತಂತ್ರಜ್ಞರನ್ನು ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel