ಅವತಾರ್: ದಿ ವೇ ಆಫ್ ವಾಟರ್ 
ಸಿನಿಮಾ ಸುದ್ದಿ

ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಗಳಿಸಿದ ಅವತಾರ್: ದಿ ವೇ ಆಫ್ ವಾಟರ್!

ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹು ನಿರೀಕ್ಷಿತ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ದಾಟಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅವರ ಬಹು ನಿರೀಕ್ಷಿತ ಸೀಕ್ವೆಲ್ ಅವತಾರ್: ದಿ ವೇ ಆಫ್ ವಾಟರ್ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಕೇವಲ 14 ದಿನಗಳಲ್ಲಿ 1 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿದೆ. ಈ ಮೂಲಕ, ಅತ್ಯಂತ ವೇಗವಾಗಿ ಈ ಮೈಲಿಗಲ್ಲನ್ನು ದಾಟಿದ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಅವತಾರ್: ದಿ ವೇ ಆಫ್ ವಾಟರ್ ಸೀಕ್ವೆಲ್ 2022 ರ 'ಟಾಪ್ ಗನ್: ಮೇವರಿಕ್‌ 770 ಮಿಲಿಯನ್ ಡಾಲರ್ ಗಳಿಸಿ ಅತ್ಯಧಿಕ ಗಳಿಕೆಯ ಅಂತರರಾಷ್ಟ್ರೀಯ ಚಿತ್ರದ ದಾಖಲೆಯನ್ನು ಮುರಿಯುವ ಸನಿಹದಲ್ಲಿದೆ. 20ನೇ ಶತಮಾನ/ಡಿಸ್ನಿ ಬಿಡುಗಡೆಯು ಮಂಗಳವಾರ ಈ ಮೈಲಿಗಲ್ಲನ್ನು ದಾಟಿದೆ.

ಬಿಡುಗಡೆಯಾದ ದಿನದಿಂದ ಕೇವಲ 14 ದಿನಗಳಲ್ಲಿ ವಿಶ್ವದಾದ್ಯಂತ ಬಾಕ್ಸ್‌ ಆಫೀಸ್‌ನಲ್ಲಿ ಯಶಸ್ಸನ್ನು ಸಾಧಿಸಿಕೊಂಡು ಬರುತ್ತಿದೆ. ಈ ಮೂಲಕ ಅವತಾರ್‌ ಸಿನಿಮಾ 19 ದಿನಗಳಲ್ಲಿ ಗಳಿಸಿದ್ದ 1 ಬಿಲಿಯನ್ ಡಾಲರ್ ದಾಖಲೆಯನ್ನು ಸರಿಗಟ್ಟಿದೆ.

2009 ರಲ್ಲಿ ಬಿಡುಗಡೆಯಾದ ಫ್ರ್ಯಾಂಚೈಸ್‌ನ ಮೊದಲ ಸನಿಮಾವು ಸಾರ್ವಕಾಲಿಕ ಅತಿ ಹೆಚ್ಚು ಗಳಿಕೆಯ ಚಲನಚಿತ್ರವಾಯಿತು ಮತ್ತು 10 ವರ್ಷ ಕಳೆದರೂ ತನ್ನ ದಾಖಲೆಯನ್ನು ಉಳಿಸಿಕೊಂಡಿದೆ. 2019 ರಲ್ಲಿ ತೆರೆಕಂಡ ಮಾರ್ವೆಲ್‌ನ ಅವೆಂಜರ್ಸ್: ಎಂಡ್‌ಗೇಮ್ ಎರಡನೇ ಸ್ಥಾನದಲ್ಲಿದ್ದರೆ, ಮೂರನೇ ಸ್ಥಾನದಲ್ಲಿ ಜೇಮ್ಸ್ ಕ್ಯಾಮರೂನ್ ಅವರ ಟೈಟಾನಿಕ್ ಸಿನಿಮಾ ಇದೆ.

ವರದಿಗಳ ಪ್ರಕಾರ, ಜೇಮ್ಸ್ ಕ್ಯಾಮರೂನ್ ಅವರು ಅವತಾರ್ 5 ವರೆಗೆ ಸೀಕ್ವೆಲ್‌ಗಳನ್ನು ಮಾಡಲು ಯೋಜಿಸಿದ್ದಾರೆ ಮತ್ತು ಈಗಾಗಲೇ ಅವತಾರ್ 3 ಮತ್ತು 4 ರ ಭಾಗಗಳನ್ನು ಚಿತ್ರೀಕರಿಸಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ. ಬಂಗಾಳದ 15 ಮತಗಟ್ಟೆಗಳಲ್ಲಿ ನಾಳೆ ಮರು ಮತದಾನ: ಚುನಾವಣಾ ಆಯೋಗ ಆದೇಶ!

ಮದ್ಯಪಾನ ಮಾಡಿ ವಿಧಾನಸಭೆಗೆ ಬಂದ್ರಾ ಪಂಜಾಬ್ ಸಿಎಂ ಭಗವಂತ್ ಮಾನ್; ಡೋಪ್ ಪರೀಕ್ಷೆಗೆ ವಿಪಕ್ಷಗಳ ಒತ್ತಾಯ, Video!

ಡಿಸಿಎಂ DKS ಪುತ್ರಿಗೆ ಹೆಣ್ಣು ಮಗು ಜನನ: ತಾತನಾದ ಖುಷಿ, ಆಸ್ಪತ್ರೆಗೆ ದೌಡಾಯಿಸಿದ ಡಿಕೆ ಶಿವಕುಮಾರ್

Tamilnadu: ರಾಜಕೀಯ ದ್ವೇಷ, ಟಿವಿಕೆ ಪ್ರಚಾರ ಕಚೇರಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

ರಾಹುಲ್ ಗಾಂಧಿಗೆ ಅಲಹಾಬಾದ್ ಹೈಕೋರ್ಟ್ ನಿಂದ ಬಿಗ್ ರಿಲೀಫ್!

SCROLL FOR NEXT