ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ಹಿಂದಿ ಬೆಲ್ಟ್ ನಲ್ಲಿ ವಿಕ್ರಮ್, ಬೀಸ್ಟ್ ಹಿಂದಿಕ್ಕಿದ ವಿಕ್ರಾಂತ್ ರೋಣ; ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ?

ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಸಿನಿಮಾಕ್ಕೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಓಪನಿಂಗ್ ಕಂಡುಬಂದಿದೆ. ಹಿಂದಿ ಬೆಲ್ಟ್ ನಲ್ಲಿ ಮೊದಲ ದಿನ ಸುಮಾರು 1 ಕೋಟಿ ರೂ. ಬಾಚಿದೆ ಎನ್ನಲಾಗುತ್ತಿದೆ

ವಿಕ್ರಾಂತ್ ರೋಣ
Nagaraja AB
Updated On : 29 Jul 2022, 3:07 pm

ಕಿಚ್ಚ ಸುದೀಪ್ ಅಭಿನಯದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ಸಿನಿಮಾಕ್ಕೆ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಓಪನಿಂಗ್ ಕಂಡುಬಂದಿದೆ. ಹಿಂದಿ ಬೆಲ್ಟ್ ನಲ್ಲಿ ಮೊದಲ ದಿನ ಸುಮಾರು 1 ಕೋಟಿ ರೂ. ಬಾಚಿದೆ ಎನ್ನಲಾಗುತ್ತಿದೆ.

ಈ ಮೂಲಕ  ಈ ಹಿಂದೆ ತೆರೆಕಂಡಿದ್ದ ವಿಕ್ರಮ್, ವಾಲಿಮೈ, ಬೀಸ್ಟ್ ಮತ್ತು 777 ಚಾರ್ಲಿ ಸಿನಿಮಾವನ್ನು ವಿಕ್ರಾಂತ್ ರೋಣ ಹಿಂದಿಕ್ಕಿದೆ. ಈ ಯಾವ ಚಿತ್ರಗಳು ಕೂಡಾ ಮೊದಲ ದಿನ ರೂ. 50 ಲಕ್ಷಕ್ಕಿಂತ ಹೆಚ್ಚಿನ ಕಲೆಕ್ಷನ್ ಮಾಡಿರಲಿಲ್ಲ.ಬಾಲಿವುಡ್ ಸ್ಟಾರ್  ಸಲ್ಮಾನ್ ಖಾನ್, ವಿಕ್ರಾಂತ್ ರೋಣ ಚಿತ್ರದ ಹಿಂದಿ ಆವೃತ್ತಿಯನ್ನು ಬಿಡುಗಡೆ ಮಾಡಿದ್ದಾರೆ.

ಆದರೆ, ರಾಜ್ಯದಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ . ಓರ್ ಮ್ಯಾಕ್ಸ್ ವರದಿ ಪ್ರಕಾರ ಮೊದಲ ಸುಮಾರು 16 ರಿಂದ 17 ಕೋಟಿ ರೂ. ಕಲೆಕ್ಷನ್ ಮಾಡಿದೆ. ದೇಶಾದ್ಯಂತ ಸುಮಾರು 40 ರಿಂದ 45 ಕೋಟಿ ಬಾಚಿದೆ ಎನ್ನಲಾಗುತ್ತಿದೆ. ಆದರೆ, ನಿರ್ದಿಷ್ಟವಾಗಿ ಎಷ್ಟು ಕೋಟಿ ಕಲೆಕ್ಷನ್ ಮಾಡಿದೆ ಎಂಬುದರ ಮಾಹಿತಿ ದೊರೆತಿಲ್ಲ.

Advertisement

Advertisement

ಪುಷ್ಪ, ಆರ್ ಆರ್ ಆರ್ , ಕೆಜಿಎಫ್ ಚಾಪ್ಟರ್ 2 ಹಾಗೂ ಕಮಲ್ ಹಾಸನ್ ಅವರ ವಿಕ್ರಮ್ ನಂತರ 'ವಿಕ್ರಾಂತ್ ರೋಣ' ಅಪಾರ ನಿರೀಕ್ಷೆ ಹುಟ್ಟಿಸಿದ್ದ ಮತ್ತೊಂದು ದಕ್ಷಿಣ ಭಾರತದ ಸಿನಿಮಾವಾಗಿದೆ. ಆದರೆ, ಉತ್ತರ ಭಾರತ ಮಾರುಕಟ್ಟೆಯಲ್ಲಿ ಅಂತಹ  ಓಪನಿಂಗ್ ಕಂಡಿಲ್ಲ.

ಭಾರತೀಯ ಚಿತ್ರೋದ್ಯಮದ ವಿಶ್ಲೇಷಕ ಮನೋಬಾಲ ವಿಜಯ್ ಬಾಲನ್ ಪ್ರಕಾರ, ಕರ್ನಾಟಕದಲ್ಲಿ 18.30 ಕೋಟಿ, ಆಂಧ್ರ ಪ್ರದೇಶದಲ್ಲಿ 2.10 ಕೋಟಿ ಸೇರಿದಂತೆ ದೇಶಾದ್ಯಂತ 26. 49 ಕೋಟಿ ರೂ. ಕಲೆಕ್ಷನ್ ಮಾಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement