ನಯನತಾರಾ-ವಿಘ್ನೇಶ್ ಶಿವನ್ 
ಸಿನಿಮಾ ಸುದ್ದಿ

ನವದಂಪತಿ ನಯನತಾರಾ-ವಿಘ್ನೇಶ್ ತಿರುಪತಿ  ಭೇಟಿ; ವಿವಾದಕ್ಕೆ ಸೃಷ್ಟಿ!

ಜಸ್ಟ್ ಮ್ಯಾರೀಡ್ ದಂಪತಿ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ತಿರುಪತಿಯ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. 

ತಿರುಮಲ: ಜಸ್ಟ್ ಮ್ಯಾರೀಡ್ ದಂಪತಿ ನಟಿ ನಯನತಾರಾ ಮತ್ತು ಅವರ ಪತಿ ವಿಘ್ನೇಶ್ ಶಿವನ್ ತಿರುಪತಿಯ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿವಾದಕ್ಕೆ ಸಿಲುಕಿದ್ದಾರೆ. 

ಗುರುವಾರ ಮಹಾಬಲಿಪುರಂನಲ್ಲಿ ನಡೆದ ವಿವಾಹದ ನಂತರ, ದಂಪತಿ ವೆಂಕಟೇಶ್ವರನ ಕಲ್ಯಾಣೋತ್ಸವದಲ್ಲಿ ಭಾಗವಹಿಸಲು ತಿರುಪತಿಯ ಬೆಟ್ಟದ ದೇವಸ್ಥಾನಕ್ಕೆ ತೆರಳಿದ ಜೋಡಿ ತಿರುಪತಿ ತಿಮ್ಮಪ್ಪನ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅಂತರ್ಜಾಲದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ, ನಯನತಾರಾ ಅವರು ತಮ್ಮ ಪಾದರಕ್ಷೆಗಳೊಂದಿಗೆ ದೇಗುಲದ ಆವರಣದಲ್ಲಿ ನಡೆಯುತ್ತಿರುವುದು ಕಂಡುಬಂದಿದೆ.ತಿರುಮಲ ತಿರುಪತಿ ದೇವಸ್ತಾನಂ ಮಂಡಳಿಯ ಮುಖ್ಯ ವಿಜಿಲೆನ್ಸ್ ಸೆಕ್ಯುರಿಟಿ ಆಫೀಸರ್ ನರಸಿಂಹ ಕಿಶೋರ್ ಪ್ರಕಾರ, ದೇವಾಲಯದ ಆವರಣದಲ್ಲಿ ಚಪ್ಪಲಿಯನ್ನು ಧರಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ನಯನತಾರಾ ಅವರು  ಮಾದ ಬೀದಿಗಳಲ್ಲಿ ಪಾದರಕ್ಷೆಗಳೊಂದಿಗೆ ತಿರುಗಾಡುತ್ತಿರುವುದನ್ನು ನಮ್ಮ ಸೆಕ್ಯುರಿಟಿ ತಕ್ಷಣವೇ ನೋಡಿ ಪ್ರತಿಕ್ರಿಯಿಸಿದರು.  ಅವರು ದೇವಾಲಯದ ಆವರಣದಲ್ಲಿ ಫೋಟೋ ಶೂಟ್ ಮಾಡಿರುವುದನ್ನು ನಾವು ಗಮನಿಸಿದ್ದೇವೆ. ಪವಿತ್ರ ದೇಗುಲದ ಒಳಗೆ ಖಾಸಗಿ ಕ್ಯಾಮೆರಾಗಳನ್ನು ಅನುಮತಿಸಲಾಗುವುದಿಲ್ಲ ಅವರು ಹೇಳಿದರು.

ಶೀಘ್ರದಲ್ಲೇ ನಟಿ ನಯನತಾರಾಗೆ ಲೀಗಲ್ ನೋಟಿಸ್ ನೀಡಲಿದ್ದೇವೆ ಎಂದು ತಿಳಿಸಿದ ಅವರು, ನಾವು ನಯನತಾರಾಗೆ ನೋಟಿಸ್ ನೀಡುತ್ತಿದ್ದೇವೆ. ಈಗಾಗಲೇ ನಾವು ಅವರೊಂದಿಗೂ ಮಾತನಾಡಿದ್ದೇವೆ. ಈ ವೇಳೆ ಅವರು ಲಾರ್ಡ್ ಬಾಲಾಜಿ, ಟಿಟಿಡಿ ಮತ್ತು ಯಾತ್ರಾರ್ಥಿಗಳಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಪತ್ರಿಕೆಗಳಿಗೆ ಬಿಡುಗಡೆ ಮಾಡುವುದಾಗಿ ಹೇಳಿದರು. ಆದರೂ ನಾವು ಆಕೆಗೆ ನೋಟಿಸ್ ನೀಡಲಿದ್ದೇವೆ ಎಂದರು. ಈ ನಡುವೆ ವಿಘ್ನೇಶ್ ಶಿವನ್ ಹೇಳಿಕೆ ನೀಡಿ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದಾರೆ.

ಮಹಾಬಲಿಪುರಂನ ಖಾಸಗಿ ರೆಸಾರ್ಟ್‌ನಲ್ಲಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್  ಗುರುವಾರ ಮದುವೆಯಾದರು. ಮದುವೆಯಲ್ಲಿ ರಜನಿಕಾಂತ್, ಶಾರುಖ್ ಖಾನ್ ಮತ್ತು ನಿರ್ದೇಶಕ ಅಟ್ಲಿ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT