ನಟ ಡಾಲಿ ಧನಂಜಯ್ 
ಸಿನಿಮಾ ಸುದ್ದಿ

ಗ್ಯಾಂಗ್'ಸ್ಟರ್ ಡ್ರಾಮಾ 'ಹೆಡ್ ಬುಷ್' ಚಿತ್ರ ಅಕ್ಟೋಬರ್ 21ಕ್ಕೆ ಬಿಡುಗಡೆ

ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ.

ಡಾಲಿ ಧನಂಜಯ್ ಅಭಿನಯದ ಹೆಡ್ ಬುಷ್ ಚಿತ್ರ ಅಕ್ಟೋಬರ್ 21 ರಂದು ಬಿಡುಗಡೆಯಾಗಲಿದೆ.

ಬೆಂಗಳೂರಿನ ಒಂದು ಕಾಲದ ಭೂಗತ ದೊರೆ ಡಾನ್‌ ಎಂ.ಪಿ ಜಯರಾಜ್‌ ಅವರ ಜೀವನಾಧಾರಿತ ಚಿತ್ರ ಇದಾಗಿದ್ದು, ಸಿನಿಮಾವನ್ನು ಅಕ್ಟೋಬರ್ 21ರ ದೀಪಾವಳಿ ಹಬ್ಬದಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.

ಪಾಯಲ್ ರಜಪೂತ್ ಸ್ಯಾಂಡಲ್ವುಡ್"ಗೆ ಪಾದಾರ್ಪಣೆ ಮಾಡುತ್ತಿರುವ ಮೊದಲ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡುತ್ತಿದ್ದು, ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್, ಲೂಸ್ ಮಾದ ಖ್ಯಾತಿಯ ಯೋಗಿ, ರಘು ಮುಖರ್ಜಿ, ವಸಿಷ್ಟ ಎನ್ ಸಿಂಹ, ಮತ್ತು ಬಾಲು ನಾಗೇಂದ್ರ ನಟಿಸಿದ್ದಾರೆ.

ಡಾಲಿ ಪಿಕ್ಚರ್ಸ್‌ ಹಾಗೂ ಸೋಮಣ್ಣ ಟಾಕೀಸ್‌ ಮೂಲಕ ಚಿತ್ರ ನಿರ್ಮಾಣವಾಗಿದ್ದು, ಕೆಆರ್'ಡಿ ಸ್ಟುಡಿಯೋಸ್ ಚಿತ್ರ ವಿತರಣೆ ಮಾಡಲಿದೆ.

ಈ ನಡುವೆ ಧನಂಜಯ್ ಅಭಿಯನಯದ ಹಲವು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿ ನಿಂತಿವೆ. ಡಾಲಿ ಧನಂಜಯ್ ಅವರನ್ನು ಮುಂದೆ ಶಿವರಾಜ್ ಕುಮಾರ್ ಅಭಿನಯದ ಭೈರಾಗಿ ಚಿತ್ರದಲ್ಲಿ ನೋಡಬಹುದಾಗಿದೆ. ಈ ಚಿತ್ರ ಜುಲೈ.1 ಬಿಡುಗಡೆಯಾಗಲಿದೆ. ಇದಷ್ಟೇ ಅಲ್ಲಗೆ, ಆಗಸ್ಟ್ 12 ಮತ್ತು ಸೆಪ್ಟೆಂಬರ್ 9 ರಂದು ಬಿಡುಗಡೆಯಾಗಲಿರುವ ಮಾನ್ಸೂನ್ ರಾಗ ಹಾಗೂ ಜಮಾಲಿಗುಡ್ಡದಲ್ಲಿಯೂ ಧನಂಜಯ್ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಂಪುಟ ರಚನೆ ಕಸರತ್ತು: ನಿಯೋಜಿತ ಸಿಎಂ ಡಿಕೆ ಶಿವಕುಮಾರ್, ಹಂಗಾಮಿ ಸಿಎಂ ಸಿದ್ದರಾಮಯ್ಯ ದೆಹಲಿಗೆ ಪ್ರಯಾಣ

Congress ಸರ್ಕಾರವಿದ್ದರೂ ಹಿಮಾಚಲ ಪ್ರದೇಶದಲ್ಲಿ 3 ಪುರಸಭೆ ಗೆದ್ದ BJP, ಒಂದಕ್ಕೆ ಕಾಂಗ್ರೆಸ್ ತೃಪ್ತಿ!

ಐಶ್ವರ್ಯಾ ರೈ ಕೇನ್ಸ್ ಲುಕ್‌ಗೆ ಬಾಡಿ ಶೇಮಿಂಗ್: ಕಂಗನಾ ನಂತರ ಟ್ರೋಲರ್ಸ್ ವಿರುದ್ಧ ಮಾಧುರಿ ದೀಕ್ಷಿತ್ ಗರಂ!

ಡಿಕೆಶಿ ಪ್ರಮಾಣ ವಚನ ದಿನವೇ ಹೊಸ ಕಾಂಗ್ರೆಸ್ ಭವನಕ್ಕೆ ರಾಹುಲ್ ಗಾಂಧಿ ಶಂಕು ಸ್ಥಾಪನೆ; ಸ್ಥಳ ಪರಿಶೀಲಿಸಿದ ನಿಯೋಜಿತ ಸಿಎಂ

IPL 2026 Final: ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ; ತಂಡಕ್ಕೆ ಮರಳಿದ ಆಲ್ರೌಂಡರ್ Romario Shepherd

SCROLL FOR NEXT