ಪವಿತ್ರಾ ಲೋಕೇಶ್ 
ಸಿನಿಮಾ ಸುದ್ದಿ

ನಕಲಿ ಫೇಸ್​ಬುಕ್ ಖಾತೆ ತೆರೆದು, ಆಶ್ಲೀಲ ಸಂದೇಶ ರವಾನೆ: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್

ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ನಕಲಿ ಫೇಸ್ ​ಬುಕ್ ಖಾತೆ ತೆರೆದು, ಅನುಚಿತವಾಗಿ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಸೈಬರ್​ ಕ್ರೈಂ ಠಾಣೆಗೆ ನಟಿ ಪವಿತ್ರಾ ಲೋಕೇಶ್ ಅವರು ದೂರು ನೀಡಿದ್ದಾರೆ.

ಮೈಸೂರು: ಅಪರಿಚಿತ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ನಕಲಿ ಫೇಸ್ ​ಬುಕ್ ಖಾತೆ ತೆರೆದು, ಅನುಚಿತವಾಗಿ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿ ಮೈಸೂರಿನ ಸೈಬರ್​ ಕ್ರೈಂ ಠಾಣೆಗೆ ನಟಿ ಪವಿತ್ರಾ ಲೋಕೇಶ್ ಅವರು ದೂರು ನೀಡಿದ್ದಾರೆ.

ದೂರಿನಲ್ಲಿ ಅಪರಿಚಿತ ವ್ಯಕ್ತಿ ನನ್ನ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅಶ್ಲೀಲ ಸಂದೇಸಗಳನ್ನು ರವಾವಿಸುತ್ತಿದ್ದಾನೆ. ಅಲ್ಲದೆ, ಸುಳ್ಳು ಸುದ್ದಿಗಳನ್ನು ಹರಡಿ, ಘನತೆಗೆ ಧಕ್ಕೆ ತರುವ ಸಂದೇಶವನ್ನು ರವಾನಿಸಿ ಮಾನಸಿಕ ಕಿರುಕುಳ ನೀಡುತ್ತಿದ್ದಾನೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ದೂರು ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಠಾಣೆ ಪೊಲೀಸರು ನಕಲಿ ಖಾತೆ ಮೂಲಕ ಸುಳ್ಳು ಸುದ್ದಿ ಹರಡುತ್ತಿರುವ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ-ಟಿಬೆಟ್ ಗಡಿಯಲ್ಲಿ ಜಲಪ್ರಳಯ: ಸಾವಿನ ಸಂಖ್ಯೆ 469ಕ್ಕೆ ಏರಿಕೆ; 1,400ಕ್ಕೂ ಹೆಚ್ಚು ಜನ ನಾಪತ್ತೆ, ಮತ್ತೊಂದು ಪ್ರವಾಹದ ಭೀತಿ..!

US-Iran ಸಂಘರ್ಷ ಉಲ್ಬಣ: ನೌಕಾ ದಿಗ್ಬಂಧನ ಮುಂದುವರಿದರೆ ಶೇ.100ರಷ್ಟು ಪ್ರತೀಕಾರ; ‘ನೆತನ್ಯಾಹು ನರಕಕ್ಕೆ’: ಟ್ರಂಪ್‌ಗೆ Tehran ಖಡಕ್ ಎಚ್ಚರಿಕೆ

ಪ್ರವಾಹದ ಅಬ್ಬರಕ್ಕೆ ನೇಪಾಳ ತತ್ತರ; ಸಂಪರ್ಕಕ್ಕೆ ಸಿಗದೆ 290 ಭಾರತೀಯರು, ರಕ್ಷಣಾ ಕಾರ್ಯಾಚರಣೆ ಚುರುಕು..!

ಸಿಲಿಕಾನ್ ಸಿಟಿಯಲ್ಲಿ ಮಧ್ಯರಾತ್ರಿ ಗುಂಡಿನ ಸದ್ದು; ಮಾರಕಾಸ್ತ್ರ ಹಿಡಿದು ಅಬ್ಬರಿಸುತ್ತಿದ್ದ ರೌಡಿಶೀಟರ್ ಹೆಡೆಮುರಿ ಕಟ್ಟಿದ ಬೆಂಗಳೂರಿನ ಪೊಲೀಸರು

Nepal Floods: ಸಾವಿನ ಸಂಖ್ಯೆ 359ಕ್ಕೆ ಏರಿಕೆ; 288 ಭಾರತೀಯರು ಸೇರಿ 826 ಮಂದಿ ನಾಪತ್ತೆ; ಮತ್ತೆ ಪ್ರವಾಹ ಭೀತಿ! ಹೊಸ ಸರೋವರ ಪತ್ತೆ!