ಆದಿ ಪುರುಷ್ ಚಿತ್ರದಲ್ಲಿ ಪ್ರಭಾಸ್ 
ಸಿನಿಮಾ ಸುದ್ದಿ

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿಪುರುಷ್' ಚಿತ್ರ ಬಿಡುಗಡೆ ದಿನಾಂಕ ಮುಂದೂಡಿಕೆ

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿ ಪುರುಷ್' ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಈ ಚಿತ್ರ ಇದೀಗ ಜೂನ್ 16, 2023ಕ್ಕೆ ಮುಂದೂಡಲ್ಪಟ್ಟಿರುವುದಾಗಿ ನಿರ್ದೇಶಕ ಓಂ ರಾವತ್ ತಿಳಿಸಿದ್ದಾರೆ.

ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಆದಿ ಪುರುಷ್' ಚಿತ್ರದ ಬಿಡುಗಡೆ ಮುಂದೂಡಲ್ಪಟ್ಟಿದೆ. ಸಂಕ್ರಾಂತಿಗೆ ರಿಲೀಸ್ ಆಗಬೇಕಿದ್ದ ಈ ಚಿತ್ರ ಇದೀಗ ಜೂನ್ 16, 2023ಕ್ಕೆ ಮುಂದೂಡಲ್ಪಟ್ಟಿರುವುದಾಗಿ ನಿರ್ದೇಶಕ ಓಂ ರಾವತ್ ತಿಳಿಸಿದ್ದಾರೆ.

ವೀಕ್ಷಕರಿಗೆ ಸಂಪೂರ್ಣ ದೃಶ್ಯ ಅನುಭವನ್ನು ಕಟ್ಟಿಕೊಡಬೇಕಾಗಿರುವುದರಿಂದ ತಂಡಕ್ಕೆ ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ. ಬಿಗ್ ಬಜೆಟ್ ನ ಆದಿ ಪುರುಷ್ ಚಿತ್ರದ ಟೀಸರ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಟು ಟೀಕೆ ವ್ಯಕ್ತವಾದ ಬೆನ್ನಲ್ಲೇ ಚಿತ್ರ ತಂಡ ಈ ನಿರ್ಧಾರ ತೆಗೆದುಕೊಂಡಿದೆ. ಈ  ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಹಿಂದೆ ಜನವರಿ 12, 2023ಕ್ಕೆ ಬಿಡುಗಡೆಯಾಗುವುದಾಗಿ ಘೋಷಿಸಲಾಗಿತ್ತು.

ಆದಿಪುರುಷ್ ಚಿತ್ರವಲ್ಲಾ, ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಬದ್ದತೆಯನ್ನು ಪ್ರತಿನಿಧಿಸುತ್ತದೆ. ವೀಕ್ಷಕರಿಗೆ ಸಂಪೂರ್ಣ ದೃಶ್ಯಾನುಭವ ನೀಡಲು ಚಿತ್ರ ತಂಡಕ್ಕೆ ಹೆಚ್ಚಿನ ಸಮಯಾವಕಾಶದ ಅಗತ್ಯವಿದೆ. ಹಾಗಾಗೀ ಜೂನ್ ಜೂನ್ 16, 2023 ರಂದು ಬಿಡುಗಡೆಯಾಗಲಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ. 

ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಆಲಿಖಾನ್ ರಾವಣನ ಪಾತ್ರದಲ್ಲಿ ಅಭಿನಯಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಂಚ ಪಡೆಯುತ್ತಿದ್ದ ಸಚಿವ ಕೆ.ಜೆ ಜಾರ್ಜ್‌ OSD ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ

Russian strike: ಉಕ್ರೇನ್‌ ರೈಲು ನಿಲ್ದಾಣದಲ್ಲಿ ರಷ್ಯಾ 'ಡ್ರೋನ್' ದಾಳಿ; ಓರ್ವ ಸಾವು, 30 ಮಂದಿಗೆ ಗಾಯ! Video

ಬೆಂಗಳೂರು: ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ; Oyo ರೂಂನಲ್ಲಿ ಮಹಿಳೆ ಆತ್ಮಹತ್ಯೆ!

ಪ್ರಧಾನಿ ಮೋದಿ ಜೊತೆಗಿನ ವರ್ಚುವಲ್ ಸಭೆಯಲ್ಲಿ, ಕೈ ಮುಗಿದು ಕುಳಿತ ನಿತೀಶ್ ಕುಮಾರ್; ವ್ಯಾಪಕ ಟೀಕೆ!: Video

ಜಿಲ್ಲೆಗೊಂದು ಮೆಡಿಕಲ್ ಕಾಲೇಜು, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವುದು ನನ್ನ ಗುರಿ: ಸಿಎಂ ಸಿದ್ದರಾಮಯ್ಯ

SCROLL FOR NEXT