ನಟ ನಾಗ ಚೈತನ್ಯ 
ಸಿನಿಮಾ ಸುದ್ದಿ

36ನೇ ಹುಟ್ಟುಹಬ್ಬದಂದು 'ಕಸ್ಟಡಿ' ಫಸ್ಟ್ ಲುಕ್‌ನಲ್ಲಿ ನಾಗ ಚೈತನ್ಯ, ಅಭಿಮಾನಿಗಳು ಫುಲ್ ಖುಷ್

ನಟ ಅಕ್ಕಿನೇನಿ ನಾಗ ಚೈತನ್ಯ ಅವರು ಬುಧವಾರ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಮುಂಬರುವ ಸಿನಿಮಾದ 'ಎನ್‌ಸಿ 22' ನಿರ್ಮಾಪಕರು ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ.

ನಟ ಅಕ್ಕಿನೇನಿ ನಾಗ ಚೈತನ್ಯ ಅವರು ಬುಧವಾರ ತಮ್ಮ 36ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಅವರ ಮುಂಬರುವ ಸಿನಿಮಾದ 'ಎನ್‌ಸಿ 22' ನಿರ್ಮಾಪಕರು ಅಭಿಮಾನಿಗಳಿಗೆ ಸರ್‌ಪ್ರೈಸ್‌ ನೀಡಿದ್ದಾರೆ. ನಿರ್ಮಾಪಕರು ಚಿತ್ರಕ್ಕೆ 'ಕಸ್ಟಡಿ' ಎಂಬ ಕುತೂಹಲಕಾರಿ ಶೀರ್ಷಿಕೆ ನೀಡಿದ್ದಾರೆ ಮತ್ತು ಹೊಸ ಅವತಾರದಲ್ಲಿ ನಾಗ ಚೈತನ್ಯ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ತೆಲುಗು-ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಪ್ರಮುಖ ಚಲನಚಿತ್ರ ನಿರ್ಮಾಪಕ ವೆಂಕಟ್ ಪ್ರಭು ನಿರ್ದೇಶಿಸಿದ್ದು, ಕೃತಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ಎನ್‌ಸಿ 22' ಎಂದು ಹೆಸರಿಡಲಾಗಿತ್ತು.

ಕಸ್ಟಡಿ' ನಾಗ ​​ಚೈತನ್ಯ ಅವರ ವೃತ್ತಿಜೀವನದಲ್ಲಿ ಅತ್ಯಂತ ಹೆಚ್ಚಿನ ಬಜೆಟ್ ಚಿತ್ರವಾಗಿದೆ. ಶ್ರೀನಿವಾಸ ಚಿತ್ತೂರಿ ಅವರು ಶ್ರೀನಿವಾಸ ಸಿಲ್ವರ್ ಸ್ಕ್ರೀನ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಚಿತ್ರನಿರ್ಮಾಪಕ ವೆಂಕಟ್ ಪ್ರಭು ಅವರು ನಾಗ ಚೈತನ್ಯ ಅವರನ್ನು ಸಂಪೂರ್ಣವಾಗಿ ಹೊಸ ಅವತಾರದಲ್ಲಿ ತೋರಿಸಿದ್ದಾರೆ. ಅದು ಪ್ರಭಾವಶಾಲಿ ಮತ್ತು ಉತ್ತೇಜಕವಾಗಿದೆ. ತಮ್ಮ ಪ್ರತಿಯೊಂದು ಚಿತ್ರಕ್ಕೂ ವಿಶಿಷ್ಟ ಅಡಿಬರಹವನ್ನು ನೀಡುವ ಮೂಲಕ ಹೆಸರುವಾಸಿಯಾಗಿರುವ ಪ್ರಭು, 'ಕಸ್ಟಡಿ'ಗೆ 'ನೀವು ಪ್ರಪಂಚದಲ್ಲಿ ನೋಡಲು ಬಯಸುವ ಬದಲಾವಣೆಯು ನಿಮ್ಮಲ್ಲಿ ಆಗಬೇಕು' ಎಂದು ಟ್ಯಾಗ್‌ಲೈನ್ ನೀಡಿದ್ದಾರೆ.

ಚಿತ್ರದ ತಾರಾಬಳಗ ಮತ್ತು ತಾಂತ್ರಿಕ ತಂಡ ಸದ್ಯ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ. ಅರವಿಂದ್ ಸ್ವಾಮಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದು, ನಟಿ ಪ್ರಿಯಾಮಣಿ ಪವರ್ ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಸಂಪತ್ ರಾಜ್, ಶರತ್‌ಕುಮಾರ್, ಪ್ರೇಮ್‌ಜಿ, ವೆನ್ನೆಲ ಕಿಶೋರ್, ಪ್ರೇಮಿ ವಿಶ್ವನಾಥ್ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಇಸೈಜ್ಞಾನಿ ಇಳಯರಾಜ ಮತ್ತು ಯುವನ್ ಶಂಕರ್ ರಾಜಾ ಸಂಗೀತ ಸಂಯೋಜಿಸಲು ಸಿದ್ಧವಾಗಿದ್ದು, ಪವನ್ ಕುಮಾರ್ ಅವರು ಸಿನಿಮಾವನ್ನು ಪ್ರಸ್ತುತಪಡಿಸಲಿದ್ದಾರೆ. ಅಬ್ಬೂರಿ ರವಿ ಸಂಭಾಷಣೆ ಬರೆಯುತ್ತಿದ್ದು, ಎಸ್.ಆರ್. ಕತೀರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT