ಶಿಲ್ಪಾ ಶೆಟ್ಟಿ 
ಸಿನಿಮಾ ಸುದ್ದಿ

ಬಾಲ್ಯದ ಊರನ್ನು ನೆನಪಿಸಿತು 'ಕಾಂತಾರ': ನಟಿ ಶಿಲ್ಪಾ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರಾ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಇದೀಗ ನಟಿ ಶಿಲ್ಪಾ ಶೆಟ್ಟಿಯವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ತಮ್ಮ ಬಾಲ್ಯದ ಊರನ್ನು ನೆನಪಿತು ಎಂದು ಮೂಲತಃ ಕರಾವಳಿ ಹುಡುಗಿಯಾಗಿರುವ ಶಿಲ್ಪಾ ಅವರು ಹೇಳಿದ್ದಾರೆ. 

ಚೆನ್ನೈ: ನಿರ್ದೇಶಕ ರಿಷಬ್ ಶೆಟ್ಟಿಯವರ ಕಾಂತಾರಾ ಚಿತ್ರಕ್ಕೆ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಇದೀಗ ನಟಿ ಶಿಲ್ಪಾ ಶೆಟ್ಟಿಯವರೂ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರವು ತಮ್ಮ ಬಾಲ್ಯದ ಊರನ್ನು ನೆನಪಿತು ಎಂದು ಮೂಲತಃ ಕರಾವಳಿ ಹುಡುಗಿಯಾಗಿರುವ ಶಿಲ್ಪಾ ಅವರು ಹೇಳಿದ್ದಾರೆ. 

ಚಿತ್ರ ವೀಕ್ಷಣೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಿಲ್ಪಾ ಶೆಟ್ಟಿಯವರು, ಎಂಥಾ ಅದ್ಭುತ ಸಿನಿಮಾ, ಸಿನಿಮಾ ನೋಡಿ ಮೈ ರೋಂಮಾಂಚನವಾಯ್ತು. ಓ ಮೈ ಗಾಡ್ ಎಂಥಾ ಸಿನಿಮಾ. ಚಿತ್ರದ ನರೇಟಿವ್, ವೈಬ್ ಮತ್ತು ಚಿತ್ರದಲ್ಲಿನ ಒಳ ಜಗತ್ತು ನೋಡುತ್ತಿದ್ದಂತೆ ಮೈ ರೊಮಾಂಚನವಾಯ್ತು ಎಂದು ಹೇಳಿದ್ದಾರೆ. 

ಚಿತ್ರದ ಕೊನೆಯಲ್ಲಿ ಗೂಸ್​​ಬಂಪ್ಸ್​​ ಬಂತು. ಸಿನಿಮಾ ನೋಡುತ್ತಿರುವಾಗ ಕ್ಲೈಮಾಕ್ಸ್​ ಸಮಯಲ್ಲಿ ಚಿತ್ರ ಮಂದಿರದಲ್ಲಿ ಕೂತಿದ್ದ ಎಲ್ಲಾ ಪ್ರೇಕ್ಷಕರನ್ನು ಸಿನಿಮಾದ ಒಳ ಪ್ರಪಂಚಕ್ಕೆ ಕರೆದುಕೊಂಡು ಹೋಗಿತ್ತು. ಅಷ್ಟು ಅದ್ಭುತ ಅನುಭವ ನೀಡಿದೆ ಈ ಸಿನಿಮಾ. ಇದು ಈ ಚಿತ್ರಕ್ಕಿರುವ ಶಕ್ತಿ. 

ಈ ಚಿತ್ರ ನೋಡಿದಾಕ್ಷಣ ನನಗೆ ನನ್ನ ಊರಿನ ನೆನಪಾಯ್ತು, ಎಲ್ಲರೂ ಈ ಚಿತ್ರವನ್ನು ನೋಡಲೇ ಬೇಕು. ತುಂಬಾ ಚನ್ನಾಗಿ ಕಥೆಯ ನರೇಷನ್ ಮಾಡಿದ್ದಾರೆ, ಅಭಿನಯವೂ ಅಷ್ಟೇ ಸುಂದರವಾಗಿ ಮೂಡಿಬಂದೆದೆ ಇದು ನಿಜಕ್ಕೂ ಹೃದಯ ಸ್ಪರ್ಷಿಯಾಗಿದೆ. ನಂಬಿಕೆ ಆಧರಿಸಿದ ಈ ಚಿತ್ರ ನಿಜಕ್ಕೂ ತುಂಬಾ ಅದ್ಭುತವಾಗಿದೆ ಎಂದು ಹೇಳಿದ್ದಾರೆ. 

ಅಲ್ಲದೆ, ರಿಷಬ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಚಿತ್ರದ ಯಶಸ್ಸನ್ನು ಅನುಭವಿಸಿ ಇದು ನಿಜಕ್ಕೂ ಒಳ್ಳೆ ಸಿನಿಮಾ ಎಂದು ತಿಳಿಸಿದ್ದಾರೆ. 

ಕೆಲ ದಿನಗಳ ಹಿಂದಷ್ಟೇ ತಮಿಳು ಸ್ಟಾರ್ ನಟ ಧನುಷ್ ಹಾಗೂ ತೆಲುಗು ಸ್ಟಾರ್ ನಟ ಪ್ರಭಾಸ್ ಅವರು ಕಾಂತಾರ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video

ಒಂದು ಕಾಣದ ಕಣದ ಹುಡುಕಾಟ (ವಿಜ್ಞಾನ ವಿಶೇಷ)