ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ದುಬೈ ಉದ್ಯಮಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಜೋಶ್' ನಟಿ ಶಮ್ನಾ ಕಾಸಿಂ

ಸ್ಯಾಂಡಲ್'ವುಡ್'ನ ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶಮ್ನಾ ಕಾಸಿಮ್ ಹಾಗೂ ಅವರ ಪತಿ ಶನಿದ್ ಆಸಿಫ್ ಅಲಿ
Manjula VN
Updated On : 25 Oct 2022, 12:52 pm

ಸ್ಯಾಂಡಲ್'ವುಡ್'ನ ಜೋಶ್ ಸಿನಿಮಾ ಖ್ಯಾತಿಯ ನಟಿ ಪೂರ್ಣಾ ಅಲಿಯಾಸ್​ ಶಮ್ನಾ ಕಾಸಿಮ್​ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ದುಬೈ ಮೂಲದ ಉದ್ಯಮಿ ಶನಿದ್ ಆಸಿಫ್ ಅಲಿ ಜೊತೆ ಶಮ್ನಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ನವ ದಂಪತಿಗಳಿಗೆ ಅಭಿಮಾನಿಗಳು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.

ಜೋಶ್​’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣಾ ಕಾಲಿರಿಸಿದ್ದರು. ಚಿತ್ರದಲ್ಲಿ ಪೂರ್ಣಾ ಅವರು ಮೀನಾ ಎಂಬ ಪಾತ್ರ ಮಾಡಿ ಜನಪ್ರಿಯ ಗಳಿಸಿದ್ದರು. 

Advertisement

Advertisement

ದುಬೈನಲ್ಲಿ ಪೂರ್ಣಾ ಅವರ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿದ್ದು. ಮದುವೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹಕ್ಕೆ ಕೇವಲ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement