ಸಿನಿಮಾ ಸುದ್ದಿ

ನನ್ನ ಸ್ವಂತ ಅನುಭವಗಳ ಆಧರಿಸಿ 'ಕಪಾಲ' ಸಿನಿಮಾ ಕಥೆ ಹೆಣೆದಿದ್ದೇನೆ: ನಿರ್ದೇಶಕ ವಿನಯ್ ಯದುನಂದನ್

Shilpa D

ಕಪಾಲ ಸಿನಿಮಾ ಮೂಲಕ ಚೊಚ್ಚಲ ನಿರ್ದೇಶಕರಾಗಿ ಕನ್ನಡ ಸಿನಿಮಾ ರಂಗಕ್ಕೆ ವಿನಯ್ ಯದುನಂದನ್ ಪಾದರ್ಪಣೆ ಮಾಡುತ್ತಿದ್ದು, ಈ ವಾರ ತೆರೆಗೆ ಬರಲಿದೆ.

ಯುವ ಪಡೆಗಳು ಸೇರಿಕೊಂಡು ಸಿದ್ಧಪಡಿಸಿರುವ ಚಿತ್ರ “ಕಪಾಲ”. ವಿನಯ್ ವಿದುನಂದನ್ ಅವರ ನಿರ್ದೇಶನದ, ಕುತೂಹಲಕರ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಕಪಾಲ ಚಿತ್ರವು ಇದೇ ಶುಕ್ರವಾರ ರಾಜ್ಯಾದ್ಯಂತ ಸುಮಾರು 70 ರಿಂದ 80 ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆಯಿತು.‌

ಅಭಿಮನ್ಯು ಪ್ರಜ್ವಲ್, ಪ್ರತೀಕ್ಷಾ ಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಅನಿವಾಸಿ ಕನ್ನಡಿಗರಾದ ಸೌಮ್ಯ ಕೆ. ಶೆಟ್ಟಿ ಅವರು ನಿರ್ಮಾಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾತನಾಡಿ ಹೊಸ ತಂಡವನ್ನು ಕಟ್ಟಿಕೊಂಡು ಮಾಡಿದ ಚಿತ್ರವಿದು.

ಮೂವರು ಒಡಹುಟ್ಟಿದವರ ಸುತ್ತ ನಡೆಯುವ ಕಥೆಯು ಪ್ರಮುಖ ಅಂಶವಾಗಿದೆ. ಚಿತ್ರಕಥೆಯು 3 ವಿಭಿನ್ನ ಟೈಮ್‌ಲೈನ್‌ಗಳಲ್ಲಿ ಚಲಿಸುತ್ತದೆ - ಪ್ರಸ್ತುತ, 10 ವರ್ಷಗಳ ಹಿಂದೆ ಮತ್ತು 70 ವರ್ಷಗಳ ಹಿಂದಿನದ್ದು. ಅವರೆಲ್ಲರೂ ಹೇಗೆ ಸಂಪರ್ಕ ಹೊಂದಿದ್ದರು ಹಾಗೂ ಸಹೋದರರು ಎದುರಿಸುತ್ತಿರುವ ಸವಾಲುಗಳು ಈ ಕಥೆಯ ಪ್ರಮುಖ ಅಂಶ ಎಂದು ವಿನಯ್ ಹೇಳಿದ್ದಾರೆ.

ಇದು ನಾನು ನೋಡಿದ ಮತ್ತು ಕೇಳಿದ ಕೆಲವು ವೈಯಕ್ತಿಕ ಅನುಭವಗಳನ್ನು ಆಧರಿಸಿದ ಕಥೆ" ಎಂದು ಅವರು ಉಲ್ಲೇಖಿಸುತ್ತಾರೆ. ಕಪಾಲ ಚಿತ್ರದ ಆರಂಭಿಕ ನಿರ್ಮಾಪಕರಾಗಿದ್ದ ಅರವಿಂದ್ ಅವರು ಕ್ಯಾನ್ಸರ್‌ನಿಂದ ಚಿತ್ರದ ಅರ್ಧದಲ್ಲೇ ನಿಧನರಾದರು. ನಂತರ ಅವರ ಸಹೋದರಿ ಸೌಮ್ಯಾ ಶೆಟ್ಟಿ ಆಸ್ಕರ್ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಾಣ ಮುಂದುವರಿಸಿದರು. ಚಿತ್ರಕ್ಕೆ  ಸಚಿನ್ ಬಸೂರ್ ಸಂಗೀತ ಮತ್ತು ಛಾಯಾಗ್ರಹಣವನ್ನು ಪ್ರವೀಣ್ ಎಂ ಪ್ರಭು ನಿರ್ವಹಿಸಿದ್ದಾರೆ.

SCROLL FOR NEXT