ಜಯರಾಮ್ ಮತ್ತು ಶಿವರಾಜ್ ಕುಮಾರ್ 
ಸಿನಿಮಾ ಸುದ್ದಿ

ಶಿವರಾಜ್ ಕುಮಾರ್ 'ಘೋಸ್ಟ್' ಸಿನಿಮಾದಲ್ಲಿ ತೆಲುಗು ನಟ ಜಯರಾಮ್!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಶಿವರಾಜ್ ಕುಮಾರ್ ತುಂಬಾ ಬ್ಯುಸಿಯೆಸ್ಟ್ ನಟ. ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರ ಕೊನೆಯ ಹಂತದಲ್ಲಿದೆ.

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಶಿವರಾಜ್ ಕುಮಾರ್ ತುಂಬಾ ಬ್ಯುಸಿಯೆಸ್ಟ್ ನಟ. ಶಿವಣ್ಣ ನಟನೆಯ 125ನೇ ಸಿನಿಮಾ ವೇದ ಚಿತ್ರ ಕೊನೆಯ ಹಂತದಲ್ಲಿದೆ.

ಇದರ ಜೊತೆಗೆ ರಾಕ್ ಲೈನ್ ಪ್ರೊಡಕ್ಷನ್ ನಲ್ಲಿ ನಿರ್ಮಾಣ ವಾಗುತ್ತಿರುವ ಯೋಗರಾಜ್ ಭಟ್ ನಿರ್ದೇಶನದ ಕರಟಕ-ದಮನಕ ಶೂಟಿಂಗ್ ಕೂಡ ಶೆಡ್ಯೂಲ್ ಆಗಿದೆ.

ಇವುಗಳ ನಡುವೆ ಶಿವಣ್ಣ, ಸಂದೇಶ್ ಪ್ರೊಡಕ್ಷನ್ ನಲ್ಲಿ ಬರುತ್ತಿರುವ ಘೋಸ್ಟ್ ಸಿನಿಮಾಗಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಚಿತ್ರ ತಂಡ ಕಲಾವಿದರ ಆಯ್ಕೆ ಪೈನಲ್ ಮಾಡಲಾಗುತ್ತಿದೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಲು ದಕ್ಷಿಣ ಭಾರತದ ಟಾಪ್ ನಟರಲ್ಲಿ ಒಬ್ಬರಾದ ಜಯರಾಮ್ ಅವರನ್ನು ನಿರ್ಮಾಪಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

ನಿರ್ದೇಶಕರು ಈಗಾಗಲೇ ಜಯರಾಮ್ ಅವರನ್ನು ಸಂಪರ್ಕಿಸಿದ್ದು, ಘೋಸ್ಟ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಜಯರಾಮ್ ಪಾದಾರ್ಪಣೆ ಮಾಡುವ ಸಾಧ್ಯತೆಯಿದೆ.

ಜಯರಾಮ್ ಪ್ರಸ್ತುತ ನಿರ್ದೇಶಕ ಶಂಕರ್-ರಾಮ್ ಚರಣ್ ಅವರ ಆರ್‌ಸಿ 15 ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಅವರೊಂದಿಗೆ ಮಹೇಶ್ ಬಾಬು ಅವರ ಚಿತ್ರ ಸೇರಿದಂತೆ ಒಂದೆರಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಈಗಾಗಲೇ ಘೋಸ್ಟ್ ಚಿತ್ರತಂಡ ಬಹುಭಾಷಾ ನಟ ಪ್ರಶಾಂತ್ ನಾರಾಯಣನ್ ಅವರನ್ನು ಕರೆತಂದಿದ್ದಾರೆ. ಇಂಗ್ಲಿಷ್, ಹಿಂದಿ, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡಿದ ನಟ, ಘೋಸ್ಟ್ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಲಿದ್ದಾರೆ. 

ಅಚ್ಯುತ್ ಕುಮಾರ್, ದತ್ತಣ್ಣ ಮತ್ತು ಅವಿನಾಶ್ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಾಜೆಕ್ಟ್‌ಗಾಗಿ ತಯಾರಿ ಕಾರ್ಯಗಳು ನಡೆಯುತ್ತಿದ್ದು, ಹೆಚ್‌ಎಂಟಿ ಕಾರ್ಖಾನೆ ಮತ್ತು ಮಿನರ್ವ ಮಿಲ್ಸ್‌ನಲ್ಲಿ ತಂಡವು ಬೃಹತ್ ಸೆಟಪ್‌ನೊಂದಿಗೆ ಬರುತ್ತಿದೆ, ಶೇಕಡ 60 ರಷ್ಟು ಚಿತ್ರೀಕರಣ ಇಲ್ಲಿಯೇ ನಡೆಯಲಿದೆ..

ಔಟ್ ಡೋರ್ ಶೂಟಿಂಗ್ ಮೈಸೂರಿನಲ್ಲಿ ನಡೆಯಲಿದೆ, ಘೋಸ್ಟ್ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಟಗರು ಡಿಒಪಿ ಮಹೇಂದ್ರ ಸಿಂಹ ಈ ಚಿತ್ರಕ್ಕೆ ಛಾಯಾಗ್ರಹಣ ನಿರ್ವಹಿಸಲಿದ್ದಾರೆ. ಏತನ್ಮಧ್ಯೆ ಅವನೇ ಶ್ರೀಮನ್ನಾರಾಯಣ ನಿರ್ದೇಶಕ ಸಚಿನ್ ಅವರೊಂದಿಗಿನ ಶಿವರಾಜಕುಮಾರ್ ಹೊಸ ಸಿನಿಮಾ 2023 ರಲ್ಲಿ ಪ್ರಾರಂಭವಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಶಾಂತಿ ಮಾತುಕತೆ ವಿಫಲ ಬೆನ್ನಲ್ಲೇ Pakistanಗೆ ಜಾಕ್‌ಪಾಟ್‌: ಕತಾರ್, ಸೌದಿಯಿಂದ 5 ಬಿಲಿಯನ್ ಡಾಲರ್ ಆರ್ಥಿಕ ನೆರವು!

IPL 2026: ಖಂಡಿತಾ ಕ್ರಮ ಕೈಗೊಳ್ಳುತ್ತೇವೆ ; RR vs RCB ಪಂದ್ಯದ 'ಭ್ರಷ್ಟಾಚಾರ ವಿರೋಧಿ' ಶಿಷ್ಟಾಚಾರ ಉಲ್ಲಂಘನೆಗೆ BCCI ಖಡಕ್ ಪ್ರತಿಕ್ರಿಯೆ

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

ಇರಾನ್-ಅಮೆರಿಕ ಯುದ್ಧ ಮುಂದುವರೆದರೆ ಟ್ರಂಪ್ ಅಧ್ಯಕ್ಷ ಸ್ಥಾನಕ್ಕೇ ಕುತ್ತು!

SCROLL FOR NEXT