ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಿನಿಮಾ ಸುದ್ದಿ

ರೆಡ್ ಕಾಲರ್ ಮೂಲಕ ಹಿಂದಿ ಗೆ ಕಿಶೋರ್ ಪದಾರ್ಪಣೆ

ರೆಡ್ ಕಾಲರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಿಶೋರ್ ಪದಾರ್ಪಣೆ ಮಾಡುತ್ತಿದ್ದು, ಪ್ರಸ್ತುತ ಉತ್ತರ ಪ್ರದೇಶದ ಲಖನೌನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

Srinivasa Murthy VN
Updated On : 21 Sept 2022, 2:00 pm

ಬೆಂಗಳೂರು: ರೆಡ್ ಕಾಲರ್ ಚಿತ್ರದ ಮೂಲಕ ಬಾಲಿವುಡ್ ಗೆ ಕಿಶೋರ್ ಪದಾರ್ಪಣೆ ಮಾಡುತ್ತಿದ್ದು, ಪ್ರಸ್ತುತ ಉತ್ತರ ಪ್ರದೇಶದ ಲಖನೌನಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ವಸಂತಬಾಲನ್ ನಿರ್ದೇಶನದ ರಾಜಕೀಯ ವೆಬ್ ಸೀರೀಸ್ ಮತ್ತು ಚಿತ್ರವೊಂದರ ಚಿತ್ರೀಕರಣದ ನಡುವೆ ಕಿಶೋರ್ ಬಿಸಿಯಾಗಿದ್ದು, ಚಿತ್ರದ ಬಗ್ಗೆ ಮಾತನಾಡಿದ ಕಿಶೋರ್, “ರೆಡ್ ಕಾಲರ್ ಶೀರ್ಷಿಕೆ, ಮತ್ತು ಇದು ನನ್ನ ಮೊದಲ ಪೂರ್ಣ ಪ್ರಮಾಣದ ಹಿಂದಿ ಚಿತ್ರವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾತ್ರಕ್ಕಿಂತ ಕಥೆಗಾಗಿ ನಾನು ಕಾಂತಾರ ಭಾಗವಾಗಲು ಬಯಸಿದ್ದೆ: ನಟ ಕಿಶೋರ್

Advertisement

Advertisement

ನನ್ನ ಸ್ನೇಹಿತ ಮತ್ತು ಸಂಗೀತ ಸಂಯೋಜಕ ಧರ್ಮೇಂದ್ರ (ಧರ್ಮ ವಿಶ್) ಬರೆದ ಕಥೆಗೆ ರಥಾವರ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಇದನ್ನು ನಿರ್ದೇಶಿಸಿದ್ದಾರೆ. ಅವರು ಈ ಹಿಂದೆ ಸಂಗೀತ ದಂತಕಥೆ ಎಆರ್ ರೆಹಮಾನ್‌ಗೆ ಕೆಲಸ ಮಾಡಿದ್ದಾರೆ ಮತ್ತು ರಥಾವರ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.

ಇದು ಅವರ ಮೊದಲ ಹಿಂದಿ ಚಿತ್ರವಾಗಲಿದೆ. ರೆಡ್ ಕಾಲರ್ ಒಂದು ಸಾಮೂಹಿಕ ಪ್ರಯತ್ನವಾಗಿದೆ. ಸ್ನೇಹಿತರು ನಿರ್ಮಾಪಕರಾಗಿ ಒಗ್ಗೂಡಿದ್ದಾರೆ. ತಂಡದ ಬಹುಪಾಲು ಪಾತ್ರದಲ್ಲಿ ಬೆಂಗಳೂರಿನ ಜನರು ಇದ್ದಾರೆ ಮತ್ತು ನಮ್ಮಲ್ಲಿ ದೇಶದ ಇತರ ಭಾಗಗಳಿಂದ ಬರುವ ಕಲಾವಿದರೂ ಇದ್ದಾರೆ ಎಂದು ಚಿತ್ರತಂಡ ಹೇಳಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments