ಚಿತ್ರದ ಪೋಸ್ಟರ್. 
ಸಿನಿಮಾ ಸುದ್ದಿ

ಗ್ಯಾಂಗ್'ಸ್ಟರ್ ಡ್ರಾಮಾ 'ಮುಧೋಳ್'ನಲ್ಲಿ ವಿಕ್ರಮ್‌ ರವಿಚಂದ್ರನ್‌ ನಟನೆ

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರಕ್ಕೆ 'ಮುಧೋಳ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಎರಡನೇ ಚಿತ್ರಕ್ಕೆ 'ಮುಧೋಳ್' ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.

ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ಕಿ ಹೊಸ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಯಿತು. ಇದರ ಜೊತೆಗೆ ಫಸ್ಟ್ ಲುಕ್'ನ್ನೂ ಬಿಡುಗಡೆ ಮಾಡಲಾಯಿತು.

ಚಿತ್ರ ತಂಡ ಈಗಾಗಲೇ 30 ದಿನಗಳ ಶೂಟಿಂಗ್'ನ್ನು ಪೂರ್ಣಗೊಳಿಸಿದ್ದು, ವಿಕ್ರಮ್ ರವಿಚಂದ್ರನ್ ಅವರು ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಚಿತ್ರದ ಟೀಸರ್'ನ್ನು ಬಿಡುಗಡೆ ಮಾಡಲಾಗಿತ್ತು. ಟೀಸರ್ ನಲ್ಲಿ ವಿಕ್ರಮ್ ಕೈದಿಯಾಗಿ ಕಾಣಿಸಿಕೊಂಡಿದ್ದು, ಸಹ ಕೈದಿಗಳಿಗೆ ಊಟ ಸಿದ್ಧಪಡಿಸುತ್ತಿರುವ ಸಂದರ್ಭದಲ್ಲಿ ಗ್ಯಾಂಗ್ ವೊಂದು ಅವರ ಮೇಲೆ ದಾಳಿ ಮಾಡುತ್ತದೆ. ಈ ವೇಳೆ ನಾಯಿಯೊಂದು ವಿಕ್ರಮ್ ಅವರನ್ನು ರಕ್ಷಣೆ ಮಾಡುವುದು ಕಂಡು ಬಂದಿದೆ.

ಕರ್ನಾಟಕದಲ್ಲಿ ಮುಧೋಳ್ ಎಂಬ ಸ್ಥಳವಿದೆ. ನಾಯಿಯ ತಳಿ ಕೂಡ ಇದೆ. ನಮ್ಮ ಚಿತ್ರದಲ್ಲಿ ಮುದೋಳ ನಾಯಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ನಿರ್ದೇಶಕ ಕಾರ್ತಿಕ್ ರಾಜನ್ ಅವರು ಹೇಳಿದ್ದಾರೆ.

ಅಷ್ಟಕ್ಕೂ ಕ್ರೇಜಿಸ್ಟಾರ್ ಪುತ್ರನ ಚಿತ್ರಕ್ಕೆ ಮುಧೋಳ್ ಎಂಬ ಟೈಟಲ್ ಕೊಟ್ಟಿದ್ದೇ ವಿ. ರವಿಚಂದ್ರನ್ ಅವರಂತೆ. ಚಿತ್ರದ ಆಫರ್ ಬಂದಾಗ ವಿಕ್ರಮ್ ಅವರು ರವಿಚಂದ್ರನ್ ಅವರಿಗೆ ಚಿತ್ರದ ಕಥೆಯನ್ನು ಹೇಳಿದ್ದಾರೆ. ಈ ವೇಳೆ ಚಿತ್ರಕ್ಕೆ ರವಿಚಂದ್ರನ್ ಅವರು ಮುಧೋಳ್ ಎಂದು ಹೆಸರು ನೀಡಿದ್ದಾರೆಂದು ತಿಳಿದುಬಂದಿದೆ.

ಚಿತ್ರಕ್ಕೆ ರಕ್ಷಾ ಮತ್ತು ವಿಜಯ್ ಕುಮಾರ್ ಅವರು ನಿರ್ಮಾಪಕರಾಗಿದ್ದರೆ, ವಿಕ್ರಮ್ ರವಿಚಂದ್ರನ್ ಅವರ ಹೋಮ್ ಬ್ಯಾನರ್ ಈಶ್ವರಿ ಪ್ರೊಡಕ್ಷನ್ಸ್ ಚಿತ್ರವನ್ನು ಹೊರತರುತ್ತಿದೆ.

ಈ ನಡುವೆ ಚಿತ್ರದ ಮುಂದಿನ ಚಿತ್ರೀಕರಣವನ್ನು ಶಿವಮೊಗ್ಗ, ಮುಧೋಳ ಮತ್ತು ಬೆಂಗಳೂರಿನಲ್ಲಿ ನಡೆಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ನಿರ್ಮಾಪಕರು ಸಂಗೀತ ಸಂಯೋಜಕ ಯುವರಾಜ್ ಮತ್ತು ಸಂಕಲನಕಾರ ಪಿಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದರೆ,  ಪಾತ್ರ ವರ್ಗ ಹಾಗೂ ಸಿಬ್ಬಂದಿಗಳ ಬಗ್ಗೆ ಚಿತ್ರತಂಡ ಮಾಹಿತಿಗಳನ್ನು ನೀಡಿಲ್ಲ.ಆದಾಗ್ಯೂ, ವಿಕ್ರಮ್ ರವಿಚಂದ್ರನ್ ಜೊತೆ ಸಂಜನಾ ಆನಂದ್ ನಾಯಕಿಯಾಗಿ ನಟಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT