ಸುದೀಪ್ ಜೊತೆ ಡಿಕೆ ಶಿವಕುಮಾರ್ ಮತ್ತು ನಲಪಾಡ್ 
ಸಿನಿಮಾ ಸುದ್ದಿ

ಡಿ.ಕೆ ಶಿವಕುಮಾರ್ ಜೊತೆ ನಟ ಸುದೀಪ್ ಫೋಟೋ ವೈರಲ್: ಬಯಲಾಯ್ತು ಭೇಟಿ ರಹಸ್ಯ!

ಈ ವೈರಲ್‌ ಫೋಟೋಗಳು ಸುದೀಪ್‌ ರಾಜಕೀಯಕ್ಕೆ ಬರುವ ವಿಚಾರಕ್ಕೆ ಪುಷ್ಠಿ ನೀಡುವಂತಿವೆ. ಸುದೀಪ್‌ ಅವರಿಗೆ ಕೈ ನಾಯಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರಾ? ಸುದೀಪ್‌ ಶೀಘ್ರದಲ್ಲೆ ರಾಜಕೀಯಕ್ಕೆ ಎಂಟ್ರಿ ಕೋಡೋದು ಪಕ್ಕಾನಾ? ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿವೆ

ಬೆಂಗಳೂರು: ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಮೂಲಕ ಸುದೀಪ್‌ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿ ಬಂದಿದ್ದವು.  ಇದೀಗ ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲಿ ಸುದೀಪ್‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಜೊತೆಗಿರುವ ಫೋಟೋಗಳು ಎಲ್ಲೆಡೆ ವೈರಲ್‌ ಆಗುತ್ತಿವೆ.

ಈ ವೈರಲ್‌ ಫೋಟೋಗಳು ಸುದೀಪ್‌ ರಾಜಕೀಯಕ್ಕೆ ಬರುವ ವಿಚಾರಕ್ಕೆ ಪುಷ್ಠಿ ನೀಡುವಂತಿವೆ. ಸುದೀಪ್‌ ಅವರಿಗೆ ಕೈ ನಾಯಕರು ಪಕ್ಷ ಸೇರುವಂತೆ ಆಹ್ವಾನಿಸಿದ್ದಾರಾ? ಸುದೀಪ್‌ ಶೀಘ್ರದಲ್ಲೆ ರಾಜಕೀಯಕ್ಕೆ ಎಂಟ್ರಿ ಕೋಡೋದು ಪಕ್ಕಾನಾ? ಎಂಬ ಪ್ರಶ್ನೆಗಳು ಅವರ ಅಭಿಮಾನಿಗಳಲ್ಲಿ ಮೂಡಿವೆ. ಈ ಎಲ್ಲದಕ್ಕೂ ಕಾರಣ, ಸುದೀಪ್‌ ಜೊತೆ ಡಿಕೆ ಶಿವಕುಮಾರ್ ಜೊತೆ ಅವರು ಇರುವ ಈ ವೈರಲ್ ಫೋಟೋ.

ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಸುದೀಪ್‌ ಈಗ ರಾಜಕೀಯ ಎಂಟ್ರಿ ಕೊಡುತ್ತಾರೆ ಎಂಬ ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. CCL ನಲ್ಲಿ ಬ್ಯುಸಿಯಿರುವ ಸುದೀಪ್‌, ವಿಕ್ರಾಂತ್‌ ರೋಣ ಬಳಿಕ ಯಾವುದೇ ಹೊಸ ಸಿನಿಮಾ ಬಗ್ಗೆ ಅನೌನ್ಸ್‌ ಮಾಡಿಲ್ಲ. ಇದೀಗ ಕಾಂಗ್ರೆಸ್‌ ಪಕ್ಷ ಸದೀಪ್‌ ಅವರಿಗೆ ಬಲೆ ಬೀಸಿದೆಯಾ? ಎಂಬ ಪ್ರಶ್ನೆಗಳು ಮೂಡಿವೆ.

ಡಿ.ಕೆ. ಶಿವಕುಮಾರ್ ಭೇಟಿಯ ಹಿಂದೆ ಯಾವ ಉದ್ದೇಶ ಇರಬಹುದು ಎಂದು ಸುದೀಪ್ ಆಪ್ತರಲ್ಲಿ ವಿಚಾರಿಸಿದಾಗ, ಅದು ರಾಜಕೀಯ ಭೇಟಿ ಅಲ್ಲ ಎಂದು ಗೊತ್ತಾಗಿದೆ. ಡಿಕೆಶಿ ಒಡೆತನದ ಮಾಲ್ ವೊಂದರಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರದ ಉದ್ಘಾಟನೆಗೆ ಸುದೀಪ್ ಅವರನ್ನು ಆಹ್ವಾನಿಸಲು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಡಿಕೆಶಿಗೆ ನಲಪಾಡ್ ಕೂಡ ಜೊತೆಯಾಗಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೀದಿ ಬಣಕ್ಕೆ ಫುಟ್‌ಬಾಲ್, ಬಂಡಾಯಗಾರರಿಗೆ ಲಕೋಟೆ: ಟಿಎಂಸಿ ಚಿಹ್ನೆ ಫ್ರೀಜ್ ಬೆನ್ನಲ್ಲೇ ಚುನಾವಣಾ ಆಯೋಗದಿಂದ ಮಹತ್ವದ ಆದೇಶ!

ಶೀಘ್ರದಲ್ಲೇ ನಂದಿನಿ ಹಾಲಿನ ದರ ಹೆಚ್ಚಳ? ಲೀಟರ್‌ ಹಾಲಿಗೆ ₹8 ಏರಿಕೆಗೆ ಒಕ್ಕೂಟಗಳ ಪ್ರಸ್ತಾವನೆ!

TMC ಹೆಸರು, ಚಿಹ್ನೆ ಮುಟ್ಟುಗೋಲು: ಚುನಾವಣಾ ಆಯೋಗ ಆದೇಶಕ್ಕೆ ತೀವ್ರ ಆಕ್ರೋಶ; 'ಪ್ರತಿಭಟನೆಯೊಂದಿಗೆ' ಹೊಸ ಹೆಸರು, ಚಿಹ್ನೆ ಸಲ್ಲಿಸಿದ ಮಮತಾ ಬ್ಯಾನರ್ಜಿ!

ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿಥಾರಿ ಹತ್ಯಾಕಾಂಡದ ಆರೋಪಿ ಸುರೇಂದ್ರ ಕೋಲಿ ಹರಿದ್ವಾರದಲ್ಲಿ ಶವವಾಗಿ ಪತ್ತೆ!

ಪ್ರಾಣಿ ಪ್ರಿಯರಿಗೆ ಸಿಹಿಸುದ್ದಿ: ಕುನೋದಲ್ಲಿ ಚೀತಾ ಸಂತಾನ ಅಭಿವೃದ್ಧಿ, ಭಾರತದಲ್ಲೇ ಹುಟ್ಟಿದ KGP12ಗೆ ನಾಲ್ಕು ಮರಿಗಳ ಜನನ! Video