ಪ್ರತಾಪ್ ನಾರಾಯಣ್ 
ಸಿನಿಮಾ ಸುದ್ದಿ

ಬೆಂಕಿಪಟ್ಣ ಖ್ಯಾತಿಯ ಪ್ರತಾಪ್ ನಾರಾಯಣ್‌ರ 'ಉತ್ತಮರು' ಸಿನಿಮಾ ಫೆಬ್ರುವರಿ 10 ರಂದು ಬಿಡುಗಡೆ

'ಒಂಥರಾ ಬಣ್ಣಗಳು' (2019) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬೆಂಕಿಪಟ್ಣ ಸಿನಿಮಾದ ನಟ ಪ್ರತಾಪ್ ನಾರಾಯಣ್ 4 ವರ್ಷಗಳ ನಂತರ ಇದೀಗ ತಮ್ಮ ಮುಂದಿನ ಚಿತ್ರ 'ಉತ್ತಮರು' ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. 

'ಒಂಥರಾ ಬಣ್ಣಗಳು' (2019) ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಬೆಂಕಿಪಟ್ಣ ಸಿನಿಮಾದ ನಟ ಪ್ರತಾಪ್ ನಾರಾಯಣ್ 4 ವರ್ಷಗಳ ನಂತರ ಇದೀಗ ತಮ್ಮ ಮುಂದಿನ ಚಿತ್ರ 'ಉತ್ತಮರು' ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. ಗ್ಯಾಂಗ್‌ಸ್ಟರ್ ಕಥೆಯುಳ್ಳ ಸಿನಿಮಾ ಎಂದು ಬಿಂಬಿಸಲಾದ ಈ ಚಿತ್ರಕ್ಕೆ ರೋಹಿತ್ ಶ್ರೀನಿವಾಸ್ ಅವರ ನಿರ್ದೇಶನ, ಚಿತ್ರಕಥೆ ಮತ್ತು ಛಾಯಾಗ್ರಹಣವಿದೆ. ಚಿತ್ರವು ಮುಂದಿನ ವಾರ ಫೆಬ್ರುವರಿ 10 ರಂದು ಥಿಯೇಟರ್‌ಗೆ ಬರಲು ಸಿದ್ಧವಾಗಿದೆ. 

'ಉತ್ತಮರು ಚಿತ್ರದ ಕಥೆ ಸತ್ಯ ಅವರ ಸುತ್ತ ಸುತ್ತುತ್ತದೆ. ಅವರ ಜೀವನವು ಆಕಸ್ಮಿಕ ಆಶ್ಚರ್ಯಗಳಿಂದ ತುಂಬಿದೆ. ಅದು ಅವರನ್ನು ಹೊಸ ಎತ್ತರಕ್ಕೆ ಎಳೆದೊಯ್ಯುತ್ತದೆ. ಆತ ಮುಂದೆ ಎದುರಿಸುವ ಪರಿಣಾಮಗಳು ಮತ್ತು ಅವನ ಕುಟುಂಬದ ಮೇಲೆ ಅದರ ಪ್ರಭಾವವು ಚಿತ್ರದ ಉಳಿದ ಭಾಗವನ್ನು ರೂಪಿಸುತ್ತದೆ' ಎಂದು ನಿರ್ದೇಶಕ ರೋಹಿತ್ ಹೇಳುತ್ತಾರೆ. 

ಉತ್ತಮರು ಚಿತ್ರಕ್ಕೆ ಆರ್.ಎಸ್. ಗಣೇಶ್ ನಾರಾಯಣ್ ಅವರ ಸಂಗೀತವಿದೆ ಮತ್ತು ಜಯಂತ್ ಕಾಯ್ಕಿಣಿ ಮತ್ತು ಅರಸು ಅಂತಾರೆ ಅವರ ಸಾಹಿತ್ಯವಿದೆ.

ಚಿತ್ರದಲ್ಲಿ ರಂಗಾಯಣ ರಘು, ಕೆ.ಎಸ್. ಶ್ರೀಧರ್, ಬಾಲ ರಾಜವಾಡಿ, ಕಡ್ಡಿಪುಡಿ ಚಂದ್ರು, ರಘುರಾಮ್, ಪಲ್ಲವಿ ಮೋಹನರಾಜು ಮತ್ತು ಬಿಂದು ರಕ್ಷಿತಿ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ. 

ಪ್ರತಾಪ್ ನಾರಾಯಣ್ ಅವರು ತಮ್ಮ ಮುಂದಿನ, ಹೊಯ್ಸಳ ಚಿತ್ರದ ಬಿಡುಗಡೆಗೆ ಕುತೂಹಲದಿಂದ ಎದುರು ನೋಡುತ್ತಿದ್ದು, ಇದು ಮಾರ್ಚ್ 30 ರಂದು ಬಿಡುಗಡೆಯಾಗಲಿದೆ. ಕಮರ್ಷಿಯಲ್ ಎಂಟರ್‌ಟೈನರ್ ಸಿನಿಮಾದಲ್ಲಿ ಧನಂಜಯ್ ನಾಯಕನಾಗಿ ನಟಿಸಿದ್ದಾರೆ ಮತ್ತು ಕೆಆರ್‌ಜಿ ಸ್ಟುಡಿಯೋಸ್ ಬ್ಯಾನರ್ ನಿರ್ಮಿಸಿರುವ ವಿಜಯ್ ಎನ್ ಅವರ ನಿರ್ದೇಶನದಲ್ಲಿ ಪ್ರತಾಪ್ ಪ್ರತಿನಾಯಕನಾಗಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT