ಸಿನಿಮಾ ಸುದ್ದಿ

ಕನ್ನಡಿಗ ರಿಕ್ಕಿ ಕೇಜ್‌ಗೆ 3ನೇ ಗ್ರ್ಯಾಮಿ ಪ್ರಶಸ್ತಿ: ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸಿದ ಸಂಗೀತ ಸಂಯೋಜಕ

Manjula VN

ಬೆಂಗಳೂರು: ಸಂಗೀತ ನಿರ್ದೇಶಕ, ಬೆಂಗಳೂರು ಮೂಲದ ರಿಕ್ಕಿ ಕೇಜ್‌‌ ಈ ವರ್ಷದ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಂಗೀತ ಸಂಯೋಜಕ ರಿಕಿ ಕೇಜ್ ಅವರು 'ಡಿವೈನ್ ಟೈಡ್ಸ್' ಆಲ್ಬಂಗಾಗಿ ಮೂರನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಸಹ ಸಂಗೀತಗಾರ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ರಿಕಿ ಕೇಜ್ ಪ್ರಶಸ್ತಿಯನ್ನು ಹಂಚಿಕೊಂಡರು. ಕೋಪ್ಲ್ಯಾಂಡ್ ಅವರು ಜನಪ್ರಿಯ ಬ್ರಿಟಿಷ್‌ ರಾಕ್‌ ಬ್ಯಾಂಡ್‌ ʻದಿ ಪೋಲಿಸ್‌ʼನ ಡ್ರಮ್ಮರ್‌ ಆಗಿದ್ದಾರೆ.

ಡಿವೈನ್‌ ಟೈಡ್ಸ್-‌ ಒಂಬತ್ತು ಹಾಡುಗಳ ಮ್ಯೂಸಿಕ್‌ ಆಲ್ಬಂ ಆಗಿದೆ. ಬೆಂಗಳೂರು ಮೂಲದ ರಿಕಿ ಕೇಜ್‌ ಅವರ ʻವಿಂಡ್ಸ್‌ ಆಫ್‌ ಸಂಸಾರʼ ಆಲ್ಬಂ 2015ರಲ್ಲಿ ಅವರಿಗೆ ಮೊದಲ ಗ್ರ್ಯಾಮಿ ಪ್ರಶಸ್ತಿಯನ್ನು ತಂದುಕೊಟ್ಟಿತ್ತು. ಕಳೆದ ವರ್ಷ ಈ ಜೋಡಿಯ ಇನ್ನೊಂದು ಆಲ್ಬಂಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು.

ಈ ನಡುವೆ ಪ್ರಶಸ್ತಿ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಿಕ್ಕಿ ಕೇಜ್ ಅವರು, ಈಗಷ್ಟೇ ನನ್ನ 3ನೇ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದೇನೆ. ಅತ್ಯಂತ ಕೃತಜ್ಞನಾಗಿದ್ದೇನೆ, ನಾನು ಮೂಕ ವಿಸ್ಮಿತನಾಗಿದ್ದೇನೆ! ನಾನು ಈ ಪ್ರಶಸ್ತಿಯನ್ನು ಭಾರತಕ್ಕೆ ಅರ್ಪಿಸುತ್ತೇನೆಂದು ಹೇಳಿದ್ದಾರೆ.

SCROLL FOR NEXT