ಗೌಳಿ ಚಿತ್ರದ ದೃಶ್ಯ 
ಸಿನಿಮಾ ಸುದ್ದಿ

ನನಗೆ ಸಿಗುವ ಎಲ್ಲಾ ಪಾತ್ರಗಳನ್ನು ಖುಷಿಯಿಂದ ಮಾಡುತ್ತೇನೆ: ಪಾವನಾ ಗೌಡ

ಪಾವನಾ ಗೌಡ ಅವರ ಸಿನಿಮಾದ ಪಟ್ಟಿ ನೋಡಿದರೆ, ಆಕೆ ಸಾಂಪ್ರದಾಯಿಕ ನಾಯಕ ನಟಿಯಂತೆ ತೋರುವುದಿಲ್ಲ. ಆಕೆಯ ಪಾತ್ರ ಸಿನಿಮಾದ ಮೌಲ್ಯ ಹೆಚ್ಚಿಸುವ ವಿಷಯದಲ್ಲಿ ಪಾವನಾ ಗೌಡ ಬಹಳ ವಿಶೇಷ ಗಮನ ನೀಡುತ್ತಾರೆ. 

ಪಾವನಾ ಗೌಡ ಅವರ ಸಿನಿಮಾದ ಪಟ್ಟಿ ನೋಡಿದರೆ, ಆಕೆ ಸಾಂಪ್ರದಾಯಿಕ ನಾಯಕ ನಟಿಯಂತೆ ತೋರುವುದಿಲ್ಲ. ಆಕೆಯ ಪಾತ್ರ ಸಿನಿಮಾದ ಮೌಲ್ಯ ಹೆಚ್ಚಿಸುವ ವಿಷಯದಲ್ಲಿ ಪಾವನಾ ಗೌಡ ಬಹಳ ವಿಶೇಷ ಗಮನ ನೀಡುತ್ತಾರೆ. 

ತೂತು ಮಡಿಕೆ ಸಿನಿಮಾದ ನಟಿಯ ಮುಂದಿನ ಸಿನಿಮಾ ಗೌಳಿ ಆಗಿದ್ದು, ಶ್ರೀನಗರ ಕಿಟ್ಟಿ ನಾಯಕನಟನಾಗಿ ಅಭಿನಯಿಸಿದ್ದಾರೆ.

ಚೊಚ್ಚಲ ನಿರ್ದೇಶನ ಮಾಡುತ್ತಿರುವ ಸೂರ ಅವರ ಬಲವಾದ ನಿರೂಪಣೆಯನ್ನು ಕೇಳಿದ ನಂತರ ಪಾವನಾ ಗೌಳಿ ಚಿತ್ರದಲ್ಲಿ ನಟಿಸಲು ನಿರ್ಧರಿಸಿದರು.

ಗೌಳಿ ಸೂರ ಅವರ ಮೊದಲ ನಿರ್ದೇಶನದ ಸಿನಿಮಾ ಆಗಿರಬಹುದು ಆದರೆ ಅವರು ಸಿನಿಮಾವನ್ನು ಅರ್ಥ ಮಾಡಿಕೊಂಡಿದ್ದಾರೆ. ಸೂರ ಎಂದಿಗೂ ಸ್ಕ್ರಿಪ್ಟ್‌ನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಿದ್ದರು ಹಾಗೂ ಚಿತ್ರಕಥೆಯನ್ನು ಹೇಗೆ ಉನ್ನತೀಕರಿಸಬಹುದು ಎಂಬ ಬಗ್ಗೆ ಮಾತನಾಡುತ್ತಿದ್ದರು. ಅವರು ಚಿತ್ರಕಥೆ ಹೇಳುತ್ತಿದ್ದಾಗ, ಅದು ನಿಜ ಜೀವನದ ಕಥೆ ಎಂದು ಹೇಳಿದ್ದರು. ಗೌಳಿ ಸಮುದಾಯದೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ ಚಲನಚಿತ್ರ ಮತ್ತು ವಿವಿಧ ಪಾತ್ರಗಳ ಬಗ್ಗೆ ಅವರ ಚರ್ಚೆಯು ಬಲವಾದ ಅಂಶವಾಗಿತ್ತು. ಅವರ ಸ್ಕ್ರಿಪ್ಟ್ ಬಗ್ಗೆ ನನಗೆ ವಿಶ್ವಾಸವಿತ್ತು ಎನ್ನುತ್ತಾರೆ ಪಾವನ.
 
ಸಿನಿಮಾಗೆ ನಿರ್ದೇಶಕರು ನೈಜವಾದ ವಿಧಾನವನ್ನು ಅನುಸರಿಸಿದ್ದಾರೆ ಹಾಗೂ ಕೆಲವೊಂದು ನೈಜ ಘಟನೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಗೌಳಿಯ ಸೌಂದರ್ಯ ಅದರ ಗಾಢತೆಯಲ್ಲಿ ಅಡಗಿದೆ, ಪ್ರತಿಯೊಬ್ಬ ನಟನೂ ಅದನ್ನು ಮುನ್ನೆಲೆಗೆ ತಂದಿದ್ದಾರೆ ಎನ್ನುತ್ತಾರೆ ಪಾವನ.

ಪಾವನಾ ಗೌಡ

ತನಗೆ ಸಿಗುವ ಪಾತ್ರಗಳನ್ನು ಹಾಗೂ ಅದರ ತಯಾರಿಯನ್ನು ಸಂಭ್ರಮಿಸುವುದಕ್ಕೆ ಇಷ್ಟಪಡುವುದಾಗಿ ಹೇಳುವ ಪಾವನಾ ಗೌಳಿ ಸಿನಿಮಾದಲ್ಲಿ ನಾಯಕ ಕಿಟ್ಟಿ ಅವರ ಪತ್ನಿ ಗಿರಿಜಾ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ.

ಇಡೀ ಚಿತ್ರಕಥೆಯನ್ನು ಗೌಳಿ ಹಾಗೂ ಆತನ ಪತ್ನಿ ಹಾಗೂ ಮಗುವಿನ ಸುತ್ತ ಹೆಣೆಯಲಾಗಿದೆ. ಗಿರಿಜಾ ಬಹಳಷ್ಟು ಮಂದಿ ನಡುವೆ ವಿದ್ಯಾವಂತೆಯಾಗಿದ್ದು ಸಾಮಾಜಿಕ ಜವಾಬ್ದಾರಿ ಹೊಂದಿರುವ ಸ್ವತಂತ್ರ ಮಹಿಳೆಯಾಗಿದ್ದಾಳೆ, ನನ್ನ ಪಾತ್ರ ಗೃಹಿಯನ್ನು ಪ್ರತಿನಿಧಿಸುತ್ತದೆ. ನೌಕರಿ ಮಾಡುವ ಮಹಿಳೆಯರಿಗೆ ಸಾಕಷ್ಟು ಕೀರ್ತಿ ಸಲ್ಲುತ್ತದೆಯಾದರೂ ಗೃಹಿಣಿಯರಿಗೆ ಸಮಾನವಾದ ಜವಾಬ್ದಾರಿಗಳೂ ಇರುತ್ತದೆ ಎನ್ನುತ್ತಾರೆ ಪಾವನ.

ನಿರ್ಮಾಪಕ ರಘು ಸಿಂಗಮ್ ಅವರ ಸೋಹನ್ ಫಿಲ್ಮ್ ಫ್ಯಾಕ್ಟರಿ ಬ್ಯಾನರ್ ನಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು, ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತವಿದೆ ಹಾಗೂ ಸಂದೀಪ್ ವಲ್ಲೂರಿ ಅವರ ಸಿನಿಮಾಟೋಗ್ರಫಿ ಇದೆ. ಶರತ್ ಲೋಹಿತಾಶ್ವ, ಗೋವಿಂದೇ ಗೌಡ, ಗೋಪಾಲಕೃಷ್ಣ ದೇಶಪಾಂಡೆ, ರಂಗಾಯಣ ರಘು, ನಮನ ಮುರೇದಾಯ, ರುದ್ರೇಶ್ ಸಿನಿಮಾದಲ್ಲಿ ಅಭಿನಯಿಸಿರುವ ಪ್ರಮುಖ ಕಲಾವಿದರಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

'ಇರಾನ್‌ಗೆ ಸಮವಸ್ತ್ರ, ಅಮೆರಿಕಕ್ಕೆ ಸೂಟ್': ಶಾಂತಿ ಮಾತುಕತೆಗೂ ಮುನ್ನ ಗಮನಸೆಳೆದ ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಉಡುಗೆ!

ಬೇಡ ಬೇಡ ಹೀಗೆಲ್ಲಾ ಮಾಡಬೇಡಿ: ರಸ್ತೆಯಲ್ಲೇ ಗಳಗಳನೆ ಅತ್ತ ನಟಿ ರಮ್ಯಾ

ಮುಂಬೈ: ಖ್ಯಾತ ಹಿರಿಯ ಗಾಯಕಿ ಆಶಾ ಭೋಸ್ಲೆ ನಿಧನ, ಗಣ್ಯರ ಕಂಬನಿ

SCROLL FOR NEXT