ನಮ್ ನಾಣಿ ಮದುವೆ ಪ್ರಸಂಗ ಚಿತ್ರದಲ್ಲಿ ಹೇಮಂತ್ ಹೆಗಡೆ 
ಸಿನಿಮಾ ಸುದ್ದಿ

ಹೇಮಂತ್ ಹೆಗಡೆ ನಿರ್ದೇಶನದ ‘ನಮ್‌ ನಾಣಿ ಮದ್ವೆ ಪ್ರಸಂಗ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರ

ಹೌಸ್‌ಫುಲ್ ಮತ್ತು ನಿಂಬೆಹುಳಿ ಸಿನಿಮಾಗಳ ನಿರ್ದೇಶಕ ಹೇಮಂತ್ ಹೆಗಡೆ ಅವರ ಮುಂಬರುವ ಚಿತ್ರ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸೆನ್ಸಾರ್‌ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.

ಹೌಸ್‌ಫುಲ್ ಮತ್ತು ನಿಂಬೆಹುಳಿ ಸಿನಿಮಾಗಳ ನಿರ್ದೇಶಕ ಹೇಮಂತ್ ಹೆಗಡೆ ಅವರ ಮುಂಬರುವ ಚಿತ್ರ ‘ನಮ್ ನಾಣಿ ಮದ್ವೆ ಪ್ರಸಂಗ’ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸೆನ್ಸಾರ್‌ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.

ಸೆನ್ಸಾರ್ ಅಧಿಕಾರಿಯಿಂದ ಚಿತ್ರಕ್ಕೆ ಆತ್ಮೀಯ ಸ್ವಾಗತ ಸಿಕ್ಕಿದೆ. ಬಹಳ ಸಮಯದ ನಂತರ ಸಂಪೂರ್ಣ ಹಾಸ್ಯಮಯ ಸಿನಿಮಾವನ್ನು ಪ್ರೇಕ್ಷಕರು ವೀಕ್ಷಿಸಲಿದ್ದಾಗೆ ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ನಿರ್ದೇಶಕರು.

ಶ್ರುತಿ ನದೀಶ್ - ಹೇಮಂತ್ ಹೆಗಡೆ

ಈ ಸಂತೋಷ ಪ್ರೇಕ್ಷಕರಲ್ಲೂ ಪ್ರತಿಫಲಿಸುತ್ತದೆ ಎಂಬ ನಂಬಿಕೆ ನನಗಿದೆ. ನಾವು ಕೂಲಂಕಷವಾದ ಕಾಮಿಡಿಯನ್ನು ವೀಕ್ಷಿಸಿ ಬಹಳ ದಿನಗಳಾಗಿವೆ. ಕೃಷಿಯಲ್ಲಿ ತೊಡಗಿರುವ ಯುವಜನರ ಕುರಿತಾದ ಈ ಚಿತ್ರದಲ್ಲಿ ಮದುಮಗಳು ಸಿಗದಿರುವ ಕುರಿತಾದ ಕಥೆಯನ್ನು ಹೊಂದಿದ್ದು, ತಮಾಷೆಯಾಗಿ ನಿಮಗೆ ಕಚಗುಳಿ ಇಡುವುದು ಖಚಿತ ಎಂದು ಅವರು ಹೇಳುತ್ತಾರೆ.

ಹೇಮಂತ್ ಹೆಗಡೆ ಅವರೇ ನಾಯಕನಾಗಿಯೂ ನಟಿಸಿರುವ ನಮ್ ನಾಣಿ ಮದ್ವೆ ಪ್ರಸಂಗ ಚಿತ್ರದಲ್ಲಿ ಗೀತಾಂಜಲಿ ಮಂಗಲ್, ಶ್ರುತಿ ನದೀಶ್, ಶ್ರೇಯಾ ವಸಂತ್, ರಾಜೇಶ್ ನಟರಂಗ ಮತ್ತು ಪದ್ಮಜಾ ರಾವ್ ತಾರಾಗಣದಲ್ಲಿದ್ದಾರೆ.

ಈ ಚಿತ್ರವು ಉತ್ತರ ಕೆನರಾ ಮತ್ತು ಯಕ್ಷಗಾನದಂತಹ ಸ್ಥಳೀಯ ಕಲೆಗಳನ್ನು ಅನ್ವೇಷಿಸಲು ಸಿದ್ಧವಾಗಿದೆ. ವಿ ಮನೋಹರ್ ಮತ್ತು ರವಿ ಮುರೂರ್ ಅವರ ಸಂಗೀತವಿದ್ದು, ಕೃಷ್ಣ ಭಂಜನ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT