ಒಟ್ಟಿಗೆ ಬಿರಿಯಾನಿ ಸವಿದ ರಿಷಬ್, ರಕ್ಷಿತ್ ಮತ್ತು ಪ್ರಮೋದ್ ಶೆಟ್ಟಿ 
ಸಿನಿಮಾ ಸುದ್ದಿ

ಹುಟ್ಟುಹಬ್ಬದಂದು ಒಂದೇ ತಟ್ಟೆಯಲ್ಲಿ ಬಿರಿಯಾನಿ ಸವಿದ ರಕ್ಷಿತ್- ರಿಷಬ್- ಪ್ರಮೋದ್ ಶೆಟ್ಟಿ: ಧರ್ಮ- ಶಿವ ಸ್ನೇಹಕ್ಕೆ ಫ್ಯಾನ್ಸ್‌ ಫಿದಾ!

ನಟ- ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದ್ದಾರೆ.

ನಟ- ನಿರ್ದೇಶಕ ರಿಷಬ್‌ ಶೆಟ್ಟಿ ಅವರು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಜೊತೆ ಬರ್ತ್‌ ಡೇ ಸೆಲೆಬ್ರೆಟ್‌ ಮಾಡಿದ್ದಾರೆ.

ಇದೇ ವೇಳೆ ಬೆಂಗಳೂರಿನಲ್ಲಿ ಒಂದೇ ಮನೆಯಲ್ಲಿ ಮೂವರು ಒಟ್ಟಿಗೆ ಸೇರಿ ಒಂದೇ ತಟ್ಟೆಯಲ್ಲಿ ಚಿಕನ್‌ ಬಿರಿಯಾನಿ ಸವಿದಿದ್ದಾರೆ. ಈ ಮೂಲಕ ಬಿರಿಯಾನಿ ಪಾರ್ಟಿ ಮಾಡಿದ್ದಾರೆ.  

ರಿಷಬ್‌ ಶೆಟ್ಟಿ, ರಕ್ಷಿತ್‌ ಶೆಟ್ಟಿ ಮತ್ತು ಪ್ರಮೋದ್‌ ಶೆಟ್ಟಿ ಸಿನಿಮಾಕ್ಕೆ ಬರುವುದಕ್ಕೂ ಮುಂಚಿನಿಂದಲೇ ಸ್ನೇಹಿತರು. ಸಿನಿಮಾ ಆಚೆಗೂ ಈ ಮೂವರ ಸ್ನೇಹದ ಹಾದಿ ತುಂಬ ದೊಡ್ಡದು. ಹಾಗಾಗಿ ಇಂದಿಗೂ ಈ ಮೂವರು ಒಟ್ಟಿಗೆ ಸೇರಿದರೆ ಅಲ್ಲಿ ತಮಾಷೆಯದ್ದೇ ಕಾರುಬಾರು ಸಿನಿಮಾ ಆಚೆಗೂ ಈ ಮೂವರ ಸ್ನೇಹದ ಹಾದಿ ತುಂಬ ದೊಡ್ಡದು. ಹಾಗಾಗಿ ಇಂದಿಗೂ ಈ ಮೂವರು ಒಟ್ಟಿಗೆ ಸೇರಿದರೆ ಅಲ್ಲಿ ತಮಾಷೆಯದ್ದೇ ಕಾರುಬಾರು.

ಇತ್ತ ಚಿತ್ರರಂಗದಲ್ಲಿ ಅನೇಕರು ʼಕಾಂತಾರʼದ ʼಶಿವʼನಿಗೆ ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ನಟ  ನಿರ್ದೇಶಕ ಹಾಗೂ ರಿಷಬ್‌ ಅವರ ಆತ್ಮೀಯ ಗೆಳೆಯರಲ್ಲಿ ಒಬ್ಬರಾಗಿರುವ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರು ಕೂಡ ರಿಷಬ್‌ ಅವರ ಬರ್ತ್‌ ಡೇ ಸ್ಪೆಷೆಲ್‌ ವಿಶ್‌ ಮಾಡಿದ್ದಾರೆ.

ʼತುಘ್ಲಕ್‌ʼ ಚಿತ್ರದಿಂದ ʼಕಿರಿಕ್‌ ಪಾರ್ಟಿʼವರೆಗೂ ರಿಷಬ್‌ – ರಕ್ಷಿತ್‌ ಜೊತೆಯಾಗಿಯೇ ಬೆಳೆದವರು. ಇಂದು ರಕ್ಷಿತ್‌ ʼ777 ಚಾರ್ಲಿʼ ಮೂಲಕ ಪ್ಯಾನ್‌ ಇಂಡಿಯಾ ನಟನಾಗಿದ್ದರೆ, ರಿಷಬ್‌ ʼಕಾಂತಾರʼದ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದಾರೆ. ಇಬ್ಬರು ಚಿತ್ರರಂಗದಲ್ಲಿ ಶ್ರೇಷ್ಠಮಟ್ಟಕ್ಕೆ ಬೆಳದರೂ ಇಂದಿಗೂ ಆತ್ಮೀಯ ಗೆಳೆಯರಾಗಿಯೇ ಜೊತೆಯಾಗಿದ್ದಾರೆ.

ರಿಷಬ್‌ ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ರಕ್ಷಿತ್‌ ಶೆಟ್ಟಿ ಹಾಗೂ ಪ್ರ,ಮೋದ್‌ ಶೆಟ್ಟಿ ಅವರು ಪಾಲ್ಗೊಂಡಿದ್ದಾರೆ. ಒಂದೇ ತಟ್ಟೆಯಲ್ಲಿ ಮೂವರು ಶೆಟ್ಟಿಗಳು ಬಿರಿಯಾನಿಯನ್ನು ಸೇವಿಸಿದ್ದಾರೆ. ಸಂತಸದ ಕ್ಷಣದ ವಿಡಿಯೋವನ್ನು ನಟಿ, ನಿರ್ದೇಶಕಿ ಶೀತಲ್‌ ಶೆಟ್ಟಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಊಟದ ಬಳಿಕ ಫ್ಯಾಮಿಲಿಯೊಂದಿಗೆ ರಿಷಬ್‌ ಕೇಕ್‌ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT