ಸಿನಿಮಾ ಸುದ್ದಿ

'ಡೈಮಂಡ್ ಕ್ರಾಸ್' ಸಿನಿಮಾಗೆ ನಾಗತಿಹಳ್ಳಿ ಚಂದ್ರಶೇಖರ್ ಅಣ್ಣನ ಮಗ ರಾಮ್ ದೀಪ್ ನಿರ್ದೇಶಕ!

Shilpa D

ತಮ್ಮ ಚಿಕ್ಕಪ್ಪ ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಹಲವಾರು ಸಿನಿಮಾಗಳಲ್ಲಿ ಕೆಲಸ ಮಾಡಿರುವ ರಾಮ್‌ದೀಪ್ ಈಗ ಡೈಮಂಡ್ ಕ್ರಾಸ್ ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿಕ್ಕಪ್ಪ ನಾಗತಿಹಳ್ಳಿ ಚಂದ್ರಶೇಖರ್ ಸ್ಫೂರ್ತಿಯಾಗಿದ್ದಾರೆ , ಚಲನಚಿತ್ರೋದ್ಯಮದಲ್ಲಿ ಅವರನ್ನು ಪ್ರೀತಿಯಿಂದ "ಮೇಷ್ಟ್ರು" ಎಂದು  ಕರೆಯಲಾಗುತ್ತದೆ, ಅಂತವರ ಜೊತೆ ಕೆಲಸ ಮಾಡುವುದು ನನ್ನ ಅದೃಷ್ಟ ಎಂದಿದ್ದಾರೆ.

ಬೆಳಗ್ಗೆ 9 ರಿಂದ  ಸಂಜೆ 5ರ ವರೆಗಿನ ನೌಕರಿ ಮಾಡುತ್ತಿದ್ದ ನಾನು 2002 ರಲ್ಲಿ ನನ್ನ ಚಿಕ್ಕಪ್ಪನೊಂದಿಗೆ ನನ್ನ ಚಲನಚಿತ್ರ ವೃತ್ತಿಜೀವನ ಏಕಕಾಲದಲ್ಲಿ ಪ್ರಾರಂಭಿಸಿದೆ. ಇಂಡಿಯಾ v/s ಇಂಗ್ಲೆಂಡ್ ಹೊರತುಪಡಿಸಿ ಅವರ ಎಲ್ಲಾ ಸಿನಿಮಾಗಳಲ್ಲಿ ನಾನು ಅವರಿಗೆ ಸಹಾಯಕನಾಗಿ ಕೆಲಸ ಮಾಡಿದೆ. ನಾನು ಕೆಲವು ವರ್ಷಗಳ ಕಾಲ ಯುಕೆಯಲ್ಲಿ ನನ್ನ ಐಟಿ ಕೆಲಸಕ್ಕೆ ಮರಳಿದಾಗ ಬ್ರೇಕ್ ತೆಗೆದುಕೊಂಡಿದ್ದೆ ಎಂದಿದ್ದಾರೆ.

ಆದರೆ ಚಲನ ಚಿತ್ರ ರಂಗದ ಮೇಲೆ ನನಗೆ ತುಂಬಾ ಉತ್ಸಾಹವಿದೆ ಎಂದು ಇತ್ತೀಚೆಗೆ ತಮ್ಮ ಚೊಚ್ಚಲ ಚಿತ್ರ ಡೈಮಂಡ್ ಕ್ರಾಸ್ ಚಿತ್ರೀಕರಣ ಪೂರ್ಣಗೊಳಿಸಿದ ನಂತರ  ರಾಮ್‌ದೀಪ್ ಹೇಳಿದ್ದಾರೆ. ನಿರ್ದೇಶಕರು ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.

"ಚಿತ್ರವು ಅಸಾಧಾರಣವಾದ ಪ್ರತಿಭಾವಂತ ಸೈಬರ್ ಹ್ಯಾಕರ್ ಅಪ್ಪು ನೇತೃತ್ವದ ಸಾಮಾಜಿಕ ನಾಯಕರ ತಂಡದ ಸುತ್ತ ಸುತ್ತುತ್ತದೆ, ಅವರು ಎಂಡಿ ಎಂದು ಕರೆಯಲ್ಪಡುವ ಸೈಬರ್ ಕ್ರೈಮ್ ದೈತ್ಯನ ವಿರುದ್ಧದ ಹೋರಾಟದ ಕತೆ ಇದಾಗಿದೆ ಎಂದು ರಾಮ್‌ದೀಪ್ ಬಹಿರಂಗಪಡಿಸುತ್ತಾರೆ.  ಡೈಮಂಡ್ ಕ್ರಾಸ್  ಥ್ರಿಲ್ಲಿಂಗ್ ಮತ್ತು ಆಕ್ಷನ್-ಪ್ಯಾಕ್ಡ್ ಎಂಟರ್ಟೈನರ್ ಎಂದು ಹೇಳಿದ್ದಾರೆ.

ನಾಗತಿಹಳ್ಳಿ ಕ್ರಿಯೇಷನ್ಸ್ ಸಹಯೋಗದಲ್ಲಿ ಮನೀಶ್ ಮೆಹ್ತಾ ನಿರ್ಮಿಸಿರುವ ಈ ಚಿತ್ರದಲ್ಲಿ ರೋಜರ್ ನಾರಾಯಣ್ ಜೊತೆಗೆ ರೂಪಿಕಾ, ರಜತ್ ಅಣ್ಣಪ್ಪ, ಮತ್ತು ಮನು ಕೆ.ಎಂ. ಮನು ಸೇರಿದಂತೆ ಹಲವು ಹೊಸಬರು ಸಿನಿಮಾದಲ್ಲಿ ನಟಿಸಿದ್ದಾರೆ ಎಂದು ರಾಮ್‌ದೀಪ್ ಉಲ್ಲೇಖಿಸಿದ್ದಾರೆ.

ರಾಮಚಂದ್ರ ಬಾಬು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ಸಂತೋಷ್ ರಾಧಾಕೃಷ್ಣನ್ ಛಾಯಾಗ್ರಹಣ ಮತ್ತು ಸಂಕಲನ ನಿರ್ವಹಿಸುತ್ತಿದ್ದಾರೆ.  ಅನೀಶ್ ಚೆರಿಯನ್ ಹಿನ್ನೆಲೆ ಸಂಗೀತ ಸಂಯೋಜಿಸಿದ್ದಾರೆ.

SCROLL FOR NEXT