ಅಭಿಷೇಕ್ ಅಂಬರೀಷ್-ಅವಿವಾ ಬಿಡಪ್ಪ ವಿವಾಹ 
ಸಿನಿಮಾ ಸುದ್ದಿ

ಸಪ್ತಪದಿ ತುಳಿದ 'ರೆಬೆಲ್ ಸ್ಟಾರ್' ಪುತ್ರ ಅಭಿಷೇಕ್: ಅವಿವಾ ಬಿಡಪ್ಪ ಜೊತೆ ಕಂಕಣ ಭಾಗ್ಯ

ಕನ್ನಡದ ರೆಬೆಲ್ ಸ್ಟಾರ್, ರಾಜಕಾರಣಿ ದಿವಂಗತ ಅಂಬರೀಷ್ ಹಾಗೂ ಸಂಸದೆ ನಟಿ ಸುಮಲತಾ ಅವರ ಪುತ್ರ ನಟ ಅಭಿಷೇಕ್ ಮತ್ತು ಮಾಡೆಲ್ ಅವಿವಾ ಬಿಡಪ್ಪ ಅವರ ವಿವಾಹ ಇಂದು ಸೋಮವಾರ)ಜೂನ್ 5) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಒಕ್ಕಲಿಗ ಸಂಪ್ರದಾಯ ಪ್ರಕಾರ ನೆರವೇರಿತು.

ಬೆಂಗಳೂರು: ಕನ್ನಡದ ರೆಬೆಲ್ ಸ್ಟಾರ್, ರಾಜಕಾರಣಿ ದಿವಂಗತ ಅಂಬರೀಷ್ ಹಾಗೂ ಸಂಸದೆ ನಟಿ ಸುಮಲತಾ ಅವರ ಪುತ್ರ ನಟ ಅಭಿಷೇಕ್ ಮತ್ತು ಮಾಡೆಲ್ ಅವಿವಾ ಬಿಡಪ್ಪ ಅವರ ವಿವಾಹ ಇಂದು ಸೋಮವಾರ)ಜೂನ್ 5) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಒಕ್ಕಲಿಗ ಸಂಪ್ರದಾಯ ಪ್ರಕಾರ ನೆರವೇರಿತು.

ಇಂದು ಬೆಳಗ್ಗೆ ಕರ್ಕಾಟಕ ಲಗ್ನದಲ್ಲಿ 9:30-10:30ರ ನಡುವೆ ಕರ್ಕಾಟಕ ಲಗ್ನ ಮುಹೂರ್ತದಲ್ಲಿ ಇಬ್ಬರೂ ಹಸೆಮಣೆ ಏರಿದ್ದಾರೆ. ಅಭಿಷೇಕ್ ಅವರು ಅವಿವಾಗೆ ಮಾಂಗಲ್ಯ ಧಾರಣೆ ಮಾಡಿದರು. ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದ ಕಲ್ಯಾಣಮಂಟಪದಲ್ಲಿ ಮದುವೆ ನೆರವೇರುತ್ತಿದೆ. 

ಅಂಬರೀಷ್ ಕುಟುಂಬ ರಾಜಕೀಯ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಹೀಗಾಗಿ, ಅನೇಕ ಸೆಲೆಬ್ರಿಟಿಗಳು, ರಾಜಕೀಯ ನಾಯಕರು, ಗಣ್ಯರು ವಿವಾಹ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಸ್ಯಾಂಡಲ್ವುಡ್ ಮಾತ್ರವಲ್ಲ ಟಾಲಿವುಡ್, ಕಾಲಿವುಡ್ ಸಿನಿಮಾ ಇಂಡಸ್ಟ್ರಿಯಿಂದಲೂ ಅನೇಕ ಗಣ್ಯರು ಮದುವೆ ಆಗಮಿಸುತ್ತಿದ್ದಾರೆ.

ಸಂಸದೆಯಾಗಿರುವ ಸುಮಲತಾ ಮೋದಿ ಸೇರಿದಂತೆ ಅನೇಕ ರಾಜಕಾರಣಿಗಳಿಗೆ ಆಹ್ವಾನ ಪತ್ರಿಕೆ ನೀಡಿದ್ದರು. ಎಲ್ಲಾ ಪಕ್ಷಗಳ ನಾಯಕರಿಗೆ ಸುಮಲತಾ ಆಹ್ವಾನ ನೀಡಿದ್ದು ಅನೇಕ ರಾಜಕಾರಣಿಗಳು ಮದುವೆಯಲ್ಲಿ ಭಾಗವಹಿಸಿ, ವಧು ವರರಿಗೆ ಆಶೀರ್ವಾದ ಮಾಡಿದ್ದಾರೆ.

ಅಭಿಷೇಕ್ ಮದುವೆಗೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್, ಸುಹಾಸಿನಿ ಮಣಿರತ್ನಂ, ಅನಿಲ್ ಕುಂಬ್ಳೆ, ನರೇಶ್​-ಪವಿತ್ರಾ ಲೋಕೇಶ್,ರಾಕಿಂಗ್ ಸ್ಟಾರ್ ಯಶ್ ದಂಪತಿ, ಮೋಹನ್ ಬಾಬು, ದಿವಂಗತ ನಟ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್  ಸೇರಿದಂತೆ ಹಲವರು ಆಗಮಿಸಿದ್ದಾರೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಅಭಿಷೇಕ್ ಜೆ.ಪಿ. ನಗರದ ತಮ್ಮ ನಿವಾಸದಿಂದ ಹೊಸ ಬಿಎಂಡಬ್ಲ್ಯು ಕಾರಿನಲ್ಲಿ ಅರಮನೆ ಮೈದಾನದತ್ತ ಹೊರಟರು. ಮದುವೆಗಾಗಿಯೇ ಹೊಸ ಕಾರನ್ನು ಖರೀದಿಸಿದೆ ಅಂಬಿ ಕುಟುಂಬ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT