ಚಕ್ರವರ್ತಿ ಚಂದ್ರಚೂಡ್ ಮತ್ತು ರಾಜವರ್ಧನ್ 
ಸಿನಿಮಾ ಸುದ್ದಿ

ಚಕ್ರವರ್ತಿ ಚಂದ್ರಚೂಡ್ ನಿರ್ದೇಶನದ 'ಐ ಯಾಮ್ ಕಲ್ಕಿ' ಸಿನಿಮಾದಲ್ಲಿ ರಾಜವರ್ಧನ್

ಪ್ರಣಯಂ, ಗಜರಾಮ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರಾಜವರ್ಧನ್ ಮುಂದಿನ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ಪ್ರಣಯಂ, ಗಜರಾಮ ಮುಂತಾದ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ರಾಜವರ್ಧನ್ ಮುಂದಿನ ಸಿನಿಮಾ ಆ್ಯಕ್ಷನ್ ಥ್ರಿಲ್ಲರ್ ಆಗಿದೆ.

ನಟ ಮತ್ತು ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಅವರೊಂದಿಗೆ ಐ ಆಮ್ ಕಲ್ಕಿ ಎಂಬ ಟೈಟಲ್ ನ ಚಿತ್ರದಲ್ಲಿ ರಾಜವರ್ಧನ್ ನಟಿಸಲಿದ್ದಾರೆ. ರಾಜವರ್ಧನ್ ಹುಟ್ಟು ಹಬ್ಬದಂದು ಈ ಕುರಿತು ಘೋಷಣೆ ಹೊರಡಿಸಲಾಗಿದೆ.

ರಾಜವರ್ಧನ್ ಅವರು ಈಗ ಪ್ರಿಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರವನ್ನು ತಮ್ಮ ನಟನಾ ವೃತ್ತಿಜೀವನದ ಅತ್ಯುತ್ತಮ ಸ್ಕ್ರಿಪ್ಟ್‌ಗಳಲ್ಲಿ ಒಂದೆಂದು ಹೇಳಿದ್ದಾರೆ. ಈ ಪ್ರಾಜೆಕ್ಟ್ ನಲ್ಲಿ ನಟಿಸಲು ನಿರ್ದೇಶಕ ಚಂದ್ರಚೂಡ್ ಅವರು ಕಥೆ ಬರೆದಿರುವುದು ಪ್ರಮುಖ ಕಾರಣವಾಗಿದೆ,

ಪಾತ್ರಕ್ಕಾಗಿ ಟ್ರಾನ್ಸ್ ಫಾರ್ಮೇಷನ್ ಆಗಲು ಹೇಳಿದ್ದಾರೆ. ನಾನು ಈಗಾಗಲೇ ಕೆಲಸ ಪ್ರಾರಂಭಿಸಿದ್ದೇನೆ. ಮುಂದಿನ ಕೆಲವು ತಿಂಗಳುಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ,  ಆ ನಂತರ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುತ್ತೇವೆ. ಚಿತ್ರ, ಮತ್ತು ವಿಶೇಷವಾಗಿ ನನ್ನ ಪಾತ್ರದ ಬಗ್ಗೆ ಶೀಘ್ರದಲ್ಲೇ  ತಿಳಿಸುವುದಾಗಿ ಹೇಳಿದ್ದಾರೆ.

ಏತನ್ಮಧ್ಯೆ, ಚಿತ್ರದ ಬಿಡುಗಡೆಗೆ ಸಿದ್ಧವಾಗುತ್ತಿರುವ ಪ್ರಣಯಂ ನಿರ್ಮಾಪಕರು ಇತ್ತೀಚೆಗೆ ಹಾಡೊಂದನ್ನು ರಿಲೀಸ್ ಮಾಡಿದ್ದಾರೆ. ನಾನು ಸದ್ಯ ಸುನೀಲ್ ಕುಮಾರ್ ನಿರ್ದೇಶನದ  ಗಜರಾಮ ಚಿತ್ರದ ಕೊನೆಯ ಹಂತದ ಚಿತ್ರೀಕರಣದಲ್ಲಿದ್ದೇನೆ ಎಂದು ರಾಜವರ್ಧನ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

IPL 2026 Qualifier 1: ಐಪಿಎಲ್ ಅಷ್ಟೇ ಅಲ್ಲ.. ಜಾಗತಿಕ ಟಿ20 ಕ್ರಿಕೆಟ್ ನಲ್ಲೂ RCB ಐತಿಹಾಸಿಕ ದಾಖಲೆ, ರೆಕಾರ್ಡ್ ಗಳ ಪಟ್ಟಿ!

SCROLL FOR NEXT