ಟ್ರೋಲ್ ಆದ ರಮ್ಯಾ 
ಸಿನಿಮಾ ಸುದ್ದಿ

ರಶ್ಮಿಕಾ 'ತತ್ಸಮ', ರಮ್ಯಾ 'ತದ್ಬವ'; ಹೆಚ್ಚಿನ ಮಾಹಿತಿಗಾಗಿ ನೋಡಿ ವೀಕೆಂಡ್ ವಿತ್ ಇಂಗ್ಲೀಷ್: ಸ್ಯಾಂಡಲ್ ವುಡ್ ಕ್ವೀನ್ ಹೆವಿ ಟ್ರೋಲ್!

ವೀಕೆಂಡ್‌ ವಿತ್‌ ರಮೇಶ್‌ ಸೀಸ್‌ನ್‌ 5ರ  ಮೊದಲ ಸಂಚಿಕೆ ಮಾರ್ಚ್‌ 25ರಂದು ಪ್ರಸಾರವಾಗಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಭಾಗಿಯಾಗಿದ್ದರು.

ಬೆಂಗಳೂರು: 'ವೀಕೆಂಡ್‌ ವಿತ್‌ ರಮೇಶ್‌' ಸೀಸ್‌ನ್‌ 5ರ  ಮೊದಲ ಸಂಚಿಕೆ ಮಾರ್ಚ್‌ 25ರಂದು ಪ್ರಸಾರವಾಗಿದೆ. ಮೊದಲ ಅತಿಥಿಯಾಗಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಭಾಗಿಯಾಗಿದ್ದರು. ಆದರೆ ವೀಕ್ಷಕರಿಗೆ ಕೊಂಚ ನಿರಾಸೆಯಾಗಿದ್ದು, ಸೋಷಿಯಲ್‌ ಮೀಡಿಯಾ ಮೂಲಕ ವ್ಯಕ್ತಪಡಿಸಿದ್ದಾರೆ.

ಒಂದು ವರ್ಗ ರಮ್ಯಾ ಅವರನ್ನು ಸಾಧಕರ ಸೀಟ್‌ನಲ್ಲಿ ನೋಡಬೇಕು ಎಂದು ಆಸೆಯನ್ನು ವ್ಯಕ್ತಪಡಿಸಿದ್ದರೂ ನಟಿ ಹೆಚ್ಚಾಗಿ ಇಂಗ್ಲೀಷ್‌ನಲ್ಲಿಯೇ ಮಾತನಾಡಿದ್ದರಿಂದ ಟ್ರೋಲ್‌ಗೆ ಗುರಿಯಾಗಿದ್ದಾರೆ. ಇಡೀ ಕಾರ್ಯಕ್ರಮದಲ್ಲಿ ರಮ್ಯಾ ಅವರು ಕನ್ನಡ ಬಳಸಿದ್ದು ಕಡಿಮೆ ಎಂದು ನೆಟ್ಟಗರು ಟ್ರೋಲ್‌ ಮಾಡಿದ್ದಾರೆ.

ವೀಕೆಂಡ್ ವಿತ್ ರಮೇಶ್ ಸೀಸನ್ 5 ಕಾರ್ಯಕ್ರಮದಲ್ಲಿ ರಮ್ಯಾ ಸೀರೆಯುಟ್ಟು ವೇದಿಕೆ ಮೇಲೆ ಬರುತ್ತಿದೆ, ಅಭಿಮಾನಿಗಳು ಫಿದಾ ಆಗಿದ್ದರು. ಇತ್ತ ಕಿರುತೆರೆ ವೀಕ್ಷಕರು ರಮ್ಯಾ ಬದುಕನ್ನು ತಿಳಿದುಕೊಳ್ಳುವುದಕ್ಕೆ ಕಾತುರದಿಂದ ಕಾದು ಕೂತಿದ್ದರು. ಆದರೆ, ವೀಕ್ಷಕರು ಸ್ಪಲ್ಪ ಹೊತ್ತಿನಲ್ಲೇ ಕಿರಿಕಿರಿ ಅನುಭವಿಸಿದ್ರು.

ಇಡೀ ಮನೆ ಮಂದಿ ಕೂತು ಕಾರ್ಯಕ್ರಮ ನೋಡುತ್ತಿದ್ದವರಿಗೆ ಕಿರಿಕಿರಿ ಮಾಡಿದ್ದು, ರಮ್ಯಾ ಇಂಗ್ಲಿಪ್. ಇಡೀ ಕಾರ್ಯಕ್ರಮದಲ್ಲಿ ಕನ್ನಡ ಬಳಸಿದ್ದು ಕಡಿಮೆ ಅನ್ನೋದು ನೆಟ್ಟಿಗರ ವಾದ. ಇದು ಕನ್ನಡ ಕಾರ್ಯಕ್ರಮದಂತೆ ಇರಲಿಲ್ಲ. ಯಾವುದೋ ಕಂಗ್ಲಿಷ್ ಕಾರ್ಯಕ್ರಮದಂತೆ ಇತ್ತು ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಮೋಹಕತಾರೆ ರಮ್ಯಾ ಕಾರ್ಯಕ್ರಮದಲ್ಲಿ ಹೆಚ್ಚು ಕನ್ನಡ ಬಳಸಿದೆ ಇದ್ದಿದ್ದಕ್ಕೆ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದಾರೆ. ಒಬ್ಬರು "ಕನ್ನಡಕ್ಕಿಂತ ಯಾರು ದೊಡ್ಡವರಿಲ್ಲ, ಇಂಗ್ಲಿಷ್ ಊಟದ ಜೊತೆ ಉಪ್ಪಿನಕಾಯಿ ತರ ಇರ್ಲಿ. ಆದ್ರೆ ಅದೇ ಊಟ ಆಗೋದು ಬೇಡ." ಅಂತ ಹೇಳಿ ಉಪೇಂದ್ರ ಕನ್ನಡದ ಬಗ್ಗೆ ಮಾತಾಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಮೋಹಕತಾರೆ ರಮ್ಯಾ ಇಂಗ್ಲಿಷ್‌ನಲ್ಲಿ ಮಾತಾಡಿ ಟ್ರೋಲ್ ಆಗಿದ್ದು ಒಂದು ಕಡೆ. ಇದರ ಜೊತೆನೇ ನ್ಯಾಷನಲ್ ಕ್ರಶ್ ರಶ್ಮಿಕಾರನ್ನೂ ಎಳೆದು ತಂದಿದ್ದಾರೆ. ಟ್ರೋಲಿಗರೊಬ್ಬರು "ರಶ್ಮಿಕಾ ತತ್ಸಮ. ರಮ್ಯಾ ತದ್ಬವ. ಹೆಚ್ಚಿನ ಮಾಹಿತಿಗಾಗಿ ವೀಕೆಂಡ್ ವಿತ್ ಇಂಗ್ಲಿಷ್ ನೋಡಿ" ಎಂದು ಟ್ರೋಲ್ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT