ಸುಗತ್ ಸತ್ಪತಿ ಅವರಿಗೆ ಸೂಪರ್ ಬೈಕ್ ಉಡುಗೊರೆ 
ಸಿನಿಮಾ ಸುದ್ದಿ

ನೇಪಾಳ ಪ್ರವಾಸ ಆಯೋಜಿಸಿದ ಸಹ ಸವಾರನಿಗೆ 12 ಲಕ್ಷ ರೂ. ಬೈಕ್ ಗಿಫ್ಟ್ ನೀಡಿದ ನಟ ಅಜಿತ್

ಬೈಕ್ ನಲ್ಲಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ತಮ್ಮ ಸಹ ಸವಾರನಿಗೆ 12 ಲಕ್ಷ ರೂಪಾಯಿ ದುಬಾರಿ ಬಿಎಂಡಬ್ಲ್ಯು ಸೂಪರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮುಂಬೈ: ಬೈಕ್ ನಲ್ಲಿ ನೇಪಾಳ ಪ್ರವಾಸಕ್ಕೆ ತೆರಳಿದ್ದ ತಮಿಳು ಸೂಪರ್‌ಸ್ಟಾರ್ ಅಜಿತ್ ಕುಮಾರ್ ಅವರು ತಮ್ಮ ಸಹ ಸವಾರನಿಗೆ 12 ಲಕ್ಷ ರೂಪಾಯಿ ದುಬಾರಿ ಬಿಎಂಡಬ್ಲ್ಯು ಸೂಪರ್ ಬೈಕ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಅಜಿತ್ ತನ್ನ ಸಹ ಸವಾರ ಸುಗತ್ ಸತ್ಪತಿ ಅವರಿಗೆ ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದು, ಇಬ್ಬರೂ 2022 ರಲ್ಲಿ ಸಿಕ್ಕಿಂಗೆ ಬೈಕ್ ಪ್ರವಾಸ ಕೈಗೊಂಡಿದ್ದರು. ನಂತರ ಹಲವು ಬಾರಿ ಜೊತೆಯಾಗಿ ಬೈಕ್ ಪ್ರವಾಸ ಕೈಗೊಂಡಿದ್ದರು. ಸತ್ಪತಿ ಅವರು ಅಜಿತ್ ಅವರಿಗಾಗಿ ಎರಡು ಬಾರಿ ಬೈಕ್ ಪ್ರವಾಸವನ್ನು ಆಯೋಜಿಸಿದ್ದರು.

ಇತ್ತೀಚೆಗಷ್ಟೇ ನೇಪಾಳ ಪ್ರವಾಸ ಆಯೋಜಿಸಿದ್ದ ಸತ್ಪತಿ ಅವರಿಗೆ ನಟ ಅಜಿತ್ ಅವರು ಬಿಎಂಡಬ್ಲ್ಯು ಸೂಪರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.

Bikedekho.com ಪ್ರಕಾರ, ಸೂಪರ್ ಬೈಕ್‌ನ ಆನ್ ರೋಡ್ ಬೆಲೆ ರೂ. 12.95 ಲಕ್ಷ. ರೂಪಾಯಿ.

ನಟ ಅಜಿತ್ ಅವರ ಸರ್ಪ್ರೈಸ್ ಗಿಫ್ಟ್ ಗೆ ಪ್ರತಿಕ್ರಿಯಿಸಿರುವ ಸತ್ಪತಿ ಅವರು, "ಯಾವುದೂ ಪೂರ್ವನಿರ್ಧರಿತವಾಗಿರುವುದಿಲ್ಲ. ನಮ್ಮ ಹಿಂದಿನ ಅಡೆತಡೆಗಳು ಹೊಸ ಆರಂಭಕ್ಕೆ ಕಾರಣವಾಬಹುದು" ಎಂದು ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.

ಬಿಎಂಡಬ್ಲ್ಯು ಸೂಪರ್ ಬೈಕ್ ಜಗತ್ತನ್ನು ಅನ್ವೇಷಿಸಲು ನನಗೆ ನೆರವಾಗಲಿದೆ. ಇದು ಪ್ರೀತಿಯ ಅಣ್ಣನಿಂದ(ಅಜಿತ್ ಕುಮಾರ್) ಸಿಕ್ಕ ಉಡುಗೊರೆ. ಏನನ್ನೂ ಅಪೇಕ್ಷಿಸದ ಹಾಗೂ ಒಳ್ಳೆದನ್ನೇ ಬಯಸುವ ಗುಣ ಅವರದ್ದು. ಅಂತಹ ದೊಡ್ಡ ಸ್ಟಾರ್ ನಟನೊಂದಿಗೆ ಸಂಪರ್ಕ ಹೊಂದಿರುವುದು ನನ್ನ ಅದೃಷ್ಟ ಎಂದು ಸತ್ಪತಿ ಹೇಳಿದ್ದಾರೆ.

"ಅವರು ನನಗೆ ಹೆಚ್ಚು ಒಳ್ಳೆಯದನ್ನು ಬಯಸುವ ಮತ್ತು ಪ್ರತಿಯಾಗಿ ಏನನ್ನೂ ನಿರೀಕ್ಷಿಸದ ಹಿರಿಯ ಸಹೋದರನಂತೆ ಭಾವಿಸಿದರು. ನೀವು ಗ್ರೇಟ್, ಅಣ್ಣಾ" ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಅದೇಶ ಪಾಲನೆ: ನಾಳೆ ಬೆಳಗ್ಗೆ 10.30ಕ್ಕೆ ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ ಸಿಎಂ ಸಿದ್ದರಾಮಯ್ಯ-Video

SIR ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್; ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅಗತ್ಯ ಎಂದ ನ್ಯಾಯಪೀಠ..!

ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಹೆಸರು ಬಹುತೇಕ ಫೈನಲ್? ಕಾಂಗ್ರೆಸ್‌ನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ..!

ದೆಹಲಿ ಸಭೆ ಬಳಿಕ ಬೆಂಗಳೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಸಿದ್ದರಾಮಯ್ಯ ಸಜ್ಜು: ಬೆಂಬಲಿಗರ ಜೊತೆ ಮಹತ್ವದ ಸಭೆ, ಹೆಚ್ಚಿದ ಕುತೂಹಲ

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

SCROLL FOR NEXT