ಒಂದು ಸರಳ ಪ್ರೇಮ ಕಥೆ ಚಿತ್ರದ ಸ್ಟಿಲ್ 
ಸಿನಿಮಾ ಸುದ್ದಿ

ವಿನಯ್ ರಾಜ್‌ಕುಮಾರ್ ನಟನೆಯ, ಸಿಂಪಲ್ ಸುನಿ ನಿರ್ದೇಶನದ 'ಒಂದು ಸರಳ ಪ್ರೇಮ ಕಥೆ' ಶೂಟಿಂಗ್ ಪೂರ್ಣ

ಗಣೇಶ್ ಅಭಿನಯದ ಸಕತ್, ಶರಣ್ ಅಭಿನಯದ ಅವತಾರ ಪುರುಷ ಚಿತ್ರಗಳ ಮೂಲಕ ಎರಡು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡಿದ್ದ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಇದೀಗ ತಮ್ಮ ಮುಂದಿನ ಚಿತ್ರವಾದ 'ಒಂದು ಸರಳ ಪ್ರೇಮ ಕಥೆ'ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಗಣೇಶ್ ಅಭಿನಯದ ಸಕತ್, ಶರಣ್ ಅಭಿನಯದ ಅವತಾರ ಪುರುಷ ಚಿತ್ರಗಳ ಮೂಲಕ ಎರಡು ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡಿದ್ದ, ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಖ್ಯಾತಿಯ ನಿರ್ದೇಶಕ ಸಿಂಪಲ್ ಸುನಿ ಇದೀಗ ತಮ್ಮ ಮುಂದಿನ ಚಿತ್ರವಾದ 'ಒಂದು ಸರಳ ಪ್ರೇಮ ಕಥೆ'ಯ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ.

ಚಿತ್ರದಲ್ಲಿ ನಟ ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿದ್ದು, ಅವರ ತಂದೆ ನಟ ರಾಘವೇಂದ್ರ ರಾಜ್‌ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಹಿರಿಯ ನಟನೊಂದಿಗಿನ ಭಾಗಗಳ ಚಿತ್ರೀಕರಣವನ್ನು ಮೈಸೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ.

ನಿರ್ದೇಶಕ ಸುನಿ ಒಂದು ಸರಳ ಪ್ರೇಮ ಕಥೆ ರೋಮ್ಯಾಂಟಿಕ್ ಎಂಟರ್‌ಟೈನರ್ ಆಗಿದ್ದು, ಮೋಡಿಮಾಡುವ ಸಂಗೀತ ಸಂಯೋಜನೆಯನ್ನು ಒಳಗೊಂಡಿದೆ. ವೀರ್ ಸಮರ್ಥ್ ಸಂಯೋಜಿಸಿದ 11 ವಿಭಿನ್ನ ಹಾಡುಗಳನ್ನು ಚಿತ್ರ ಒಳಗೊಂಡಿದೆ. ತಮ್ಮ ಚಿತ್ರಕ್ಕೆ ನಟ ವಿನಯ್ ರಾಜ್‌ಕುಮಾರ್ ನೀಡಿರುವ ಅಮೂಲ್ಯ ಕೊಡುಗೆಗಾಗಿ ಸುನಿ ಅವರನ್ನು ವಿಶೇಷವಾಗಿ ಹೊಗಳಿದರು ಮತ್ತು ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಬಹುಮುಖ ಪ್ರತಿಭೆಗೆ ಹೆಸರುವಾಸಿಯಾದ ವಿನಯ್ ರಾಜ್‌ಕುಮಾರ್, ಈ ಚಿತ್ರದ ಭಾಗವಾಗಿರುವ ಬಗ್ಗೆ ಮತ್ತು ತಮ್ಮ ಅನುಭವದ ಬಗ್ಗೆ ಉತ್ಸಾಹವನ್ನು ವ್ಯಕ್ತಪಡಿಸಿದರು. 'ನಿರ್ದೇಶಕರ ಉತ್ತಮ ಮಾರ್ಗದರ್ಶನದಲ್ಲಿ ನಟನೆಯು ಸ್ವಾಭಾವಿಕವಾಗಿ ಬಂದಿದೆ' ಎಂದು ಹೇಳುತ್ತಾರೆ.

ಈ ಚಿತ್ರವನ್ನು ಮೈಸೂರಿನ ರಮೇಶ್ ನಿರ್ಮಿಸಿದ್ದಾರೆ ಮತ್ತು ಮಲ್ಲಿಕಾ ಸಿಂಗ್ ನಾಯಕಿಯಾಗಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ ಮತ್ತು ಅರುಣ್ ಬಾಲರಾಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಕಾರ್ತಿಕ್ ನಿರ್ವಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬೆಳಗಾವಿ: ಬೀದಿ ನಾಯಿಗಳ ಅಟ್ಟಹಾಸ, 2 ವರ್ಷದ ಬಾಲಕಿ ಮೇಲೆ ಭೀಕರ ದಾಳಿ

SCROLL FOR NEXT