ಛಾಯಾಗ್ರಾಹಕಿ ಶ್ವೇತಾ ಪ್ರಿಯಾ ನಾಯಕ್ 
ಸಿನಿಮಾ ಸುದ್ದಿ

ಕನ್ನಡ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುವ ಗುರಿ ಹೊಂದಿರುವ DOP ಶ್ವೇತ್ ಪ್ರಿಯಾ ನಾಯಕ್

ಜಯತೀರ್ಥ ಅವರ ಕೈವಾ ಚಿತ್ರದ ಮೂಲಕ ಛಾಯಾಗ್ರಾಹಕಿ ಶ್ವೇತ್ ಪ್ರಿಯಾ ನಾಯಕ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದು ಆಕೆಗೆ ಉತ್ತಮ ಹೆಸರು ನೀಡುತ್ತಿದೆ.

ಜಯತೀರ್ಥ ಅವರ ಕೈವಾ ಚಿತ್ರದ ಮೂಲಕ ಛಾಯಾಗ್ರಾಹಕಿ ಶ್ವೇತ್ ಪ್ರಿಯಾ ನಾಯಕ್ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಇದು ಆಕೆಗೆ ಉತ್ತಮ ಹೆಸರು ನೀಡುತ್ತಿದೆ. ಸಿನಿಮಾಟೋಗ್ರಫಿಯತ್ತ ತನ್ನ ಪ್ರಯಾಣ ಬಾಲ್ಯದಿಂದಲೂ ಆಸಕ್ತಿಯ ಮಾರ್ಗವಾಗಿದೆ ಎಂದು ಬಲವಾಗಿ ನಂಬಿರುವ ಅವರು, ಕ್ಷಣಗಳನ್ನು ಸೆರೆಹಿಡಿಯುವ  ಉತ್ಸಾಹ ಶಾಲಾ ದಿನಗಳಲ್ಲಿ ಪ್ರಾರಂಭವಾಯಿತು. ಇದು ತನ್ನ ರಜಾದಿನಗಳಲ್ಲಿ ತನ್ನ ಹೆತ್ತವರೊಂದಿಗೆ ಛಾಯಾಚಿತ್ರ ತೆಗೆಯುವುದು, ಹಂಪಿಯಲ್ಲಿ ಇತಿಹಾಸವನ್ನು ಅನ್ವೇಷಿಸುವುದು ಮತ್ತು ಕಲ್ಲಿನ ಕೆತ್ತನೆಗಳ ಚಿತ್ರಗಳನ್ನು ಸೆರೆ ಹಿಡಿಯುವಲ್ಲಿ ಪ್ರಶಂಸೆ ಪಡೆದಿದ್ದರು. 

"ಆಗ, ನಿರ್ಜೀವ ವಸ್ತುಗಳ ಮೇಲೆ ಏಕೆ ಕೇಂದ್ರೀಕರಿಸಿದೆ ಎಂದು ತಾಯಿ ಆಶ್ಚರ್ಯಪಟ್ಟಿದ್ದನ್ನು ನೆನಪಿಕೊಳ್ಳುವ ಅವರು, ನನ್ನ ಒಲವು ಕಲ್ಲಿನ ಕೆತ್ತನೆಗಳ ಛಾಯಾಗ್ರಹಣವಾಗಿತ್ತು. ಅದು ನನ್ನ ದೃಷ್ಟಿಕೋನವಾಗಿತ್ತು. ಆಗ ಶುರುವಾಯಿತು ಕ್ಯಾಮೆರಾದೊಂದಿಗಿನ ನನ್ನ ಬಾಂಧವ್ಯ.  ಛಾಯಾಗ್ರಹಣದಲ್ಲಿ ಪದವಿ ಪಡೆದ ನಂತರ, ಶ್ವೇತ್ ಅವರು ಸಂತೋಷ್ ಶಿವನ್, ಅನಿಲ್ ಮೆಹ್ತಾ ಮತ್ತು ಪಿಸಿ ಶ್ರೀರಾಮ್ ಅವರಂತಹ ಪ್ರಸಿದ್ಧ ಸಿನಿಮಾಟೋಗ್ರಾಫರ್‌ಗಳಿಂದ ಪ್ರೇರಿತರಾಗಿದ್ದು, ಅದು ಅವರನ್ನು ತನ್ನ ಆಸಕ್ತಿಯ ಕ್ಷೇತ್ರದ ಕಡೆಗೆ ತಿರುಗಿಸಿತು.

DOP ಮನೋಹರ್ ಜೋಶಿಗೆ ಸಹಾಯ ಮಾಡುವ ಮೂಲಕ ಮತ್ತು ಮುಂಬೈನಲ್ಲಿ ತನ್ನ ಕೌಶಲ್ಯಗಳನ್ನು ಹೆಚ್ಚಿಸಿಕೊಂಡು, ಸಿಂಗಾಪುರದಲ್ಲಿ ಸಿನಿಮಾಟೋಗ್ರಫಿ ಕೋರ್ಸ್ ಮಾಡುವ ಮೂಲಕ, ಯಶ್ ರಾಜ್ ತಂಡದಲ್ಲಿ ಅವಕಾಶ ಪಡೆದರು. ಸುಯಿ ಧಾಗಾ ಮತ್ತು ಇತರ ಕೆಲವು ಚಿತ್ರಗಳಲ್ಲಿ ಸಂತೋಷ್ ಶಿವನ್ ಮತ್ತು ಅನಿಲ್ ಮೆಹ್ತಾ ಜೊತೆ ಕೆಲಸ ಮಾಡಿದರು.

ಆ್ಯಡ್ ಫಿಲ್ಮ್‌ಮೇಕಿಂಗ್‌ ಅವಳನ್ನು ಬ್ಯುಸಿಯಾಗಿಸಿತು, ಆದರೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವ ಅವಳ ಆಸೆ ಮುಂದುವರೆಯಿತು. ಕನ್ನಡ ಚಿತ್ರರಂಗದಲ್ಲಿ ನನ್ನದೇ ಆದ ಛಾಪು ಮೂಡಿಸುವ ಗುರಿ ಇಟ್ಟುಕೊಂಡಿದ್ದೇನೆ, ಇಲ್ಲಿಂದ ಕೈವಾ ಮೂಲಕ ಸಿನಿಮಾ ಯಾತ್ರೆ ಆರಂಭಿಸುತ್ತಿದ್ದೇನೆ ಎಂದು ಮಲೆನಾಡು ಮತ್ತು ಉತ್ತರ ಕರ್ನಾಟಕ ಸಂಸ್ಕೃತಿಯಿಂದ ಪ್ರಭಾವಿತರಾಗಿರುವ ಬೆಳಗಾವಿಯ ಶ್ವೇತ್ ಹೇಳುತ್ತಾರೆ. 

ನಿರ್ದೇಶಕ ಜಯತೀರ್ಥರ ಕೈವಾ ಚಿತ್ರದಲ್ಲಿ ಧನ್ವೀರ್ ಮತ್ತು ಮೇಘಾ ಶೆಟ್ಟಿ ನಾಯಕರಾಗಿ ನಟಿಸಿದ್ದಾರೆ ಮತ್ತು ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಿನ ಸಂಪರ್ಕಗಳು ಇರಲಿಲ್ಲ. ವಾಸ್ತವವಾಗಿ, ಯಾರೊಬ್ಬರ ಪರಿಚಯದ ಮೂಲಕ ಜಯತೀರ್ಥರನ್ನು ಭೇಟಿಯಾದೆ. ಅವರ ಒಂದು ಸಿನಿಮಾ ನೋಡಿ ಮೆಚ್ಚಿದೆ. ನನ್ನ ಕೆಲಸವನ್ನು ಅವರಿಗೆ ತೋರಿಸಲು ಮಾರ್ಚ್ 8, 2022 ರಂದು ಅವರನ್ನು ಭೇಟಿಯಾದೆ. ಒಂದು ದಿನದೊಳಗೆ ಅವರು ತಮ್ಮ ನಿರ್ದೇಶನದ ಚಿತ್ರದಲ್ಲಿ ಛಾಯಾಗ್ರಹಣ ಕೆಲಸಕ್ಕೆ ಅನುಮತಿ ನೀಡಿದರು. ಈಗ ನನಗೆ ಸಿಕ್ಕಿರುವ ಯಾವುದೇ ಮನ್ನಣೆಗೆ ಅವರಿಗೆ ಧನ್ಯವಾದ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT