ಮೇಘನಾ ರಾಜ್ ಸರ್ಜಾ ಅವರಿಗಾಗಿ ಚಲನಚಿತ್ರವನ್ನು ಮಾಡುವುದು ಪನ್ನಗಾಭರಣ ಅವರ ಆರಂಭಿಕ ಆಲೋಚನೆಯಾಗಿತ್ತು. ಆದರೆ, ಇದು ವಿಶಾಲ್ ಆತ್ರೇಯ ನಿರ್ದೇಶನದ ತತ್ಸಮ ತದ್ಭವ ಸಿನಿಮಾದ ಮೂಲಕ ನಿರ್ಮಾಪಕರಾಗಲು ಕಾರಣವಾಯಿತು.
ಹೊಸ ಜವಾಬ್ದಾರಿಯನ್ನು ನಿಭಾಯಿಸುವ ಬಗ್ಗೆ ಮಾತನಾಡುವ ಅವರು, 'ರಂಗಭೂಮಿ ಮತ್ತು ಸಿನಿಮಾ ಕುಟುಂಬದಿಂದ ಬಂದ ನನಗೆ ತಿಳಿದಿರುವುದು ಸಿನಿಮಾ. ನಾನು ಎಡಿಟಿಂಗ್, ಲೈಟಿಂಗ್ ಮತ್ತು ಕ್ಯಾಮೆರಾ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಹೀಗಾಗಿ, ನಾನು ಯಾವುದೇ ವಿಭಾಗವಾದರೂ ಅಲ್ಲಿ ಕೆಲಸ ಮಾಡಲು ಸಿದ್ಧನಾಗಿದ್ದೇನೆ. ಏಕೆಂದರೆ ಸಿನಿಮಾ ಎನ್ನುವುದು ನಮ್ಮ ಮನೆಯಂತೆ' ಎನ್ನುತ್ತಾರೆ.
ಪನ್ನಗಾ ಭರಣ ಅವರು ತಮ್ಮ ಪಿಬಿ ಸ್ಟುಡಿಯೋಸ್ ಮತ್ತು ಅನ್ವಿತ್ ಸಿನಿಮಾಸ್ ಮೂಲಕ ವರ್ಷಕ್ಕೆ ನಾಲ್ಕು ಚಿತ್ರಗಳನ್ನು ನಿರ್ಮಿಸುವ ಗುರಿಯನ್ನು ಹೊಂದಿದ್ದಾರೆ.
'ನಾನು ತತ್ಸಮ ತದ್ಭವವನ್ನು ಕಮರ್ಷಿಯಲ್ ದೃಷ್ಟಿಕೋನಕ್ಕಿಂತ ಹೆಚ್ಚಾಗಿ ವೈಯಕ್ತಿಕ ಪ್ರಯತ್ನವಾಗಿ ನೋಡುತ್ತೇನೆ'. ಚಿತ್ರ ನಿರ್ಮಾಪಕರಾಗಿ ಪನ್ನಗಾ ಅವರ ಮನಸ್ಸಿನಲ್ಲಿ ಹಲವಾರು ವಿಷಯಗಳಿದ್ದರೂ ಸಹ, ಅವರು ತಮ್ಮ ಆದ್ಯತೆಗಳನ್ನು ಬದಿಗಿಟ್ಟು ಇತರರಿಗೆ ಇಷ್ಟವಾಗುವ ಸಿನಿಮಾಗಳನ್ನು ಮಾಡುವ ಗುರಿಯನ್ನು ಹೊಂದಿದ್ದಾರೆ.
ಅವರು ನಿರ್ಮಾಪಕರಾಗಿ ಅದನ್ನು ದೊಡ್ಡದಾಗಿಸುವ ಗುರಿ ಹೊಂದಿದ್ದಾರೆಯೇ ಮತ್ತು ಇತರರ ಸ್ಪರ್ಧೆಯನ್ನು ಎದುರಿಸುತ್ತಾರೆಯೇ?
'ನನ್ನ ಆಲೋಚನೆಗಳ ಹೊರತಾಗಿ, ಇದು ಅಂತಿಮವಾಗಿ ಕಮರ್ಷಿಯಲ್ ಅಂಶಗಳೊಂದಿಗೆ ತಳುಕು ಹಾಕಿಕೊಂಡಿದೆ. ಉತ್ತಮ ಮಾರುಕಟ್ಟೆ ತಂತ್ರದೊಂದಿಗೆ ದೊಡ್ಡ ನಿರ್ಮಾಣ ಸಂಸ್ಥೆಯು ಕೂಡ ಚಿತ್ರ ಬಿಡುಗಡೆಯಾದ ಮೊದಲ ಮೂರು ದಿನಗಳ ಸಂಗ್ರಹಣೆ ಅಥವಾ ಗರಿಷ್ಠ ಒಂದು ವಾರ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುವುದನ್ನೇ ಗುರಿಯಾಗಿರಿಸಿಕೊಳ್ಳುತ್ತದೆ' ಎನ್ನುತ್ತಾರೆ.
ಇದನ್ನೂ ಓದಿ: ಗೆಳೆತನದ ಅಂಶದ ಜೊತೆಗೆ 'ತತ್ಸಮ -ತದ್ಭವ' ಚಿತ್ರದಲ್ಲಿನ ಪಾತ್ರದ ಬಗ್ಗೆ ನನಗೆ ತೃಪ್ತಿ ಇದೆ: ಪ್ರಜ್ವಲ್ ದೇವರಾಜ್
'ಪ್ರತಿ ವಾರ 5 ವಿವಿಧ ಭಾಷೆಗಳಲ್ಲಿ 10 ಚಿತ್ರಗಳು ಬಿಡುಗಡೆಯಾಗುತ್ತಿವೆ. ಅಂತಿಮವಾಗಿ, ಇದು ವಾರಾಂತ್ಯದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆಯೇ ಆಧಾರವಾಗಿರುತ್ತದೆ. ಹೀಗಾಗಿ ಒಳ್ಳೆಯ ಚಿತ್ರಗಳನ್ನು ಪ್ರೇಕ್ಷಕರು ಬೆಂಬಲಿಸಬೇಕು, ಆಗ ಮಾತ್ರ ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯ’ ಎನ್ನುತ್ತಾರೆ ಅವರು.