ಚಿತ್ರದ ಪೋಸ್ಟರ್ 
ಸಿನಿಮಾ ಸುದ್ದಿ

'ಜಸ್ಟ್ ಮ್ಯಾರೀಡ್' ಮೂಲಕ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಚಿತ್ರ ನಿರ್ಮಾಣಕ್ಕೆ ಮುಂದು!

ಉಳಿದವರು ಕಂಡಂತೆ, ರಂಗಿತರಂಗ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ದಿಯಾ, ವಿಕ್ರಾಂತ್ ರೋಣ, ಕಾಂತಾರ ಚಿತ್ರಗಳ ಮೂಲಕ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಅವರು ಚಿತ್ರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ.

ಉಳಿದವರು ಕಂಡಂತೆ, ರಂಗಿತರಂಗ, ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ, ದಿಯಾ, ವಿಕ್ರಾಂತ್ ರೋಣ, ಕಾಂತಾರ ಚಿತ್ರಗಳ ಮೂಲಕ ಸೂಪರ್ ಹಿಟ್ ಹಾಡುಗಳನ್ನು ನೀಡಿರುವ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಅವರು ಚಿತ್ರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದಾರೆ. 

ಸದ್ಯ ಉಪೇಂದ್ರ ನಿರ್ದೇಶನದ ಯುಐ ಚಿತ್ರಕ್ಕೆ ಅಜನೀಶ್ ಸಂಗೀತ ಸಂಯೋಜಿಸುತ್ತಿದ್ದು ಇದರ ಜೊತೆಗೆ ಚೊಚ್ಚಲ ಸಾಹಸಕ್ಕೆ ಮುಂದಾಗಿರುವ ಅವರು ಅಬ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಜಸ್ಟ್ ಮ್ಯಾರೀಡ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಜನೀಶ್ ಜೊತೆಗೆ ಸಹ-ನಿರ್ಮಾಪಕರಾಗಿ ಮತ್ತೊಬ್ಬ ಪ್ರಸಿದ್ಧ ಸಂಗೀತ ಸಂಯೋಜಕಿ ಸಿ ಆರ್ ಬಾಬಿ ಕೈ ಹಾಕಿದ್ದು ಅಲ್ಲದೆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಚಿತ್ರೀಕರಣದ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ಚಿತ್ರತಂಡ ಗಣೇಶ ಹಬ್ಬದ ಸಂದರ್ಭದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದೆ. ನಟರಾದ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ನಟಿಸಿರುವ ಚಿತ್ರದ ಹಾಡೊಂದನ್ನು ನಟ ಶಿವರಾಜಕುಮಾರ್ ಅನಾವರಣಗೊಳಿಸಿದರು.

ಸಂಗೀತ ನಿರ್ದೇಶಕನಾಗಿ ಈಗ ನಿರ್ಮಾಪಕರಾಗಿರುವುದು ವ್ಯತಿರಿಕ್ತ ಪ್ರಯತ್ನಗಳು. ಆದಾಗ್ಯೂ, ನಾನು 2003ರಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ ಉದ್ಯಮದಲ್ಲಿ 20 ವರ್ಷಗಳನ್ನು ಕಳೆದಿದ್ದೇನೆ. ಹೊಸದನ್ನು ಪ್ರಯತ್ನಿಸಲು ಇದು ಸಮಯ ಎಂದು ನಾನು ಭಾವಿಸಿದೆ. ವಿಶೇಷವಾಗಿ ಬಾಬಿಯಂತಹ ಪಾಲುದಾರಿಕೆ ಈ ಯೋಜನೆಯ ಹಿಂದಿನ ಪ್ರೇರಕ ಶಕ್ತಿಯಾಗಿರುತ್ತಾರೆ. ಬಾಬಿ ನಿರ್ದೇಶನಕ್ಕಾಗಿ ವಿಭಿನ್ನ ದೃಷ್ಟಿಯನ್ನು ಹೊಂದಿದ್ದರು. ಇದೀಗ ಅಂತಿಮವಾಗಿ ಜಸ್ಟ್ ಮ್ಯಾರೀಡ್‌ನೊಂದಿಗೆ ಫಲಪ್ರದವಾಗಿದೆ ಎಂದು ಅಜನೀಶ್ ಲೋಕನಾಥ್ ಹೇಳಿದ್ದಾರೆ.

ಜಸ್ಟ್ ಮ್ಯಾರೀಡ್ ನಲ್ಲಿ ಬಿಗ್ ಬಾಸ್ ಕನ್ನಡದ ಮಾಜಿ ವಿನ್ನರ್ ಶೈನ್ ಶೆಟ್ಟಿ ಮತ್ತು ಅಂಕಿತಾ ಅಮರ್ ಜೊತೆಗೆ ಶ್ರುತಿ ಹರಿಹರನ್, ಅಚ್ಯುತ್ ಕುಮಾರ್ ಮತ್ತು ರವಿ ಶಂಕರ್ ಗೌಡ ಸೇರಿದಂತೆ ಗಮನಾರ್ಹ ಪಾತ್ರವರ್ಗವಿದೆ. ತಮಿಳು ನಟ ಶ್ರೀಮನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದು, ಸಾಕ್ಷಿ ಅಗರ್ವಾಲ್ ಕೂಡ ಮಹತ್ವದ ಪಾತ್ರದಲ್ಲಿ ನಟಿಸಲಿದ್ದಾರೆ. ಪಿಜಿ ಛಾಯಾಗ್ರಹಣವನ್ನು ನಿರ್ವಹಿಸುತ್ತಿದ್ದು, ಜಸ್ಟ್ ಮ್ಯಾರೀಡ್‌ಗೆ ಅಜನೀಶ್ ಅವರೇ ಸಂಗೀತ ಸಂಯೋಜಿಸಲಿದ್ದು, ಅಮರ್ ಅವರ ಕಲಾ ನಿರ್ದೇಶನವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ವಿದೇಶದಲ್ಲೂ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ಅಮೆರಿಕಾ ಸೇರಿದಂತೆ ಮೂರು ರಾಷ್ಟ್ರಗಳಿಗೆ ರಫ್ತು..!

CLP ಸಭೆಯಲ್ಲಿ ಸರ್ವಾನುಮತದಿಂದ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿತ್ತು, 50:50 ಒಪ್ಪಂದವಾಗಿಲ್ಲ: ಕೆ.ಜೆ. ಜಾರ್ಜ್ ಸ್ಪಷ್ಟನೆ

SCROLL FOR NEXT