ವಿಕ್ಟೋರಿಯಾ ಮ್ಯಾನ್ಷನ್‌ ಚಿತ್ರದ ಪೋಸ್ಟರ್ - ಕಾಶಿಮಾ 
ಸಿನಿಮಾ ಸುದ್ದಿ

'ವಿಕ್ಟೋರಿಯಾ ಮ್ಯಾನ್ಷನ್‌' ಚಿತ್ರಕ್ಕಾಗಿ ನಟಿ ಕಾಶಿಮಾ ಹೊಸ ಅವತಾರ!

ಟೆಂಪರ್ ಮತ್ತು ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟಿ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರತಂಡದ ಪ್ರಕಾರ, ಈ ಚಿತ್ರವು ಕಾಶಿಮಾರನ್ನು ಹೊಸ ಅವತಾರದಲ್ಲಿ ತೋರಿಸಲಿದೆ.

ಟೆಂಪರ್ ಮತ್ತು ನರೇಶ್ ಕುಮಾರ್ ನಿರ್ದೇಶನದ 'ಸೌತ್ ಇಂಡಿಯನ್ ಹೀರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದ ನಟಿ ಕಾಶಿಮಾ ಸದ್ಯ 'ವಿಕ್ಟೋರಿಯಾ ಮ್ಯಾನ್ಷನ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ವಿಕ್ಟೋರಿಯಾ ಮ್ಯಾನ್ಷನ್ ಚಿತ್ರವನ್ನು ರಾಜೇಶ್ ಬಾಲಿ ನಿರ್ದೇಶಿಸಿದ್ದು, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಚಿತ್ರತಂಡ ಇತ್ತೀಚೆಗೆ ನಟ ಶಿವರಾಜಕುಮಾರ್ ಅವರಿಂದ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿಸಿದೆ.

ವಿಕ್ಟೋರಿಯಾ ಮ್ಯಾನ್ಷನ್ 1900 ರಲ್ಲಿ ಹನುಮನಗಿರಿಯಲ್ಲಿ ಸಂಭವಿಸಿದ ವಿಲಕ್ಷಣ ಘಟನೆಗಳು ಮತ್ತು ಆಚರಣೆಯಲ್ಲಿದ್ದ ವಿಶಿಷ್ಟ ಘಟನೆಗಳ ಸುತ್ತ ಸುತ್ತುತ್ತದೆ. ಇದು ಶತಮಾನಗಳಿಂದ ರಹಸ್ಯವಾಗಿಯೇ ಉಳಿದಿದೆ. ಪುರಾತತ್ತ್ವ ಇಲಾಖೆ ನಡೆಸಿದ ತನಿಖೆಯನ್ನು ಚಿತ್ರವು ಥ್ರಿಲ್ಲರ್ ನಾಟಕವಾಗಿ ತೆರೆಮೇಲಿಡುತ್ತದೆ. ಚಿತ್ರತಂಡದ ಪ್ರಕಾರ, ಈ ಚಿತ್ರವು ಕಾಶಿಮಾರನ್ನು ಹೊಸ ಅವತಾರದಲ್ಲಿ ತೋರಿಸಲಿದೆ.

ವಿಕ್ಟೋರಿಯಾ ಮ್ಯಾನ್ಷನ್‌ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದ ಶಿವರಾಜ್‌ಕುಮಾರ್

ಚಿತ್ರವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜೊತೆಗೆ ಮೂಡುಬಿದಿರೆ, ಮಂಗಳೂರು, ಚಿಕ್ಕಮಗಳೂರು ಮತ್ತು ಬೇಲೂರು ಸೇರಿದಂತೆ ಇತರ ಸ್ಥಳಗಳಲ್ಲಿ ಚಿತ್ರೀಕರಣಗೊಂಡಿದೆ. ಈ ಹಿಂದೆ ಡಿಜಿಟಲ್ ವೇದಿಕೆಗಳಲ್ಲಿ ಚಲನಚಿತ್ರ ಪ್ರಚಾರಗಳಲ್ಲಿ ತೊಡಗಿಸಿಕೊಂಡಿದ್ದ ಉಮೇಶ್ ಕೆಎನ್ ಅವರೀಗ ರಾಜೇಶ್ ಬಾಲಿ ಅವರ ಸಹಯೋಗದೊಂದಿಗೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಮತ್ತು ಶ್ರೀ ಪದ್ಮಾವತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾವನ್ನು ಬ್ಯಾಂಕ್‌ರೋಲ್ ಮಾಡಲಿದ್ದಾರೆ.

ವಿಕ್ಟೋರಿಯಾ ಮ್ಯಾನ್ಷನ್‌ನ ತಾಂತ್ರಿಕ ತಂಡದಲ್ಲಿ ಸಂಗೀತ ಸಂಯೋಜಕ ಕಿರಣ್ ರವೀಂದ್ರನಾಥ್, ಛಾಯಾಗ್ರಾಹಕ ವೀರೇಶ್ ಬುಗುಡೆ, ಸಂಕಲನಕಾರ ನಾನಿ ಕೃಷ್ಣ ಮತ್ತು ಸಾಹಸ ನೃತ್ಯ ನಿರ್ದೇಶಕ ಅಶೋಕ್ ಮಾಸ್ಟರ್ ಇದ್ದಾರೆ. ಚಿತ್ರದ ತಾರಾಗಣದಲ್ಲಿ ಮಿಮಿಕ್ರಿ ಗೋಪಿ, ಮಾತೆ ಕೊಪ್ಪಳ, ಶ್ರೀಧರ್, ಬಾಲ ರಾಜವಾಯಿ, ಗುರುದೇವ್ ನಾಗರಾಜ್, ಉಮೇಶ್, ಮದನ್ ರಾಜ್, ಅಂಜಿ ಹಿತೇಶ್, ಪಾಲ್ಟಿ ಗೋವಿಂದ್, ಶೈಲಜಾ ಮತ್ತು ಕೀರ್ತನ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT