ದೂರ ತೀರ ಯಾನ ಸಿನಿಮಾ ಸ್ಟಿಲ್ 
ಸಿನಿಮಾ ಸುದ್ದಿ

ಪಥ ಬದಲಿಸಿದ ಮಂಸೋರೆ: 'ದೂರ ತೀರ ಯಾನ' ಮೂಲಕ ಆಧುನಿಕ ಪ್ರೇಮಕತೆ ಹೇಳಲು ಹೊರಟ ನಿರ್ದೇಶಕ

ನಿರ್ದೇಶಕನಾಗಿ ಇದು ನನ್ನ ಐದನೇ ಚಿತ್ರ. ನಾನು ದೂರ ತೀರಾ ಯಾನದೊಂದಿಗೆ ನನ್ನ ಕಥೆ ಹೇಳುವ ವಿಧಾನವನ್ನು ಬದಲಾಯಿಸಿದ್ದೇನೆ. ಕಥೆಯ ತಿರುಳು ತೀವ್ರವಾಗಿ ಉಳಿದಿದ್ದರೂ, ಆಧುನಿಕ ಪ್ರೇಮ ಥೀಮ್‌ಗೆ ಸರಿಹೊಂದುವಂತೆ ನಾನು ಹೊಂದಾಣಿಕೆಗಳನ್ನು ಮಾಡಿದ್ದೇನೆ.

ಹರಿವು, ನಾತಿಚರಾಮಿ, ಆಕ್ಟ್ 1978,19.20.21 ಅಂತಹ ಸಿನಿಮಾಗಳಿಂದ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮನನಿರ್ದೇಶಿಸುತ್ತಿರುವ ಮುಂದಿನ ಚಿತ್ರ "ದೂರ ತೀರ ಯಾನ". ಯುವ ಪ್ರತಿಭೆಗಳಾದ ವಿಜಯ್​ ಕೃಷ್ಣ ಹಾಗೂ ಪ್ರಿಯಾಂಕಾ ಕುಮಾರ್​ ಅಭಿನಯಿಸುತ್ತಿದ್ದು ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣ ಮಾಡಲಾಗಿತ್ತು.

ಡಿ.ಕ್ರಿಯೇಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳು ಬಂದಿದ್ದು, ಮಂಸೋರೆ ಈ ಹಿಂದೆ ಆಕ್ಟ್ 1978 ಮತ್ತು 19.20.21 ನಂತಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ, ಈಗ ಮತ್ತೆ ಮೂರನೇ ಸಿನಿಮಾಗೆ ಕೈ ಜೋಡಿಸಿದ್ದಾರೆ. ಡಿ ಕ್ರಿಯೇಷನ್ಸ್‌ನ ದೇವರಾಜ್ ನಿರ್ಮಿಸಿರುವ ಆಧುನಿಕ ಪ್ರೇಮಕಥೆಯಲ್ಲಿ ವಿಜಯ್ ಕೃಷ್ಣ ಮತ್ತು ಪ್ರಿಯಾಂಕಾ ಕುಮಾರ್ ನಾಯಕರಾಗಿ ನಟಿಸಿದ್ದಾರೆ. ಚಿತ್ರಕ್ಕೆ ಬಕ್ಕೇಶ್-ಕಾರ್ತಿಕ್ ಅವರ ಸಂಗೀತ, ಶೇಖರ್ ಚಂದ್ರ ಅವರ ಛಾಯಾಗ್ರಹಣವಿದೆ. ಚೇತನ ತೀರ್ಥಳ್ಳಿ ಸಂಭಾಷಣೆ ಬರೆದಿದ್ದಾರೆ. ನಾಗೇಂದ್ರ ಕೆ ಉಜ್ಜನಿ ಅವರ ಸಂಕಲನವಿದೆ.

ನಿರ್ದೇಶಕನಾಗಿ ಇದು ನನ್ನ ಐದನೇ ಚಿತ್ರ. ನಾನು ದೂರ ತೀರಾ ಯಾನದೊಂದಿಗೆ ನನ್ನ ಕಥೆ ಹೇಳುವ ವಿಧಾನವನ್ನು ಬದಲಾಯಿಸಿದ್ದೇನೆ. ಕಥೆಯ ತಿರುಳು ತೀವ್ರವಾಗಿ ಉಳಿದಿದ್ದರೂ, ಆಧುನಿಕ ಪ್ರೇಮ ಥೀಮ್‌ಗೆ ಸರಿಹೊಂದುವಂತೆ ನಾನು ಹೊಂದಾಣಿಕೆಗಳನ್ನು ಮಾಡಿದ್ದೇನೆ. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ. ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ ಹಾಗು ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆ. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್​ ಸಿರೀಸ್​ಗಳಲ್ಲಿ ಹಾಗೂ ನನ್ನ ನಿರ್ದೇಶನದ ಆಕ್ಟ್ 1978 ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, ರುದ್ರ ಗರುಡ ಪುರಾಣ ಚಿತ್ರದ ಖ್ಯಾತಿಯ ಪ್ರಿಯಾಂಕಾ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT