ಸಿನಿಮಾ ಸುದ್ದಿ

ಕರ್ನಾಟಕದಲ್ಲಿ ಪುಷ್ಪಾ 2 ಓಟಕ್ಕೆ ಲಗಾಮು: ಮಧ್ಯರಾತ್ರಿ ಶೋಗಳು ದಿಢೀರ್ ರದ್ದು!

ತೆಲುಗಿನ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ನಾಳೆ ವಿಶ್ವದಾದ್ಯಂತ 12,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಅಭಿಮಾನಿಗಳಿಗಾಗಿ ದಿನಾಂಕ 5ನೇ ತಾರೀಕಿನ ಮುಂಜಾನೆ 3 ಗಂಟೆಗೆ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ತೆಲುಗಿನ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ 2 ಚಿತ್ರ ನಾಳೆ ವಿಶ್ವದಾದ್ಯಂತ 12,500ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಇನ್ನು ಅಭಿಮಾನಿಗಳಿಗಾಗಿ ದಿನಾಂಕ 5ನೇ ತಾರೀಕಿನ ಮುಂಜಾನೆ 3 ಗಂಟೆಗೆ ಶೋಗಳನ್ನು ಆಯೋಜಿಸಲಾಗುತ್ತಿತ್ತು. ಆದರೆ ಇದಕ್ಕೆ ಇದೀಗ ಬ್ರೇಕ್ ಬಿದ್ದಿದೆ.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ರಾಜ್ಯದಲ್ಲಿ ಚಲನಚಿತ್ರ ಪ್ರದರ್ಶನದ ನಿಯಮಗಳ ಪ್ರಕಾರ, ಕರ್ನಾಟಕ ರಾಜ್ಯದ ಚಿತ್ರಮಂದಿರಗಳಲ್ಲಿ ಮುಂಜಾನೆ 6 ಗಂಟೆ ಒಳಗೆ ಯಾವುದೇ ಚಿತ್ರಮಂದಿರಗಳಲ್ಲಿ ಚಿತ್ರಗಳನ್ನು ಪ್ರದರ್ಶಿಸುವಂತಿಲ್ಲ ಎಂಬ ಸರ್ಕಾರದ ಆದೇಶವಿದ್ದರೂ ಸಹ ಕರ್ನಾಟಕದ ಕೆಲ ಚಿತ್ರಮಂದಿರಗಳಲ್ಲಿ ಅವದಿಗೂ ಮುನ್ನ ಚಿತ್ರ ಪ್ರದರ್ಶನಗೊಳ್ಳುತ್ತಿರುವುದು ಕಾನೂನು ಬಾಹಿರವಾಗಿರುತ್ತದೆ.

ದಯಮಾಡಿ ಯಾವ ಚಿತ್ರಮಂದಿರಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿದೆಯೋ ಅಂತಹ ಚಿತ್ರಮಂದಿರಗಳ ವಿರುದ್ದ ಹಾಗೆಯೇ ಚಿತ್ರಮಂದಿರಗಳಲ್ಲಿ ಟಿಕೆಟ್ ದರವು ಮನಸೋ ಇಚ್ಛೆ (500 ರೂ. 1000 ರೂ. 1500 ರೂ.) ಏರಿಸಿ ಸಾರ್ವಜನಿಕರಿಂದ ಪಡೆಯುತ್ತಿರುವಂತಹ ಚಿತ್ರಮಂದಿರಗಳ ವಿರುದ್ಧ ತಕ್ಷಣ ಕಾನೂನು ರೀತಿಯ ಕ್ರಮಕೈಗೊಂಡು ಮುಂಬರುವ ಪ್ರಾದೇಶಿಕ ಭಾಷೆಯ ಚಿತ್ರಗಳಿಗೂ ಅನುಕೂಲ ಮಾಡಿ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ಕೆಎಫ್ ಪಿಎ ಅಧ್ಯಕ್ಷ ಉಮೇಶ್ ಬಣಕಾರ್ ನೇತೃತ್ವದ ತಂಡ ಮನವಿ ಮಾಡಿತ್ತು.

ಈ ಮನವಿ ಬೆನ್ನಲ್ಲೆ ಇದೀಗ ಚಿತ್ರಮಂದಿರಗಳು ಮಧ್ಯರಾತ್ರಿ 3 ಗಂಟೆಗೆ 4 ಗಂಟೆಗೆ ಇದ್ದ ಶೋಗಳನ್ನು ರದ್ದು ಮಾಡಿದ್ದು 6.30ರ ಶೋಗಳು ಪ್ರದರ್ಶನಗೊಳ್ಳಲಿವೆ. ಇನ್ನು ಪಿವಿಆರ್, ಐನಾಕ್ಸ್ ಹೊರತು ಪಡಿಸಿ ಸಿಂಗಲ್ ಸ್ಕ್ರೀನ್ ಗಳಲ್ಲಿ 200 ರೂಪಾಯಿ ಟಿಕೆಟ್ ದರ ಇದ್ದರೆ, ಪಿವಿಆರ್ ಐನಾಕ್ಸ್ ನಲ್ಲಿ 300 ರೂಪಾಯಿಯಿಂದ 1,500 ರೂಪಾಯಿವರೆಗೂ ಟಿಕೆಟ್ ದರವಿದೆ.

KFPA ಮನವಿ ಬೆನ್ನಲ್ಲೆ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಕಾನೂನು ಬಾಹಿರವಾಗಿ 5-12-24 ರ ಮುಂಜಾನೆ 3 ಗಂಟೆಗೆ ಶೋಗಳನ್ನು ಆಯೋಜಿಸಿದರೆ ಅಂತಹವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಲ್ಲದೆ ಚಿತ್ರಮಂದಿರಗಳ ಪರವಾನಗಿಯನ್ನು ರದ್ದುಪಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

SCROLL FOR NEXT