ಫಾರೆಸ್ಟ್ ಚಿತ್ರದ ಫೋಸ್ಟರ್ 
ಸಿನಿಮಾ ಸುದ್ದಿ

ಬಹು ತಾರಾಗಣದ 'ಫಾರೆಸ್ಟ್' ಬಿಡುಗಡೆ ದಿನಾಂಕ ಘೋಷಣೆ

ಹಾಸ್ಯ ಮತ್ತು ಸಾಹಸದ ಸಂಯೋಜನೆಯ ಥ್ರಿಲ್ಲಿಂಗ್ ಚಿತ್ರ 'ಫಾರೆಸ್ಟ್' ತನ್ನ ವೀಕ್ಷಕರನ್ನು ಮಡಿಕೇರಿ, ಎಂಎಂ ಹಿಲ್ಸ್ ಮತ್ತು ಬೆಂಗಳೂರಿನ ಸೊಂಪಾದ ಭೂದೃಶ್ಯಗಳ ಕಡೆಗೆ ಕರೆದೊಯ್ಯುತ್ತದೆ.

ಚಂದ್ರಮೋಹನ್ ನಿರ್ದೇಶನದ 'ಫಾರೆಸ್ಟ್' 2025ಕ್ಕೆ ಬಿಡುಗಡೆಗೆ ಸಜ್ಜಾಗಿದೆ. ಚಿಕ್ಕಣ್ಣ, ರಂಗಾಯಣ ರಘು, ಅನೀಶ್, ಗುರುನಂದನ್, ಅರ್ಚನಾ ಕೊಟ್ಟಿಗೆ, ಶರಣ್ಯಾ ಶೆಟ್ಟಿ ಮತ್ತಿತರರ ಅಭಿನಯದ ಸಾಹಸ ಮತ್ತು ಹಾಸ್ಯಮಯ ಚಿತ್ರವು ಜನವರಿ 24 ರಂದು ತೆರೆಗೆ ಬರಲಿದೆ. ಚಿತ್ರತಂಡ ಇತ್ತೀಚಿಗೆ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ.

ಹಾಸ್ಯ ಮತ್ತು ಸಾಹಸದ ಸಂಯೋಜನೆಯ ಥ್ರಿಲ್ಲಿಂಗ್ ಚಿತ್ರ 'ಫಾರೆಸ್ಟ್' ತನ್ನ ವೀಕ್ಷಕರನ್ನು ಮಡಿಕೇರಿ, ಎಂಎಂ ಹಿಲ್ಸ್ ಮತ್ತು ಬೆಂಗಳೂರಿನ ಸೊಂಪಾದ ಭೂದೃಶ್ಯಗಳ ಕಡೆಗೆ ಕರೆದೊಯ್ಯುತ್ತದೆ.

ಕಥೆ ಹೇಳುವ ಕೌಶಲ್ಯಕ್ಕೆ ಚಂದ್ರಮೋಹನ್ ಹೆಸರುವಾಸಿಯಾಗಿದ್ದು, ಚಮತ್ಕಾರಿ ಪಾತ್ರಗಳು ಮತ್ತು ಆಕರ್ಷಕವಾದ ತಿರುವುಗಳಿಂದ ತುಂಬಿದ ವಿಶಿಷ್ಟ ನಿರೂಪಣೆಯನ್ನು ನೀಡಲು ಬರಹಗಾರ ಸತ್ಯ ಶೌರ್ಯ ಸಾಗರ್ ನೆರವು ನೀಡಿದ್ದಾರೆ.

ಚಿತ್ರದ ತಾರಾಗಣದಲ್ಲಿ ಅವಿನಾಶ್, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ ಪಾಣಾಜೆ, ಸೂರಜ್ ಪಾಪ್ಸ್ ಮತ್ತು ಸುನಿಲ್ ಕುಮಾರ್ ಇದ್ದಾರೆ. ಎನ್‌ಎಂಕೆ ಸಿನಿಮಾಸ್ ಪ್ರೋತ್ಸಾಹದೊಂದಿಗೆ ಎನ್‌ಎಂ ಕಾಂತರಾಜ್ ನಿರ್ಮಿಸಿರುವ 'ಫಾರೆಸ್ಟ್‌' ಚಿತ್ರಕ್ಕೆ ಧರ್ಮವಿಶ್ ಅವರ ಸಂಗೀತ, ಆನಂದ್ ರಾಜ ವಿಕ್ರಮ್ ಅವರ ಹಿನ್ನೆಲೆ ಸಂಗೀತ, ರವಿಕುಮಾರ್ ಅವರ ಛಾಯಾಗ್ರಹಣ ಮತ್ತು ರವಿವರ್ಮ ಅವರ ಸಾಹಸ ನೃತ್ಯ ಸಂಯೋಜನೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Op Sindoor: ಮಸೂದ್ ಅಜಾರ್ ಕುಟುಂಬ ಹೇಗೆ ಛಿದ್ರಗೊಂಡಿದೆ ಅನ್ನೋದಕ್ಕೆ ಈ Video ಸಾಕ್ಷಿ! JeM ಕಮಾಂಡರ್ ಹೇಳಿದ್ದು ಏನು?

Yusuf Pathan 'ಭೂಗಳ್ಳ': ಸೆಲೆಬ್ರಿಟಿ ಆದರೇನು ಕ್ರಮಕೈಗೊಳ್ಳಿ; ಗುಜರಾತ್ ಹೈಕೋರ್ಟ್‌ನ ಮಹತ್ವದ ತೀರ್ಪು

Kothalavadi : ನಿರ್ಮಾಪಕಿ ರಾಕಿಂಗ್ ಸ್ಟಾರ್ 'ಯಶ್ ತಾಯಿ' ಪುಷ್ಪ ವಿರುದ್ಧ ಸಂಭಾವನೆ ನೀಡದ ಆರೋಪ!

BJP ಅಧಿಕಾರದಲ್ಲಿರಲು ಧರ್ಮ ರಾಜಕಾರಣ ಮಾಡುತ್ತೆ, Rahul Gandhi ಒಳ್ಳೆಯ ವ್ಯಕ್ತಿ: Shahid Afridi

ಸುಪ್ರೀಂ ಕೋರ್ಟ್ ವಂತಾರಾದಂತೆ ಎಲ್ಲಾ ಪ್ರಕರಣ ಇಷ್ಟು ಬೇಗ ಇತ್ಯರ್ಥಪಡಿಸಿದರೆ...: ಜೈರಾಮ್ ರಮೇಶ್

SCROLL FOR NEXT