ಸಂಜು ವೆಡ್ಸ್ ಗೀತಾ 2 online desk
ಸಿನಿಮಾ ಸುದ್ದಿ

Sanju Weds Geetha 2 release date ನಿಗದಿ: ದಿನಾಂಕ ಯಾವುದೆಂದರೆ...

ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸಿದ್ದು, 2011 ರಲ್ಲಿ ಬಿಡುಗಡೆಯಾದ ಸಂಜು ವೆಡ್ಸ್ ಗೀತಾ ಸಿನಿಮಾದ ಸೀಕ್ವೆಲ್ ಇದಾಗಿದೆ.

ದೀರ್ಘಾವಧಿಯ ವಿಳಂಬದ ಬಳಿಕ ಕೊನೆಗೂ ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯ ದಿನಾಂಕ ನಿಗದಿಯಾಗಿದೆ.

ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ನಾಗಶೇಖರ್ ನಿರ್ದೇಶಿಸಿದ್ದು, 2011 ರಲ್ಲಿ ಬಿಡುಗಡೆಯಾದ ಸಂಜು ವೆಡ್ಸ್ ಗೀತಾ ಸಿನಿಮಾದ ಸೀಕ್ವೆಲ್ ಇದಾಗಿದೆ.

ಶ್ರೀನಗರ ಕಿಟ್ಟಿ ನಾಯಕ ನಟನಾಗಿದ್ದರೆ, ಸೀಕ್ವೆಲ್ ಸಿನಿಮಾದಲ್ಲಿ ರಚಿತಾರಾಮ್ ನಾಯಕಿಯಾಗಿದ್ದಾರೆ. ಶರಣ್, ಅದಿತಿ ಪ್ರಭುದೇವ ಮತ್ತು ಮೇಘನಾ ಗಾಂವ್ಕರ್ ನಟಿಸಿದ ಕನ್ನಡದ ಹಾರರ್ ಎಂಟರ್ಟೈನರ್ ಚೂಮಂತರ್ ಸೇರಿದಂತೆ ಇತರ ಪ್ರಮುಖ ಸಿನಿಮಾಗಳ ಜೊತೆಗೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಬಿಡುಗಡೆಯಾಗುತ್ತಿದೆ. ರಾಮ್ ಚರಣ್ ಅವರ ಗೇಮ್ ಚೇಂಜರ್ ಮತ್ತು ಇತರ ಕೆಲವು ಚಿತ್ರಗಳು ಸಹ ಅದೇ ಸಮಯದಲ್ಲಿ ತೆರೆಗೆ ಬರಲು ಸಿದ್ಧವಾಗಿವೆ.

ಸಂಜು ವೆಡ್ಸ್ ಗೀತಾ ಸಿನಿಮಾ ಕುರಿತ ನಿರೀಕ್ಷೆ ಹೆಚ್ಚಾಗಿದ್ದು, ಫ್ರ್ಯಾಂಚೈಸ್‌ಗೆ ಹೊಸ ಗುರುತನ್ನು ತಂದುಕೊಟ್ಟಿದ್ದಾರೆ. ಚಿತ್ರದ ಪ್ರಮುಖ ಭಾಗಗಳನ್ನು ಸ್ವಿಟ್ಜರ್ಲೆಂಡ್‌ನ ಸುಂದರವಾದ ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಭವ್ಯತೆ ಮತ್ತು ಭಾವನಾತ್ಮಕ ಆಳವನ್ನು ಸಂಯೋಜಿಸುವ ಚಿತ್ರವನ್ನು ಚಲಪತಿ ಕುಮಾರ್ ಅವರು ನಾಗಶೇಖರ್ ಮೂವೀಸ್, ಪವಿತ್ರಾ ಇಂಟರ್ನ್ಯಾಷನಲ್ ಮೂವೀಸ್ ಮತ್ತು ಮಹಾನಂದಿ ಕ್ರಿಯೇಷನ್ಸ್ ಸಹಯೋಗದೊಂದಿಗೆ ನಿರ್ಮಿಸಿದ್ದಾರೆ.

ತಾರಾಗಣದಲ್ಲಿ ಸಾಧು ಕೋಕಿಲ ಮತ್ತು ರಂಗಾಯಣ ರಘು ಅವರು ಗಮನಾರ್ಹ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಗಿಣಿ ದ್ವಿವೇದಿ ವಿಶೇಷ ಹಾಡಿನೊಂದಿಗೆ ಗ್ಲಾಮರ್ ನ್ನು ಸೇರಿಸಿದ್ದಾರೆ. ಆರ್ ಶ್ರೀಧರ್ ಮತ್ತು ವಿ ಸಂಭ್ರಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಚಿತ್ರ ಜನವರಿ 10 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

Aligarh Businessman Murder: ಹಿಂದೂ ಮಹಾಸಭಾ ನಾಯಕಿ ಪೂಜಾ ಶಕುನ್ ಪಾಂಡೆ ಬಂಧನ! ಉದ್ಯಮಿಗೆ ಲೈಂಗಿಕ ಕಿರುಕುಳ ನೀಡಿದ್ರಾ?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT