ಪ್ರಣಾಮ್ ದೇವರಾಜ್ ಅಭಿನಯದ S/o ಮುತ್ತಣ್ಣ 49 ದಿನಗಳ ಶೆಡ್ಯೂಲ್ ನಂತರ ಯಶಸ್ವಿಯಾಗಿ ಶೂಟಿಂಗ್ ಪೂರ್ಣಗೊಳಿಸಿದೆ. ಚಿತ್ರದ ಮುಕ್ತಾಯವನ್ನು ಸಾಂಪ್ರದಾಯಿಕ ಸಮಾರಂಭದೊಂದಿಗೆ ಕುಂಬಳಕಾಯಿ ಒಡೆಯುವ ಕಾರ್ಯಕ್ರಮದ ಮೂಲಕ ಪೂರ್ಣಗೊಳಿಸಲಾಯಿತು.
ಈ ವೇಳೆ ಪ್ರಣಾಮ್ ಅವರ ತಂದೆ ಹಾಗೂ ಹಿರಿಯ ನಟ ದೇವರಾಜ್ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು. ಶ್ರೀಕಾಂತ್ ಹುಣಸೂರ್ ನಿರ್ದೇಶನದ, S/o ಮುತ್ತಣ್ಣ ತಂದೆ ಮತ್ತು ಮಗನ ನಡುವಿನ ನಿಕಟವಾದ ಸಂಬಂಧದ ಬಗ್ಗೆ ತಿಳಿಸುತ್ತದೆ.
ಇಂದು ಸಂತೋಷ ಮತ್ತು ಸ್ವಲ್ಪ ದುಃಖದ ದಿನ, ನನ್ನ ಶೂಟಿಂಗ್ ಮುಗಿದಿದೆ, ಆದರೆ ನಾನು ದೈನಂದಿನ ಒಡನಾಟವನ್ನು ಕಳೆದುಕೊಳ್ಳುತ್ತೇನೆ. ಈ ಪ್ರಯಾಣವು ಭಾವನಾತ್ಮಕ ಮತ್ತು ಸಂತೋಷದಾಯಕವಾಗಿತ್ತು. ಈ ಚಿತ್ರವು ತಂದೆ ಮತ್ತು ಮಗನ ನಡುವಿನ ಬಾಂಧವ್ಯವನ್ನು ಸುಂದರವಾಗಿ ಚಿತ್ರಿಸುತ್ತದೆ, ನಮ್ಮ ಅಪ್ಪ ಮಗನ ಬಾಂಧವ್ಯ ಹೇಗಿದೆ ಅಂತಾ ಗೊತ್ತಿದೆ, ರಘು ಸರ್ ಸೆಟ್ ನಲ್ಲಿ ನನಗೆ ತಂದೆ ತರ ಇದ್ದರು. ಇವರಿಂದ ಸಾಕಷ್ಟು ಕಲಿತ್ತಿದ್ದೇನೆ. ಖುಷಿ ಅದ್ಭುತ ನಟಿ. ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿದ್ದಾರೆ. ಪುರಾತನ ಫಿಲ್ಮ್ ಈ ರೀತಿ ಅವಕಾಶ ಕೊಟ್ಟಿರುವುದಕ್ಕೆ ಧನ್ಯವಾದ ಎಂದು ಚಿತ್ರೀಕರಣದ ಕೊನೆಯ ದಿನ ಪ್ರಣಮ್ ತಿಳಿಸಿದ್ದಾರೆ.
ನಾಯಕಿ ಖುಷಿ ರವಿ ಮಾತನಾಡಿ, ಶೂಟ್ ಮುಗಿಸಿ, ದೃಷ್ಟಿ ತೆಗೆದು ಕುಂಬಳಕಾಯಿ ಹೊಡೆಯೋದನ್ನು ನೋಡಿದ್ದೇವೆ. ಆದರೆ ಪುರಾತನ ಫಿಲ್ಮಂಸ್ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ. 49 ದಿನ ಜರ್ನಿಯಲ್ಲಿಯೂ ಯಾವುದೇ ರೀತಿ ಕೊರತೆ ಇಲ್ಲದ ರೀತಿ ನೋಡಿಕೊಂಡಿದ್ದಾರೆ. ಹರೀಶ್ ಸರ್ ಗೆ ಧನ್ಯವಾದ. ನಿರ್ದೇಶಕ ಶ್ರೀಕಾಂತ್ ಸರ್ ತುಂಬಾ ಕ್ಲಾರಿಟಿ ಇದೆ. ಈ ಜನರೇಷನ್ ಗೆ ಅಪ್ಪ-ಮಗ, ಅಪ್ಪ-ಮಗಳು, ಸ್ನೇಹ ಎಲ್ಲಾ ಎಮೋಷನ್ ಸಿನಿಮಾದಲ್ಲಿ ತೋರಿಸಿದ್ದಾರೆ. ಸಾಂಗ್ ಸಚಿನ್ ಬಸ್ರೂರ್ ಅದ್ಭುತವಾಗಿ ಕಂಪೋಸ್ ಮಾಡಿದ್ದಾರೆ. ಧನು ಮಾಸ್ಟರ್ ಅದ್ಭುತವಾಗಿ ನನ್ನ ಕೈಯಿಂದ ಡ್ಯಾನ್ಸ್ ಮಾಡಿಸಿದ್ದಾರೆ. ಕೃಷ್ಣಣ್ಣ ನಮ್ಮನ್ನು ತುಂಬಾ ಚೆನ್ನಾಗಿ ಕ್ಯಾಪ್ಟರ್ ಮಾಡಿದ್ದಾರೆ ಎಂದರು.
ಈಗ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರವು ಪೋಸ್ಟ್-ಪ್ರೊಡಕ್ಷನ್‌ಗೆ ಸಾಗುತ್ತಿದೆ, ಸಚಿನ್ ಬಸ್ರೂರ್ ಅವರ ಸಂಗೀತದೊಂದಿಗೆ ಚಿತ್ರತಂಡವು ಬಿಡುಗಡೆಗೆ ಸರಿಯಾದ ದಿನಾಂಕ ಹುಡುಕುತ್ತಿದೆ.